ಭಾನುವಾರ, ಏಪ್ರಿಲ್ 27, 2025
HomeSportsCricketKL Rahul failed again: 4, 9, 9; ಮುಂದುವರಿದ ರಾಹುಲ್ ವೈಫಲ್ಯ, 3ನೇ ಅಗ್ನಿಪರೀಕ್ಷೆ...

KL Rahul failed again: 4, 9, 9; ಮುಂದುವರಿದ ರಾಹುಲ್ ವೈಫಲ್ಯ, 3ನೇ ಅಗ್ನಿಪರೀಕ್ಷೆ ಯಲ್ಲೂ ಸೋತ ಕನ್ನಡಿಗ

- Advertisement -

ಪರ್ತ್: ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಅದೃಷ್ಟ ಯಾಕೋ ಸರಿ ಇದ್ದಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಮೂರನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಉಪನಾಯಕ ರಾಹುಲ್ (KL Rahul failed again) ಎಡವಿದ್ದಾರೆ.

ಗ್ರೂಪ್-2ರ ಸೂಪರ್-12 ಹಂತದ ಕಳೆದೆರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ (India Vs South Africa) ಪಂದ್ಯದಲ್ಲೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಇನ್ನಿಂಗ್ಸ್’ನ ಮೊದಲ ಓವರ್’ನಲ್ಲಿ ರನ್ ಗಳಿಸಲು ವಿಫಲರಾದ ರಾಹುಲ್ ಆ ಓವರ್ ಮೇಡನ್ ಆಗಲು ಕಾರಣರಾದರು. ಇನ್ನಿಂಗ್ಸ್’ನ ಮೂರನೇ ಓವರ್’ನಲ್ಲಿ ಸಿಕ್ಸರ್ ಬಾರಿಸಿ ಖಾತೆ ತೆರೆದ ಟೀಮ್ ಇಂಡಿಯಾ ಉಪನಾಯಕ 9 ರನ್ ಗಳಿಸಿದ್ದಾಗ 5ನೇ ಓವರ್’ನ ಕೊನೆಯ ಎಸೆತದಲ್ಲಿ ವೇಗಿ ಲುಂಗಿ ಎನ್’ಗಿಡಿಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್’ನ 2ನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮಾ ಕೂಡ ಔಟಾಗಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ ಗಳಿಸಿ ಔಟಾಗಿದ್ದ ರಾಹುಲ್, ನೆದರ್ಲೆಂಡ್ಸ್ ವಿರುದ್ಧವೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿ ಕೇವಲ 9 ರನ್ನಿಗೆ ಔಟಾಗಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡದಲ್ಲಿದ್ದರು. ಆದರೆ ಕನ್ನಡಿಗ ಮತ್ತೆ ಎಡವಿದ್ದಾರೆ. ಸತತ ಮೂರು ಪಂದ್ಯಗಳಲ್ಲೂ ವಿಫಲರಾಗಿರುವ ಕಾರಣ ಮುಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ರಾಹುಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೇ ರಾಹುಲ್ ಅವರ ಬದಲು ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಅವರನ್ನು ಆಡಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ ಟೀಮ್ ಮ್ಯಾನೇಜ್ಮೆಂಟ್ ರಾಹುಲ್ ಬೆಂಬಲಕ್ಕೆ ನಿಂತಿತ್ತು. ಆದರೆ ತಂಡ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ರಾಹುಲ್ ಮತ್ತೊಮ್ಮೆ ವಿಫಲರಾಗಿದ್ದಾರೆ.

ವಾಕೈ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತನ್ನ 3ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ 5 ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ (Rohit Sharma) 15 ರನ್ ಗಳಿಸಿ ಔಟಾದ್ರೆ, ಉಪನಾಯಕ ಕೆ.ಎಲ್ ರಾಹುಲ್ (KL Rahul) 9 ರನ್ನಿಗೆ ವಿಕೆಟ್ ಒಪ್ಪಿಸಿದರು. ಇಬ್ಬರನ್ನೂ ವೇಗಿ ಲುಂಗಿ ಎನ್’ಗಿಡಿ ಪೆವಿಲಿಯನ್’ಗಟ್ಟಿದರು. ನಂತರ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ 12 ರನ್ ಗಳಿಸಿ ಎನ್’ಗಿಡಿಗೆ ವಿಕೆಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಆಲ್ರೌಂಡರ್ ದೀಪಕ್ ಹೂಡ ಶೂನ್ಯಕ್ಕೆ ಔಟಾದ್ರೆ, ಕೇವಲ 2 ರನ್ನಿಗೆ ಔಟಾದ ಮತ್ತೊಬ್ಬ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಎನ್’ಗಿಡಿಗೆ 4ನೇ ಬಲಿಯಾದರು.

ಇದನ್ನೂ ಓದಿ : Kohli reveals bonding with Rohit: ರೋಹಿತ್ ಶರ್ಮಾ ಜೊತೆಗಿನ ವಿಶೇಷ ಬಾಂಧವ್ಯದ ಗುಟ್ಟು ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : Hardik Pandya follows Dhoni strategy : ಹಾರ್ದಿಕ್ ಪಾಂಡ್ಯ ಬ್ಯಾಟಲ್ಲಿ ಧೋನಿ ಸಕ್ಸಸ್ ತಂತ್ರ, ಪವರ್ ಹಿಟ್ಟಿಂಗ್‌ಗೆ ಮಹೀ ಮಂತ್ರ ಪಾಲಿಸುತ್ತಿದ್ದಾರೆ ಆಲ್ರೌಂಡರ್

KL Rahul failed again 4 9 9 T20 World Cup IND vs SA

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular