ಭಾನುವಾರ, ಏಪ್ರಿಲ್ 27, 2025
HomeSportsCricketKL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ...

KL Rahul : ಕೆ.ಎಲ್ ರಾಹುಲ್ 5ನೇ ಕ್ರಮಾಂಕಕ್ಕೆ ಬೆಸ್ಟ್ ಪ್ಲೇಯರ್.. ಯಾಕೆ ಗೊತ್ತಾ..? ಇಲ್ಲಿದೆ ಉತ್ತರ

- Advertisement -

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ ( KL Rahul) ಒಬ್ಬ ಕಂಪ್ಲೀಟ್ ಟೀಮ್ ಮ್ಯಾನ್. ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ರೆಡಿ ಇರುವ ಆಟಗಾರ. ವಿಕೆಟ್ ಕೀಪಿಂಗ್’ ನಲ್ಲೂ ತಂಡಕ್ಕೆ ನೆರವಾಗುವ ಕ್ರಿಕೆಟಿಗ. ಇಷ್ಟಾದರೂ ರಾಹುಲ್ ಅವರನ್ನು ಟೀಕಿಸುವವರಿಗೇನೂ ಕಮ್ಮಿಯಿಲ್ಲ. ಅಂತಹ ಟೀಕಾಕಾರರಿಗೆ ರಾಹುಲ್ ಬಾಂಗ್ಲಾದೇಶ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಟದಿಂದಲೇ ಉತ್ತರ ಕೊಟ್ಟಿದ್ದಾರೆ.

ಮೀರ್’ಪುರ್’ನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದಿದ್ದ ಟೀಮ್ ಇಂಡಿಯಾ ಉಪನಾಯಕ ರಾಹುಲ್ 70 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 73 ರನ್ ಗಳಿಸಿದ್ದರು. ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳ ವೈಫಲ್ಯದ ಮಧ್ಯೆ ಏಕಾಂಗಿ ಹೋರಾಟ ನಡೆಸಿದ್ದ ರಾಹುಲ್ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಆದರೆ 1 ವಿಕೆಟ್ ಅಂತರದಲ್ಲಿ ಬಾಂಗ್ಲಾ ಗೆಲುವು ಸಾಧಿಸುವುದರೊಂದಿಗೆ ರಾಹುಲ್ ಅವರ ಏಕಾಂಗಿ ಹೋರಾಟ ವ್ಯರ್ಥಗೊಂಡಿತ್ತು.

ಟಿ20 ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ ಇನ್ನಿಂಗ್ಸ್ ಆರಂಭಿಸುವ ರಾಹುಲ್ ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕದಲ್ಲಿ ಆಡುತ್ತಾರೆ. 5ನೇ ಕ್ರಮಾಂಕದಲ್ಲಿ ರಾಹುಲ್ ಅಮೋಘ ಬ್ಯಾಟಿಂಗ್ ದಾಖಲೆ ಹೊಂದಿದ್ದಾರೆ. ಇಲ್ಲಿಯವರೆಗೆ ರಾಹುಲ್ 11 ಇನ್ನಿಂಗ್ಸ್’ಗಳಲ್ಲಿ ಭಾರತ ಏಕದಿನ ಕ್ರಿಕೆಟ್’ನಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದು, ಒಂದು ಶತಕ ಹಾಗೂ 5 ಅರ್ಧಶತಕಗಳ ಸಹಿತ 526 ರನ್ ಗಳಿಸಿದ್ದಾರೆ. ಆರಂಭಿಕನಾಗಿ 43.57ರ ಬ್ಯಾಟಿಂಗ್ ಸರಾಸರಿ ಹೊಂದಿರುವ ರಾಹುಲ್, 5ನೇ ಕ್ರಮಾಂಕದಲ್ಲಿ 58.44ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
ಮತ್ತೊಂದು ಪ್ರಮುಖ ಸಂಗತಿ ಏನಂದ್ರೆ ರಾಹುಲ್ ವಿಕೆಟ್ ಕೀಪಿಂಗ್ ಕೂಡ ಮಾಡುವುದರಿಂದ ಏಕದಿನ ಕ್ರಿಕೆಟ್’ನಲ್ಲಿ ಭಾರತಕ್ಕೆ ಒಬ್ಬ ಹೆಚ್ಚುವರಿ ಬೌಲರ್’ನನ್ನು ಆಡಿಸುವ ಅವಕಾಶವಿರುತ್ತದೆ. ಮುಂದಿನ ವರ್ಷ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್’ನಲ್ಲಿ ರಾಹುಲ್ ಮಧ್ಯಮ ಕ್ರಮಾಂಕದಲ್ಲೇ ಆಡುವ ಸಾಧ್ಯತೆಗಳು ದಟ್ಟವಾಗಿದೆ.

ಏಕದಿನ ಪಂದ್ಯಗಳಲ್ಲಿ ವಿವಿಧ ಕ್ರಮಾಂಕಗಳಲ್ಲಿ ರಾಹುಲ್‌ ಸಾಧನೆ (KL Rahul )

ರಾಹುಲ್‌ ಓಪನರ್:

23 ಪಂದ್ಯ, 915 ರನ್, 3 ಶತಕ, 43.57 ಸರಾಸರಿ, 111 ಗರಿಷ್ಠ

3ನೇ ಕ್ರಮಾಂಕ:
3 ಪಂದ್ಯ, 77 ರನ್, 25.66 ಸರಾಸರಿ, 47 ಗರಿಷ್ಠ

4ನೇ ಕ್ರಮಾಂಕ:
8 ಪಂದ್ಯ, 209 ರನ್, 1 ಶತಕ, 41.80 ಸರಾಸರಿ, 108 ಗರಿಷ್ಠ

5ನೇ ಕ್ರಮಾಂಕ:
11 ಪಂದ್ಯ, 526 ರನ್, 1 ಶತಕ, 58.44 ಸರಾಸರಿ, 112 ಗರಿಷ್ಠ

ಇದನ್ನೂ ಓದಿ : India vs Bangladesh 1st ODI: ಕನ್ನಡಿಗ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, ಬಾಂಗ್ಲಾದೇಶಕ್ಕೆ 1 ವಿಕೆಟ್ ರೋಚಕ ಜಯ

ಇದನ್ನೂ ಓದಿ : Mayank Agarwal – Manish Pandey : ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಮೂಲ ಬೆಲೆ ರೂ. 1 ಕೋಟಿ

KL Rahul is the best player at number 5 Do you know why Here is the answer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular