KL Rahul removed: ಭಾರತಕ್ಕೆ 7 ಸತತ ಗೆಲುವು ತಂದುಕೊಟ್ಟ ರಾಹುಲ್‌ಗೆ ಉಪನಾಯಕತ್ವದಿಂದ ಕೈ ಕೊಟ್ಟಿದ್ದು ಎಷ್ಟು ಸರಿ?

ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್ (KL Rahul removed) ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಬ್ಯಾಟಿಂಗ್’ನಲ್ಲಿ ಪದೇ ಪದೇ ಎಡವುತ್ತಿರುವ ರಾಹುಲ್ ಅವರಿಗೆ ಈಗ ಟೀಮ್ ಇಂಡಿಯಾದ ಉಪನಾಯಕ್ವವೂ ಕೈ ತಪ್ಪಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ರಾಹುಲ್ ಅವರಿಗೆ ಸ್ಥಾನ ನೀಡಲಾಗಿಲ್ಲ. ಟಿ20 ಸರಣಿಗೆ ರಾಹುಲ್ ಜೊತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೂ ವಿಶ್ರಾಂತಿ ನೀಡಲಾಗಿದೆ. ಮತ್ತೊಂದೆಡೆ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಉಪನಾಯಕತ್ವದ ಜವಾಬ್ದಾರಿಯಿಂದ ರಾಹುಲ್ ಅವರನ್ನು ಮುಕ್ತಗೊಳಿಸಲಾಗಿದ್ದು, ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಏಕದಿನ ತಂಡದ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಬಾಂಗ್ಲಾದೇಶ ಪ್ರವಾಸದ ವೈಫಲ್ಯದ ಪರಿಣಾಮ ಟೀಮ್ ಇಂಡಿಯಾ ಉಪನಾಯಕತ್ವ ರಾಹುಲ್ ಅವರ ಕೈ ಜಾರಿದ್ದು, ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಬಾಂಗ್ಲಾದೇಶ ಪ್ರವಾಸದ ಮೊದಲ ಏಕದಿನ ಪಂದ್ಯದಲ್ಲಿ 73 ರನ್ ಗಳಿಸಿ ಮಿಂಚಿದ್ದ ರಾಹುಲ್ ನಂತರದ ಸತತ 6 ಇನ್ನಿಂಗ್ಸ್’ಗಳಲ್ಲಿ ದಯನೀಯ ವೈಫಲ್ಯ ಎದುರಿಸಿದ್ದರು.

ಬಾಂಗ್ಲಾ ವಿರುದ್ಧದ ಎರಡು ಏಕದಿನ ಹಾಗೂ ನಾಲ್ಕು ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ ಕೇವಲ 79 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದೇ ವೈಫಲ್ಯದ ಕಾರಣ ರಾಹುಲ್ ಏಕದಿನ ತಂಡದ ಉಪನಾಯಕನ ಸ್ಥಾನವನ್ನು ಕಳೆಕೊಂಡಿದ್ದಾರೆ.ಆದರೆ ಇಲ್ಲಿ ಗಮನಿಸಬೇಕಾಗಿರುವ ಅಂಶ ರಾಹುಲ್ ಆಟಗಾರನಾಗಿ ವಿಫಲರಾಗಿದ್ದಾರೆ ನಿಜ. ಆದರೆ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿದ ಕಳೆದ ಏಳು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ರಾಹುಲ್ ನಾಯಕತ್ವದಲ್ಲಿ ಕಳೆದ 7 ಪಂದ್ಯಗಳಲ್ಲಿ ಭಾರತದ ಸಾಧನೆ :

  • Vs ಜಿಂಬಾಬ್ವೆ (ಏಕದಿನ ಪಂದ್ಯ): 10 ವಿಕೆಟ್ ಜಯ
  • Vs ಜಿಂಬಾಬ್ವೆ (ಏಕದಿನ ಪಂದ್ಯ): 5 ವಿಕೆಟ್ ಜಯ
  • Vs ಜಿಂಬಾಬ್ವೆ (ಏಕದಿನ ಪಂದ್ಯ): 13 ರನ್ ಜಯ
  • Vs ಅಫ್ಘಾನಿಸ್ತಾನ (ಟಿ20 ಪಂದ್ಯ): 101 ರನ್ ಜಯ
  • Vs ಬಾಂಗ್ಲಾದೇಶ (ಏಕದಿನ ಪಂದ್ಯ): 227 ರನ್ ಜಯ
  • Vs ಬಾಂಗ್ಲಾದೇಶ (ಟೆಸ್ಚ್ ಪಂದ್ಯ): 188 ರನ್ ಜಯ
  • Vs ಬಾಂಗ್ಲಾದೇಶ (ಟೆಸ್ಚ್ ಪಂದ್ಯ): 3 ವಿಕೆಟ್ ಜಯ

ಜಿಂಬಾಬ್ವೆ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ರಾಹುಲ್ ನಾಯಕತ್ವದಲ್ಲಿ ಭಾರತ ಕ್ಲ್ಲೀನ್ ಸ್ವೀಪ್ ಮಾಡಿತ್ತು. ನಂತರ ಏಷ್ಯಾ ಕಪ್ ಟಿ20 ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದ ರಾಹುಲ್ ಭಾರತಕ್ಕೆ ಭರ್ಜರಿ 101 ರನ್’ಗಳ ಗೆಲುವು ತಂದುಕೊಟ್ಟಿದ್ದರು. ಅದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ದಾಖಲಿಸಿದ್ದರು. ನಂತರ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವನ್ನು ರಾಹುಲ್ ಮುನ್ನಡೆಸಿದ್ದರು.

ಆ ಪಂದ್ಯದಲ್ಲಿ ಭಾರತ 227 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು.ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ರಾಹುಲ್ ಸಾರಥ್ಯದಲ್ಲಿ ಟೀಮ್ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಹೀಗೆ ಆಟಗಾರನಾಗಿ ಎಡವಿದರೂ, ನಾಯಕತ್ವದಲ್ಲಿ ಯಶಸ್ವಿಯಾಗಿದ್ದ ರಾಹುಲ್ ಅವರಿಂದ ಉಪನಾಯಕನ ಸ್ಥಾನವನ್ನು ಕಿತ್ತುಕೊಂಡಿರುವುದು ಎಷ್ಟು ಸರಿ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (Indian team for Sri Lanka T20 series):
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡ, ರಾಹುಲ್ ತ್ರಿಪಾಛಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಕೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (Indian team for Sri Lanka ODI series):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ : Shikhar Dhawan out : ಟೀಮ್ ಇಂಡಿಯಾದಲ್ಲಿ ಶಿಖರ್ ಶಿಕಾರಿಗೆ ಬ್ರೇಕ್, ಒಂದು ದ್ವಿಶತಕಕ್ಕೆ ಅಂತ್ಯಗೊಂಡಿತು ಗಬ್ಬರ್ ಆಟ!

ಇದನ್ನೂ ಓದಿ : R Samath Ranji century: ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಸಮರ್ಥ್

ಇದನ್ನೂ ಓದಿ : David Warner double century: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಾರ್ನರ್ ದ್ವಿಶತಕ, ಸಚಿನ್ ದಾಖಲೆ ಸರಿಗಟ್ಟಿದ ಕ್ರಿಕೆಟ್ ಬಾಕ್ಸರ್

ಭಾರತ Vs ಶ್ರೀಲಂಕಾ ಸರಣಿಯ ವೇಳಾಪಟ್ಟಿ (India Vs Sri Lanka T20 & ODI series)

  • ಮೊದಲ ಟಿ20: ಜನವರಿ 03, ಮುಂಬೈ
  • 2ನೇ ಟಿ20: ಜನವರಿ 05, ಪುಣೆ
  • 3ನೇ ಟಿ20: ಜನವರಿ 07, ರಾಜ್’ಕೋಟ್
  • ಮೊದಲ ಏಕದಿನ: ಜನವರಿ 10, ಗುವಾಹಟಿ
  • 2ನೇ ಏಕದಿನ: ಜನವರಿ 12, ಕೋಲ್ಕತಾ
  • 3ನೇ ಏಕದಿನ: ಜನವರಿ 15, ತಿರುವನಂತಪುರಂ

KL Rahul removed: How right is it that Rahul, who brought India 7 consecutive victories, was given the vice-captaincy?

Comments are closed.