ಕನ್ನಡಿಗ ಸುನಿಲ್ ಜೋಶಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಆಯ್ಕೆ

ಬೆಂಗಳೂರು: ಕರ್ನಾಟಕದ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ (Sunil Joshi), ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ (Punjab Kings team) ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜೋಶಿ ಅವರ ನೇಮಕವನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಟ್ವಿಟರ್’ನಲ್ಲಿ ಪ್ರಕಟಿಸಿದೆ.

ಮತ್ತೊಬ್ಬ ಕನ್ನಡಿಗ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಆಗಿದ್ದಾಗ ಸುನಿಲ್ ಜೋಶಿ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ನಂತರ ಸುನಿಲ್ ಜೋಶಿ 2019ರಲ್ಲಿ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದ ಕಾರಣ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಹುದ್ದೆ ತೊರೆದಿದ್ದರು. 2020ರಲ್ಲಿ ಸುನಿಲ್ ಜೋಶಿ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರೂ ಆಗಿದ್ದರು.

ಬಿಸಿಸಿಐ ಆಯ್ಕೆ ಸಮಿತಿಯಲ್ಲಿ 3 ವರ್ಷ ಪೂರ್ತಿಗೊಳಿಸಿರುವ ಸುನಿಲ್ ಜೋಶಿ, ಇದೀಗ ಮತ್ತೆ ಪಂಜಾಬ್ ಫ್ರಾಂಚೈಸಿ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಕೋಚ್ ಟ್ರೆವೋರ್ ಬೇಲಿಸ್ ಪಂಜಾಬ್ ಕಿಂಗ್ಸ್’ನ ಹೆಡ್ ಕೋಚ್ ಆಗಿದ್ರೆ, ಮುಂಬೈನ ದಿಗ್ಗಜ ಬ್ಯಾಟ್ಸ್’ಮನ್ ವಸೀಮ್ ಜಾಫರ್ ಬ್ಯಾಟಿಂಗ್ ಕೋಚ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಚಾರ್ಲ್ಸ್ ಲ್ಯಾಂಗ್’ವೆಲ್ತ್ ಫಾಸ್ಟ್ ಬೌಲಿಂಗ್ ಕೋಚ್ ಆಗಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಗದಗದವರಾದ 52 ವರ್ಷದ ಎಡಗೈ ಸ್ಪಿನ್ನರ್ ಸುನಿಲ್ ಜೋಶಿ 2008 ಮತ್ತು 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. 2019ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗುವ ಮುನ್ನ ಸುನಿಲ್ ಜೋಶಿ ಬಾಂಗ್ಲಾದೇಶ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ : Shreyas Iyer ruled out : ನ್ಯೂಜಿಲೆಂಡ್ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಔಟ್

ಇದನ್ನೂ ಓದಿ : Rishabh Pant First Reaction: “ನಿಮ್ಮ ಸಹಾಯವನ್ನು ಜೀವನ ಪರ್ಯಂತ ಮರೆಯಲ್ಲ” ಪ್ರಾಣ ಕಾಪಾಡಿದ ಹುಡುಗರಿಗೆ ರಿಷಭ್ ಪಂತ್ ಥ್ಯಾಂಕ್ಸ್

ಇದನ್ನೂ ಓದಿ : India No1 in ODI: ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಮ್ ಇಂಡಿಯಾ ವರ್ಲ್ಡ್ ನಂ.1

ದೇಶೀಯ ಕ್ರಿಕೆಟ್’ನ ದಿಗ್ಗಜ ಸ್ಪಿನ್ನರ್ ಆಗಿರುವ ಸುನಿಲ್ ಜೋಶಿ ಭಾರತ ಪರ 15 ಟೆಸ್ಟ್ ಪಂದ್ಯಗಳನ್ನಾಡಿದ್ದು, 41 ವಿಕೆಟ್ ಪಡೆದಿದ್ದಾರೆ. ಟೀಮ್ ಇಂಡಿಯಾ ಪರ 69 ಏಕದಿನ ಪಂದ್ಯಗಳನ್ನಾಡಿರುವ ಜೋಶಿ 69 ವಿಕೆಟ್ ಕಬಳಿಸಿದ್ದಾರೆ. ವೃತ್ತಿಜೀವನದಲ್ಲಿ ಒಟ್ಟು 160 ಪ್ರಥಮದರ್ಜೆ ಪಂದ್ಯಗಳಿಂದ 615 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಲಿಸ್ಟ್ ಎ ಕ್ರಿಕೆಟ್’ನಲ್ಲಿ 163 ಪಂದ್ಯಗಳಿಂದ 192 ವಿಕೆಟ್ ಪಡೆದಿದ್ದಾರೆ.

Kannadigas Sunil Joshi appointed as spin bowling coach of Punjab Kings team

Comments are closed.