Jasprit Bumrah: ದೇಶಕ್ಕಿಂತ ದುಡ್ಡೇ ಮುಖ್ಯ: ಶ್ರೀಲಂಕಾ, ಕಿವೀಸ್ ವಿರುದ್ಧದ ಸರಣಿಯಿಂದ ಔಟ್, ಐಪಿಎಲ್‌ಗೆ ರೆಡಿಯಾಗ್ತಿದ್ದಾರೆ ಜಸ್‌ಪ್ರೀತ್ ಬುಮ್ರಾ

ಬೆಂಗಳೂರು: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ (india Vs New Zealand ODI series) ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಬೇಕಿದ್ದ ಪ್ರೀಮಿಯಮ್ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah), ಲಂಕಾ ಸರಣಿಯಲ್ಲಿ ಆಡುತ್ತಿಲ್ಲ. ಅಷ್ಟೇ ಅಲ್ಲ, ಜನವರಿ 18ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ (India Vs New Zeeland ODI series) ಬುಮ್ರಾ ಆಡುತ್ತಿಲ್ಲ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬುಮ್ರಾ ಅವರನ್ನು ಇದ್ದಕ್ಕಿದ್ದಂತೆ ಆಯ್ಕೆ ಮಾಡಿದ್ದ ಬಿಸಿಸಿಐ (BCCI) ಈಗ ಮತ್ತೊಂದು ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ಬುಮ್ರಾ ಲಂಕಾ ವಿರುದ್ಧದ ಸರಣಿಯಷ್ಟೇ ಅಲ್ಲ, ಕಿವೀಸ್ ವಿರುದ್ಧದ ಸರಣಿಯಲ್ಲೂ ಆಡುತ್ತಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಬಿಸಿಸಿಐನ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship – WTC) ಮತ್ತು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು (ICC World Cup 2023) ಗಮನದಲ್ಲಿಟ್ಟುಕೊಂಡು ಕೆಲ ಸರಣಿಗಳಿಂದ ಬುಮ್ರಾ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ (india Vs New Zealand ODI series), ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ ಎನ್ನುವುದಾದರೆ ಅದು ಒಳ್ಳೆಯ ಬೆಳವಣಿಗೆಯೇ. ಹಾಗಾದ್ರೆ ಇದೇ ರೀತಿ ಬುಮ್ರಾ ಐಪಿಎಲ್’ನಿಂದಲೂ ಹೊರಗುಳಿಯಲಿದ್ದಾರಾ? ಐಪಿಎಲ್ ನಂತರ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮೊದಲು ಗಾಯದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬುಮ್ರಾ ಐಪಿಎಲ್’ ನಿಂದಲೂ ಹೊರಗುಳಿಯಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಿಂದ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಬಯಸಿದ್ದಾರೆ. ಪ್ರಮುಖ ಟೂರ್ನಿಗಳಿಗೂ ಮುನ್ನ ಒಂದಷ್ಟು ವಿಶ್ರಾಂತಿ ಪಡೆಯುವುದು ಇದರ ಹಿಂದಿನ ಉದ್ದೇಶ. ಹಾಗಾದ್ರೆ ಇದೇ ಲಾಜಿಕ್ ಐಪಿಎಲ್’ಗೂ ಅನ್ವಯವಾಗಲಿದ್ಯಾ? ಆ ಸಾಧ್ಯತೆಗಳು ಕಡಿಮೆ. ಯಾಕಂದ್ರೆ ಐಪಿಎಲ್ ಚಿನ್ನದ ಮೊಟ್ಟೆ ಇಡುವ ಕೋಳಿ. ಕೋಟಿ ಕೋಟಿ ದುಡ್ಡು ಹರಿಯುವ ಟೂರ್ನಿ. ಹೀಗಾಗಿ ಐಪಿಎಲ್’ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿಯುವ ಸಾಧ್ಯತೆ ಕಡಿಮೆ. 29 ವರ್ಷದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಕಳೆದ ವರ್ಷದ ಸೆಪ್ಟೆಂಬರ್ ನಂತರ ಟೀಮ್ ಇಂಡಿಯಾ ಜರ್ಸಿಯಲ್ಲಿ ಕಾಣಿಸಿಕೊಂಡಿಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಈಗಷ್ಟೇ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ ; Exclusive: Ravindra Jadeja fitness test : ರವೀಂದ್ರ ಜಡೇಜಗೆ ಇಂದು Yo-Y0, ಡೆಕ್ಸಾ ಟೆಸ್ಟ್, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಟೀಮ್ ಇಂಡಿಯಾ ಕಂಬ್ಯಾಕ್

ಇದನ್ನೂ ಓದಿ : “ಅದೊಂದು” ದೊಡ್ಡ ಮೈಲುಗಲ್ಲು ಸ್ಥಾಪಿಸಲಿದ್ದಾರೆ ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್

English News Click Here

Jasprit Bumrah Ruled Out Sri Lanka and new zealand Series out ready for IPL

Comments are closed.