Tourist bus collision: ಪ್ರವಾಸಕ್ಕೆ ತೆರಳುತ್ತಿದ್ದ ಸಾರಿಗೆ ಬಸ್‌ ಗೆ ಮಿನಿ‌ ಬಸ್ ಮುಖಾಮುಖಿ ಢಿಕ್ಕಿ : 12 ವಿದ್ಯಾರ್ಥಿಗಳಿಗೆ ಗಾಯ

ಬೇಲೂರು: (Tourist bus collision) ಕಾಲೇಜಿನಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುವ ವೇಳೆ ವಿದ್ಯಾರ್ಥಿಗಳಿದ್ದ ಸಾರಿಗೆ ಬಸ್‌ ಹಾಗೂ ಮಿನಿ ಬಸ್‌ ಮುಖಾ ಮುಖಿ ಢಿಕ್ಕಿಯಾಗಿದ್ದು, ಸಾರಿಗೆ ಬಸ್‌ ನಲ್ಲಿದ್ದ ಹನ್ನೆರಡು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬೇಲೂರು ತಾಲೂಕಿನ ಸೂಲದೇವನಹಳ್ಳಿ ಬಳಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೇಲೂರು ತಾಲೂಕಿನ ಸೂಲದೇವನಹಳ್ಳಿ ಬಳಿಯಲ್ಲಿ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೊರಟಿದ್ದರು. ಈ ವೇಳೆ ಎದುರಿಗೆ ಬಂದ ಮಿನಿ ಬಸ್‌ ಒಂದು ವಿದ್ಯಾರ್ಥಿಗಳಿದ್ದ ಸಾರಿಗೆ ಬಸ್‌ ಗೆ ಢಿಕ್ಕಿ (Tourist bus collision) ಹೊಡೆದಿದೆ. ಪರಿಣಾಮ ಸಾರಿಗೆ ಬಸ್‌ ನಲ್ಲಿದ್ದ ವಿದ್ಯಾರ್ಥಿಗಳಲ್ಲಿ ಹನ್ನೆರಡು ಮಂದಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಳೇಬೀಡು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಶ್ಚಿತಾರ್ಥ ಆಗಿದ್ದ ಬಾಲಕಿ ನೇಣಿಗೆ ಶರಣು

ಶಿವಮೊಗ್ಗ: 17 ವರ್ಷದ ಬಾಲಕಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಬ ಕಮಲಾನಗರದಲ್ಲಿ ನಡೆದಿದೆ. ರಕ್ಷಿತಾ ಎನ್ನುವಾಕೆ ಮೃತ ಬಾಲಕಿ.

ರಕ್ಷಿತಾ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಈಕೆ ತನ್ನ ಅ‍ಣ್ಣನ ಜೊತೆ ಶಿವಮೊಗ್ಗದಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ನಿಶ್ಚಿತಾರ್ಥ ಕೂಡ ನಡೆದಿತ್ತು. 18 ವರ್ಷ ತುಂಬಿದ ಬಳಿಕ ಮದುವೆ ಮಾಡುವ ಆಲೋಚನೆಯಲ್ಲಿರುವಾಗಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ : Fire accident in Mou: ಉತ್ತರ ಪ್ರದೇಶದಲ್ಲಿ ಗುಡಿಸಲಿಗೆ ಬೆಂಕಿ: ತಾಯಿ ಜೊತೆ ನಾಲ್ಕು ಮಕ್ಕಳು ಸಜೀವ ದಹನ

ಇದನ್ನೂ ಓದಿ : Murder case solved: ಹಣದ ವಿಚಾರದಲ್ಲಿ ವಂಚಿಸಿದ್ದ ಯುವಕ ಬರ್ಬರವಾಗಿ ಕೊಲೆಯಾದ; 9 ತಿಂಗಳ ಬಳಿಕ ಪ್ರಕರಣ ಬಯಲಾಗಿದ್ದು ಹೇಗೆ ಗೊತ್ತಾ..?

ಇದೀಗ ಬಸವೇಶ್ವರನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

While the students were going on a trip from the college, a transport bus and a mini bus collided head-on, and twelve students in the transport bus were injured.

Comments are closed.