Jhulan Goswami : 20 ವರ್ಷಗಳ ಆಟ.. 2,260 ಓವರ್.. 353 ವಿಕೆಟ್.. ಮಹೋನ್ನತ ಕರಿಯರ್‌ಗೆ ಚಕ್ಡಾ ಎಕ್ಸ್‌ಪ್ರೆಸ್ ವಿದಾಯ


ಲಾರ್ಡ್ಸ್: 20 ವರ್ಷಗಳ ಅಂತಾರಾಷ್ಟ್ರೀ ಕ್ರಿಕೆಟ್ ಕರಿಯರ್, 2,260 ಓವರ್’ಗಳು, 353 ವಿಕೆಟ್’ಗಳು, ಮಹಿಳಾ ವಿಶ್ವಕಪ್’ನಲ್ಲಿ ಅತೀ ಹೆಚ್ಚು ವಿಕೆಟ್’ಗಳ ದಾಖಲೆ.. ಚಕ್ಡಾ ಎಕ್ಸ್’ಪ್ರೆಸ್(Chakda Express)ಖ್ಯಾತಿಯ ಜೂಲನ್ ಗೋಸ್ವಾಮಿ (Jhulan Goswami) ತಮ್ಮ ಮಹೋನ್ನತ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

ಶನಿವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 3ನೇ ಏಕದಿನ ಪಂದ್ಯದ ಮೂಲಕ ಜೂಲನ್ ಗೋಸ್ವಾಮಿ (Jhulan Goswami)ಕ್ರಿಕೆಟ್’ಗೆ ಗುಡ್ ಬೈ ಹೇಳಿದರು. ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ ಮಹಿಳಾ ತಂಡ, ದಿಗ್ಗಜ ಆಟಗಾರ್ತಿಗೆ ಸಂಭ್ರಮದ ವಿದಾಯ ಹೇಳಿತು. ಗೋಸ್ವಾಮಿ ಅವರ ವಿದಾಯದ ಕ್ಷಣ ಭಾರತ ತಂಡದ ನಾಯಕಿ ಹರ್ಮನ್’ಪ್ರೀತ್ ಕೌರ್ ಗೋಸ್ವಾಮಿ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟರು.

ಜೂಲನ್ ಗೋಸ್ವಾಮಿ ಕೊನೆಯ ಬಾರಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಾಗ ಎದುರಾಳಿ ಇಂಗ್ಲೆಂಡ್ ತಂಡದ ಆಟಗಾರ್ತಿಯರು ಸಾಲಾಗಿ ನಿಂತು ದಿಗ್ಗಜ ಆಟಗಾರ್ತಿಗೆ ಗೌರವ ಸಲ್ಲಿಸಿದರು.

2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 40 ವರ್ಷದ ಜೂಲನ್ ಗೋಸ್ವಾಮಿ, ವೃತ್ತಿಜೀವನದಲ್ಲಿ 12 ಟೆಸ್ಟ್, 204 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದಾರೆ. ಚಕ್ಡಾ ಎಕ್ಸ್’ಪ್ರೆಸ್ ಖ್ಯಾತಿಯ ಜೂಲನ್ ಗೋಸ್ವಾಮಿ ಅವರ ನಿವೃತ್ತಿ ಜೀವನಕ್ಕೆ ಇಡೀ ಕ್ರಿಕೆಟ್ ಜಗತ್ತು ಶುಭ ಹಾರೈಸಿದೆ.

ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಸಿನಿಮಾ ಆಗುತ್ತಿದ್ದು, ಸಿನಿಮಾದ ಹೆಸರು(Chakda Express) “ಚಕ್ಡಾ ಎಕ್ಸ್‌ಪ್ರೆಸ್”. ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿಯವರ ಪತ್ನಿ ಅನುಷ್ಕಾ ಶರ್ಮಾ “ಚಕ್ಡಾ ಎಕ್ಸ್‌ಪ್ರೆಸ್”(Chakda Express)ನಲ್ಲಿ ಗೋಸ್ವಾಮಿ ಅವರ ಪಾತ್ರ ಮಾಡುತ್ತಿದ್ದು, ಚಿತ್ರದ ಶೂಟಿಂಗ್ ನಡೆಯುತ್ತಿದೆ.
https://twitter.com/KKRiders/status/1573614252195483648?s=20&t=6p29TNCQkn8zsXlnqAoGmA

ಜೂಲನ್ ಗೋಸ್ವಾಮಿ ಅವರ ದಾಖಲೆಗಳು:

  • 353: ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ಸ್
  • 253: ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ವಿಕೆಟ್ಸ್
  • 43: ಮಹಿಳಾ ವಿಶ್ವಕಪ್’ನಲ್ಲಿ ಅತೀ ಹೆಚ್ಚು ವಿಕೆಟ್ಸ್
  • 2260.2: ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಓವರ್ಸ್
  • 6/31: ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 3ನೇ ಬೆಸ್ಟ್ ಬೌಲಿಂಗ್ ಸಾಧನೆ (Vs ನ್ಯೂಜಿಲೆಂಡ್ 2011)
  • 44: ಭಾರತ ಪರ 12 ಟೆಸ್ಟ್ ಪಂದ್ಯಗಳಲ್ಲಿ ಪಡೆದ ವಿಕೆಟ್ಸ್
  • 204: ಮಹಿಳಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 2ನೇ ಅತೀ ಹೆಚ್ಚು ಪಂದ್ಯಗಳು
  • 20 ವರ್ಷ, 261 ದಿನ: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 2ನೇ ಸುದೀರ್ಘ ವೃತ್ತಿಜೀವನ
  • 2007: ಐಸಿಸಿ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ
  • 02: ಎರಡು ಬಾರಿ ಐಸಿಸಿ ವಿಶ್ವಕಪ್’ನಲ್ಲಿ ರನ್ನರ್ಸ್ ಅಪ್ (2005, 2017)
  • 03: ಮೂರು ಬಾರಿಯ ಏಷ್ಯಾ ಕಪ್ ವಿಜೇತ ತಂಡದ ಸದಸ್ಯೆ

ಇದನ್ನೂ ಓದಿ : ಹೃದಯವಂತ ರಾಹುಲ್ ದ್ರಾವಿಡ್.. “ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಇಷ್ಟವಾಗೋದು ಇದೇ ಕಾರಣಕ್ಕೆ

ಇದನ್ನೂ ಓದಿ : ಪಿಚ್ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ, ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಇದೆಂಥಾ ದುರ್ಗತಿ..?

ಇದನ್ನೂ ಓದಿ : ಟೀಮ್ ಇಂಡಿಯಾ ಫಿನಿಷರ್ ದಿನೇಶ್ ಕಾರ್ತಿಕ್‌ಗೆ ಹೊಸ ಬಿರುದು

Jhulan Goswami of Chakda Express fame bid farewell to his illustrious cricket career.

Comments are closed.