ಭಾರತ Vs ದಕ್ಷಿಣ ಆಫ್ರಿಕಾ ಮ್ಯಾಚ್, ರೋಹಿತ್ ಔಟಾದಾಗ ಮುಗಿಲು ಮುಟ್ಟಿತು ಭಾರತೀಯ ಪ್ರೇಕ್ಷಕರ ಸಂಭ್ರಮ, ಕಾರಣವೇನು ಗೊತ್ತಾ ?

ಪರ್ತ್: Rohit Sharma : ಭಾರತ ಮತ್ತು ದಕ್ಷಿಣ ಆಫ್ರಿಕಾ (India Vs South Africa) ತಂಡಗಳ ನಡುವಿನ ಟಿ20 ವಿಶ್ವಕಪ್ (T20 World Cup) ಸೂಪರ್-12 ಪಂದ್ಯ ಪರ್ತ್’ನ ವಾಕಾ (Western Australia Cricket Association – WACA) ಮೈದಾನದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಭಾರತ 5 ಓವರ್’ಗಳ ಒಳಗೆ ಆರಂಭಿಕರಿಬ್ಬರನ್ನೂ ಕಳೆದು ಕೊಂಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) 15 ರನ್ ಗಳಿಸಿ ಔಟಾದ್ರೆ, ಉಪನಾಯಕ ಕೆ.ಎಲ್ ರಾಹುಲ್ (KL Rahul) 9 ರನ್ನಿಗೆ ವಿಕೆಟ್ ಒಪ್ಪಿಸಿದ್ದಾರೆ. ಟೀಮ್ ಇಂಡಿಯಾದ ಇಬ್ಬರೂ ಆರಂಭಿಕರನ್ನು ವೇಗಿ ಲುಂಗೀ ಎನ್’ಗಿಡಿ (Lungi Ngidi) ಒಂದೇ ಓವರ್’ನಲ್ಲಿ ಪೆವಿಲಿಯನ್’ಗಟ್ಟಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ವೀಕ್ಷಿಸಲು 70 ಸಾವಿರ ಪ್ರೇಕ್ಷಕರು ವಾಕಾ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಇದರಲ್ಲಿ 90% ಪ್ರೇಕ್ಷಕರು ಭಾರತ ತಂಡದ ಅಭಿಮಾನಿಗಳು. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಭಾರತ ತಂಡವನ್ನು ಬೆಂಬಲಿಸಲು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಔಟಾದ ಕೂಡಲೇ ಆಕಾಶ ಭೂಮಿ ಒಂದಾಗುವಂತೆ ಸದ್ದು ಮಾಡಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ರೋಹಿತ್ ಔಟಾದಾಗ ಪ್ರೇಕ್ಷಕರು ಸಂಭ್ರಮಿಸಲು ಕಾರಣವೇನು ಗೊತ್ತಾ? ಕಿಂಗ್ ಕೊಹ್ಲಿ.

ಹೌದು. ನಾಯಕ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ (Virat Kohli) ಮೈದಾನಕ್ಕಿಳಿದರು. ಕೊಹ್ಲಿ ಕ್ರೀಸ್’ಗಿಳಿಯುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ‘’ಕೊಹ್ಲಿ, ಕೊಹ್ಲಿ’’ ಎಂದು ಕೂಗುತ್ತಾ ಕಿಂಗ್ ಕೊಹ್ಲಿಗೆ ಸ್ವಾಗತ ಕೋರಿದರು. ಕಳೆದ ಎರಡೂ ಪಂದ್ಯಗಳಲ್ಲಿ (ಪಾಕಿಸ್ತಾನ ವಿರುದ್ದ ಅಜೇಯ 82, ನೆದರ್ಲೆಂಡ್ಸ್ ವಿರುದ್ದ ಅಜೇಯ 62) ಸ್ಫೋಟಕ ಅರ್ಧ ಶತಕಗಳನ್ನು ಬಾರಿಸಿದ್ದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆತ್ಮವಿಶ್ವಾಸದಿಂದಲೇ ಆಟ ಆರಂಭಿಸಿದರು. ಆದರೆ 12 ರನ್ ಗಳಿಸಿದ್ದ ವೇಳೆ ಲುಂಗಿ ಎನ್’ಗಿಡಿಗೆ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಎಡವಿ ಡೀಪ್ ಫೈನ್ ಲೆಗ್’ನಲ್ಲಿ ಕಗಿಸೊ ರಬಾಡಗೆ ಕ್ಯಾಚಿತ್ತು ಔಟಾದರು.

ಇದನ್ನೂ ಓದಿ : Kohli reveals bonding with Rohit: ರೋಹಿತ್ ಶರ್ಮಾ ಜೊತೆಗಿನ ವಿಶೇಷ ಬಾಂಧವ್ಯದ ಗುಟ್ಟು ಬಿಚ್ಚಿಟ್ಟ ಕಿಂಗ್ ಕೊಹ್ಲಿ

ಇದನ್ನೂ ಓದಿ : KL Rahul failed again: 4, 9, 9; ಮುಂದುವರಿದ ರಾಹುಲ್ ವೈಫಲ್ಯ, 3ನೇ ಅಗ್ನಿಪರೀಕ್ಷೆ ಯಲ್ಲೂ ಸೋತ ಕನ್ನಡಿಗ

T20 World Cup India Vs South Africa Rohit Sharma out celebrate Indians

Comments are closed.