ಬೆಂಗಳೂರು: (KL Rahul Fitness ) ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ರೆ ಟೀಮ್ ಇಂಡಿಯಾ (India Cricket Team) ಓಪನರ್ ಕೆ.ಎಲ್ ರಾಹುಲ್ (KL Rahul) ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ (India Vs South Africa T20 series) ಭಾರತ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಅದೇನು ದುರದೃಷ್ಟವೋ ಗೊತ್ತಿಲ್ಲ, ತೊಡೆಸಂಧು (Groin Injury) ಗಾಯಕ್ಕೊಳಗಾದ ರಾಹುಲ್ ಮೊದಲ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ಸರಣಿಯಿಂದಲೇ ಹೊರ ಬಿದ್ದಿದ್ರು.
ಗಾಯದ ಕಾರಣ ಟೀಮ್ ಇಂಡಿಯಾ ತೊರೆದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಆಗಮಿಸಿದ್ದ ರಾಹುಲ್, ಅಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಹಾಗಾದ್ರೆ ಸದ್ಯ ರಾಹುಲ್ ಗಾಯದ ಪರಿಸ್ಥಿತಿ ಹೇಗಿದೆ..? ಇಂಜ್ಯುರಿ ಅಪ್”ಡೇಟ್ ಏನು..? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕೆ.ಎಲ್ ರಾಹುಲ್”ಗೆ ಆಗಿರೋ ಗಾಯ ಗಂಭೀರ ಸ್ವರೂಪದ್ದಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು 10 ದಿನಗಳಲ್ಲಿ ರಾಹುಲ್ ಸಂಪೂರ್ಣ ಫಿಟ್ ಆಗಲಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ (India tour of England) ಪಂದ್ಯದಲ್ಲಿ ಆಡಲಿದ್ದಾರೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ಜೂನ್ 24ರಂದು ಲೀಸೆಸ್ಟರ್”ಶೈರ್ (Leicestershire) ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.
ಕಳೆದ ವರ್ಷ ಮೊಟಕುಗೊಂಡಿದ್ದ ಆತಿಥೇಯ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಜುಲೈ 1ರಂದು ಬರ್ಮಿಂಗ್’ಹ್ಯಾಮ್”ನಲ್ಲಿರುವ ಎಡ್ಜ್”ಬಾಸ್ಟನ್ (Edgbaston in Birmingham) ಮೈದಾನದಲ್ಲಿ ಆರಂಭವಾಗಲಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ತಂಡ ಜೂನ್ 16ರಂದು ಲಂಡನ್”ಗೆ ಪ್ರಯಾಣ ಬೆಳೆಸಲಿದ್ದು, ಈ ತಂಡದ ಜೊತೆ ರಾಹುಲ್ ಪ್ರಯಾಣ ಬೆಳೆಸುತ್ತಿಲ್ಲ. ಜೂನ್ 19ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ 5ನೇ ಪಂದ್ಯದ ನಂತರ ರಾಹುಲ್, ರಿಷಭ್ ಪಂತ್ (Rishabh Pant) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಬೆಂಗಳೂರಿನಿಂದ ನೇರವಾಗಿ ಲಂಡನ್”ಗೆ ತೆರಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ : ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ (Dinesh Karthik)ಗೆ ಮತ್ತೆ ಅವಮಾನ
ಇದನ್ನೂ ಓದಿ : ಗಂಭೀರ್ ಆರಿಸಿದ ಟಿ20 ವಿಶ್ವಕಪ್ ತಂಡದಲ್ಲಿ ರಾಹುಲ್, ಕೊಹ್ಲಿಯೇ ಇಲ್ಲ
KL Rahul Fitness Exclusive Updates