Jr. Ponting meets Virat Kohli : ಜ್ಯೂನಿಯರ್ ಪಾಂಟಿಂಗ್‌ನನ್ನು ಭೇಟಿ ಮಾಡಿದ ಕಿಂಗ್ ಕೊಹ್ಲಿ, ಇಲ್ಲಿದೆ ಕ್ಯೂಟ್ ವೀಡಿಯೊ

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರಿಗೆ ಯಾರು ತಾನೇ ಫ್ಯಾನ್ ಅಲ್ಲ ಹೇಳಿ..? ವಿರಾಟ್ ಕೊಹ್ಲಿ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದು. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಕಿಂಗ್ ಕೊಹ್ಲಿ ಆಟಕ್ಕೆ ಅಭಿಮಾನಿಗಳೇ. ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ನಾಯಕ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ (Jr. Ponting meets Virat Kohli) ಅವರ ಮಗನೂ (Ricky Ponting son) ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಜೊತೆ ಅವರ ಕುಟುಂಬ ಸದಸ್ಯರೂ ಬೆಂಗಳೂರಿಗೆ ಬಂದಿದ್ದಾರೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಅಭ್ಯಾಸ ನಡೆಸಿದವು. ಈ ವೇಳೆ ರಿಕಿ ಪಾಂಟಿಂಗ್ ಜೊತೆ ಆಗಮಿಸಿದ ಅವರ ಪುತ್ರ, ಕಿಂಗ್ ಕೊಹ್ಲಿ ಅವರನ್ನು ಭೇಟಿ ಮಾಡಿದರು. ಈ ಕ್ಯೂಟ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್’ಸಿಬಿ ತಂಡ ಶನಿವಾರ (ಏಪ್ರಿಲ್ 15) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದೆ. ಇದಾದ 2 ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದ್ದು, ಈ ಮೆಗಾ ಫೈಟನ್ನು ಕ್ರಿಕೆಟ್ ಪ್ರಿಯರು ಕಾತರದಿಂದ ಎದುರು ನೋಡುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಾಲಿನಲ್ಲಿ ಆಡಿರುವ 2 ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಏಪ್ರಿಲ್ 2ರಂದು ನಡೆದಿದ್ದ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಆರ್’ಸಿಬಿ, ಏಪ್ರಿಲ್ 10ರಂದು ನಡೆದಿದ್ದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 1 ವಿಕೆಟ್ ಅಂತರದಲ್ಲಿ ಸೋಲು ಕಂಡಿತ್ತು.

ಇದನ್ನೂ ಓದಿ : ಐಪಿಎಲ್ ಟೂರ್ನಿಯನ್ನು “ಶ್ರೀಮಂತ ಸಿಂಹಾಸನ”ದಿಂದ ಕೆಳಗಿಳಿಸಲು ಸೌದಿ ಅರೇಬಿಯಾ ಮಾಸ್ಟರ್ ಪ್ಲಾನ್

ಇದನ್ನೂ ಓದಿ : ಧೋನಿ ಬ್ಯಾಟಿಂಗ್ ವೇಳೆ 2.2 ಕೋಟಿ ವೀವ್ಸ್ : ದಾಖಲೆ ಬರೆದ ಕ್ಯಾಪ್ಟನ್ ಕೂಲ್

ಐಪಿಎಲ್-2023: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್’ಸಿಬಿ ಆಡಲಿರುವ ಪಂದ್ಯಗಳು

  • ಆರ್’ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ (ಏಪ್ರಿಲ್ 15)
  • ಆರ್’ಸಿಬಿ Vs ಚೆನ್ನೈ ಸೂಪರ್ ಕಿಂಗ್ಸ್ (ಏಪ್ರಿಲ್ 17)
  • ಆರ್’ಸಿಬಿ Vs ರಾಜಸ್ಥಾನ್ ರಾಯಲ್ಸ್ (ಏಪ್ರಿಲ್ 23)
  • ಆರ್’ಸಿಬಿ Vs ಕೋಲ್ಕತಾ ನೈಟ್ ರೈಡರ್ಸ್ (ಏಪ್ರಿಲ್ 26)
  • ಆರ್’ಸಿಬಿ Vs ಗುಜರಾತ್ ಟೈಟನ್ಸ್ (ಮೇ 21)

Jr. Ponting meets Virat Kohli: King Kohli meets Junior Ponting, here is a cute video

Comments are closed.