News Next Exclusive : ಕೆ.ಎಲ್ ರಾಹುಲ್‌ಗೆ ಜರ್ಮನಿಯಲ್ಲಿ ಸರ್ಜರಿ, ಇಂಗ್ಲೆಂಡ್ ಪ್ರವಾಸದಿಂದ ಔಟ್

ಬೆಂಗಳೂರು : ತೊಡೆಸಂಧು (Groin Injury) ಗಾಯದಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ (KL Rahul), ಇಂಗ್ಲೆಂಡ್ ಪ್ರವಾಸದಿಂದ ಔಟ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಸೀಮಿತ ಓವರ್”ಗಳ ಸರಣಿಯಲ್ಲಿ (England Tour of India) ಆಡಲು ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಮ್ ಇಂಡಿಯಾ (Indian Cricket Team), ಗುರುವಾರ ಮುಂಬೈನಿಂದ ಲಂಡನ್”ಗೆ ಪ್ರಯಾಣ ಬೆಳೆಸಿದೆ. ಈ ತಂಡದೊಂದಿಗೆ ರಾಹುಲ್ ತೆರಳಿಲ್ಲ. ಗಾಯದಿಂದ ಚೇತರಿಸಿಕೊಳ್ಳದ ರಾಹುಲ್ (KL Rahul undergoes surgery) ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯಲಿದ್ದಾರೆ.

ರಾಹುಲ್ ಗಾಯದ ಸ್ವರೂಪ ಗಂಭೀರವಾಗಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ರಾಹುಲ್ ಕೆಲವೇ ದಿನಗಳಲ್ಲಿ ಸಣ್ಣದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಮೂಲಗಳ ಪ್ರಕಾರ ಈ ಶಸ್ತ್ರಚಿಕಿತ್ಸೆ ಜರ್ಮನಿಯಲ್ಲಿ ನಡೆಯಲಿದೆ. ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳಲ್ಲಿ ರಾಹುಲ್ ಚೇತರಿಸಿಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ರಾಹುಲ್ ಮುನ್ನಡೆಸಬೇಕಿತ್ತು. ಆದರೆ ಸರಣಿ ಆರಂಭಕ್ಕೆ ಒಂದು ದಿನ ಮೊದಲು ತೊಡೆಸಂಧು ಗಾಯದ ಕಾರಣ ರಾಹುಲ್ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ಇದೀಗ ಗಾಯದಿಂದ ಸಂಪೂರ್ಣವಾಗಿ ಚೇಚರಿಸಿಕೊಳ್ಳದ ಕಾರಣ ಇಂಗ್ಲೆಂಡ್ ಪ್ರವಾಸದಿಂದಲೂ ಹೊರ ಬಿದ್ದಿದ್ದಾರೆ.

ಕಳೆದ ಕೆಲ ವರ್ಷಗಳಲ್ಲಿ ಕೆ.ಎಲ್ ರಾಹುಲ್ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಲೇ ಇದ್ದಾರೆ. 30 ವರ್ಷದ ರಾಹುಲ್ ಕಳೆದ ಏಳು ವರ್ಷಗಳಲ್ಲಿ ನಿರಂತರವಾಗಿ ಗಾಯಕ್ಕೆ ತುತ್ತಾಗುತ್ತಿದ್ದು, ಇದೇ ಕಾರಣದಿಂದ ಹಲವಾರು ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

ರಾಹುಲ್ ಗಾಯದ (Rahul Injury report) ಸರಮಾಲೆ

2015: ಗಾಯದ ಕಾರಣ ಬಾಂಗ್ಲಾದೇಶ ವಿರುದ್ಧ ಟೆಸ್ಟ್’ನಿಂದ ಔಟ್.
2016: ಸ್ನಾಯು ಸೆಳೆತದ ಕಾರಣ, ನ್ಯೂಜಿಲೆಂಡ್ ವಿರುದ್ಧದ 2 ಟೆಸ್ಟ್, ಏಕದಿನ ಸರಣಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಔಟ್.
2017: ಭುಜದ ನೋವಿಗೆ ಶಸ್ತ್ರಚಿಕಿತ್ಸೆಗೊಳಗಾದ ಕಾರಣ ಐಪಿಎಲ್ ಟೂರ್ನಿಯಿಂದ ಔಟ್.
2017: ಭುಜದ ನೋವಿನ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಔಟ್.
2017: ಅನಾರೋಗ್ಯದ ಕಾರಣ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಔಟ್.
2021: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಿಂದ ಔಟ್.
2021: ಎಡತೊಡೆಯ ನೋವಿನ ಕಾರಣ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಔಟ್.
2022: ಸ್ನಾಯು ಸೆಳೆತದ ಕಾರಣ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ಸರಣಿಯಿಂದ ಔಟ್.
2022: ತೊಡೆಸಂಧು ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಔಟ್.

2014 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಭಾರತ ಪರ 43 ಟೆಸ್ಟ್ ಪಂದ್ಯಗಳನ್ನಾಡಿದ್ದು 7 ಶತಕಗಳ ಸಹಿತ 2,547 ರನ್ ಗಳಿಸಿದ್ದಾರೆ. 42 ಏಕದಿನ ಪಂದ್ಯಗಳಿಂದ 5 ಶತಕಗಳ ಸಹಿತ 1,634 ರನ್ ಮತ್ತು 56 ಟಿ20 ಪಂದ್ಯಗಳಿಂದ 2 ಶತಕ ಸಹಿತ 1,831 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : ಕೆ.ಎಲ್ ರಾಹುಲ್‌ಗೆ ಅವನೊಬ್ಬ ದುಷ್ಮನ್ ; ಕನ್ನಡಿಗನ ಬೆನ್ನು ಬಿದ್ದ ಬೇತಾಳ ಯಾರು ?

ಇದನ್ನೂ ಓದಿ : Hardik Pandya Captain : ಕೊಹ್ಲಿ, ರಾಹುಲ್‌, ರೋಹಿತ್‌ ಶರ್ಮಾಗೆ ಕೋಕ್‌ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾ ನಾಯಕ

KL Rahul undergoes surgery in Germany, out of England tour

Comments are closed.