Yashasvi Jaiswal: ಇರಾನಿ ಕಪ್‌ನಲ್ಲಿ ಡಬಲ್ ಧಮಾಕ,15 ಪಂದ್ಯಗಳಲ್ಲಿ 9 ಶತಕ, 3 ದ್ವಿಶತಕ; ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾನೆ ಪಾನಿಪುರಿ ಹುಡುಗ

ಗ್ವಾಲಿಯರ್: Yashasvi Jaiswal : ಆತ ಕೆಲ ವರ್ಷಗಳ ಹಿಂದೆ ಮುಂಬೈನ ಬೀದಿಗಳಲ್ಲಿ ಪಾನಿಪುರಿ ಮಾರುತ್ತಿದ್ದ ಹುಡುಗ. ಬೆಳಗ್ಗೆಯಿಂದ ಸಂಜೆಯವರೆಗೆ ಕ್ರಿಕೆಟ್ ಪ್ರಾಕ್ಟೀಸ್. ಸೂರ್ಯ ಮುಳುಗಿದ ಮೇಲೆ ಹೊಟ್ಟೆಪಾಡಿಗಾಗಿ ಪಾನಿಪುರಿ ಮಾರುವ ಕಾಯಕ. ರಸ್ತೆ ಬದಿಯಲ್ಲೇ ನಿದ್ದೆ. ಅದೇ ಹುಡುಗನೀಗ ಇರಾನಿ ಕಪ್ ಫೈನಲ್’ನಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿ ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾನೆ. ಇದು ಮುಂಬೈನ ಯುವ ಎಡಗೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಅವರ ಯಶೋಗಾಥೆ.

ಗ್ವಾಲಿಯರ್’ನ ಕ್ಯಾಪ್ಟನ್ ರೂಪ್ ಸಿಂಗ್ ಕ್ರೀಡಾಂಗಣದಲ್ಲಿ 2021-22ರ ರಣಜಿ ಚಾಂಪಿಯನ್ ಮಧ್ಯಪ್ರದೇಶ ವಿರುದ್ಧ ನಡೆಯುತ್ತಿರುವ ಇರಾನಿ ಕಪ್ (Irani Cup 2023) ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಒಟ್ಟು 357 ರನ್ ಕಲೆ ಹಾಕಿದ್ದಾರೆ. ಪ್ರಥಮ ಇನ್ನಿಂಗ್ಸ್’ನಲ್ಲಿ 259 ಎಸೆತಗಳಲ್ಲಿ ಅಮೋಘ 213 ರನ್ ಸಿಡಿಸಿದ್ದ ಜೈಸ್ವಾಲ್, ದ್ವಿತೀಯ ಇನ್ನಿಂಗ್ಸ್’ನಲ್ಲೂ ಅಬ್ಬರಿಸಿ 157 ಎಸೆತಗಳಲ್ಲಿ ಸ್ಫೋಟಕ 144 ರನ್ ಬಾರಿಸಿದ್ದಾರೆ.

ಜೈಸ್ವಾಲ್ ಅವರ ಶತಕದ ನೆರವಿನಿಂದ 2ನೇ ಇನ್ನಿಂಗ್ಸ್’ನಲ್ಲಿ 246 ರನ್ ಗಳಿಸಿರುವ ರೆಸ್ಟ್ ಆಫ್ ಇಂಡಿಯಾ, ಗೆಲುವಿಗಾಗಿ ಮಧ್ಯಪ್ರದೇಶಕ್ಕೆ 437 ರನ್’ಗಳ ಗುರಿಯೊಡ್ಡಿದ್ದು, ಮಧ್ಯಪ್ರದೇಶ ತಂಡ 4ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ.

21 ವರ್ಷದ ಯಶಸ್ವಿ ಜೈಸ್ವಾಲ್ ವೃತ್ತಿಜೀವನದ 15ನೇ ಪ್ರಥಮದರ್ಜೆ ಪಂದ್ಯವಾಡುತ್ತಿದ್ದು, ಈಗಾಗಲೇ 9 ಶತಕಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 3 ದ್ವಿಶತಕಗಳು ಸೇರಿವೆ.

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಯಶಸ್ವಿ ಜೈಸ್ವಾಲ್ ಬಾರಿಸಿದ ಶತಕಗಳು:

213, 144
ಇರಾನಿ ಕಪ್ 2023

162
ರಣಜಿ ಟ್ರೋಫಿ 2022-23

146
ಭಾರತ ಎ ತಂಡದ ಬಾಂಗ್ಲಾದೇಶ ಪ್ರವಾಸ

265
ದುಲೀಪ್ ಟ್ರೋಫಿ ಫೈನಲ್ 2022

228
ದುಲೀಪ್ ಟ್ರೋಫಿ 2022

100, 181, 103
ರಣಜಿ ಟ್ರೋಫಿ 2021-22


ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುವ ಯಶಸ್ವಿ ಜೈಸ್ವಾಲ್, 2020ರ ಐಸಿಸಿ ಅಂಡರ್-19 ವಿಶ್ವಕಪ್’ನಲ್ಲಿ ರನ್ನರ್ಸ್ ಅಪ್ ಸ್ಥಾನ ಪಡೆದ ಭಾರತ ತಂಡದಲ್ಲಿದ್ದರು.

ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಯಶಸ್ವಿ ಜೈಸ್ವಾಲ್ ಸಾಧನೆ
ಪಂದ್ಯ: 15
ಇನ್ನಿಂಗ್ಸ್: 26
ರನ್: 1,845
ಶತಕ: 09
ಅರ್ಧಶತಕ: 02
ಸರಾಸರಿ: 80.22

ಇದನ್ನೂ ಓದಿ : WPL 2023 : ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭ, ತಂಡಗಳ ಬಲಾಬಲ, ವೇಳಾಪಟ್ಟಿ, ನೇರಪ್ರಸಾರ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : ಸಾಮಾನ್ಯರಂತೆ ಉಜ್ಜಯನಿ ಮಹಾಕಾಲೇಶ್ವರ ದರ್ಶನ ಪಡೆದ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

Comments are closed.