ದುಬೈ:(Asia Cup) ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಭಾರತ ತಂಡದ ಪಾಕಿಸ್ತಾನ ವಿರುದ್ಧ ಸೋತರೂ ಕಿಂಗ್ ಕೊಹ್ಲಿ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ವಿಶೇಷ ಏನಂದ್ರೆ (Team India) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Sharma)ಅವರ ವಿಶ್ವದಾಖಲೆಯನ್ನು ಪುಡಿಗಟ್ಟಿರುವ ವಿರಾಟ್ ಕೊಹ್ಲಿ(Kohli breaks Rohit’s Record)(Virat Kohli) ಆ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ (Asia Cup) ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 5 ವಿಕೆಟ್’ಗಳ ಸೋಲು ಅನುಭವಿಸಿತು. ಸೋಲಿನ ಮಧ್ಯೆಯೂ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಕೇವಲ 44 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಆಕರ್ಷಕ 60 ರನ್ ಗಳಿಸಿ ಮಿಂಚಿದರು.
(Kohli breaks Rohit’s Record)ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ(Virat Kohli) ಬಾರಿಸಿದ ಅರ್ಧಶತಕ ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ 32ನೇ ಅರ್ಧಶತಕ. ಅಷ್ಟೇ ಅಲ್ಲ, ಇದು ನೂತನ ವಿಶ್ವದಾಖಲೆ ಕೂಡ. ಇದುವರೆಗೆ ಈ ವಿಶ್ವದಾಖಲೆ 31 ಅರ್ಧಶತಗಳನ್ನು ಬಾರಿಸಿದ್ದ(Team India) ಟೀಮ್ ಇಂಡಿಯಾ ನಾಯಕ (Rohith Sharma)ರೋಹಿತ್ ಶರ್ಮಾ ಅವರ ಹೆಸರಲ್ಲಿತ್ತು. ಆ ದಾಖಲೆಯನ್ನೀಗ ಕೊಹ್ಲಿ ಪುಡಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ(Virat Kohli) 102 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 32 ಅರ್ಧಶತಕಗಳನ್ನು ಬಾರಿಸಿದ್ರೆ, ರೋಹಿತ್ ಶರ್ಮಾ (Rohith Sharma) 135 ಪಂದ್ಯಗಳಿಂದ 31 ಅರ್ಧಶತಕಗಳನ್ನು ಗಳಿಸಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 75 ಟಿ20 ಪಂದ್ಯಗಳಿಂದ 27 ಅರ್ಧಶತಕ ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (23 ಅರ್ಧಶತಕ) ಮತ್ತು ನ್ಯೂಜಿಲೆಂಡ್’ನ ಮಾರ್ಟಿನ್ ಗಪ್ಟಿಲ್ (22 ಅರ್ಧಶತಕ) 4 ಹಾಗೂ 5ನೇ ಸ್ಥಾನಗಳಲ್ಲಿದ್ದಾರೆ.
ಇದನ್ನೂ ಓದಿ: ಭಾರಿ ಮಳೆಗೆ ಕೆರೆಯಲ್ಲಿ ಕೊಚ್ಚಿ ಹೋದ ಮಿನಿ ಟೆಂಪೋ :ಓರ್ವ ನೀರುಪಾಲು
ಇದನ್ನೂ ಓದಿ: ಕ್ಯಾಚ್ ಬಿಟ್ಟ ತಪ್ಪಿಗೆ ಒಂದೇ ದಿನದಲ್ಲಿ ಖಲಿಸ್ತಾನಿಯಾದ ಟೀಮ್ ಇಂಡಿಯಾ ಕ್ರಿಕೆಟರ್
ಇದನ್ನೂ ಓದಿ: ಮುಂದಿನ ವರ್ಷ ಐಪಿಎಲ್’ಗ್ ಧೋನಿ ಗುಡ್ ಬೈ, ಕೊನೆಯ ಬಾರಿ ಚೆನ್ನೈ ತಂಡವನ್ನು ಮುನ್ನಡೆಸಲಿದ್ದಾರೆ ಎಂಎಸ್
2010ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ(Virat Kohli) ಇಲ್ಲಿಯವರೆಗೆ 102 ಪಂದ್ಯಗಳನ್ನಾಡಿದ್ದು, 50.91ರ ಅತ್ಯಮೋಘ ಸರಾಸರಿಯಲ್ಲಿ 32 ಅರ್ಧಶತಗಳ ಸಹಿತ 3,462 ರನ್ ಕಲೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20, ಟೆಸ್ಟ್ ಹಾಗೂ ಏಕದಿನದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಭಾರತದ ಮೊದಲ ಹಾಗೂ ಜಗತ್ತಿನ 2ನೇ ಆಟಗಾರನೆಂದ ದಾಖಲೆಯೂ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದೆ.
- ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಅರ್ಧಶತಕ:
- ವಿರಾಟ್ ಕೊಹ್ಲಿ (ಭಾರತ): 102 ಪಂದ್ಯ, 32 ಅರ್ಧಶತಕ
- ರೋಹಿತ್ ಶರ್ಮಾ (ಭಾರತ): 135 ಪಂದ್ಯ, 31 ಅರ್ಧಶತಕ
- ಬಾಬರ್ ಅಜಂ (ಪಾಕಿಸ್ತಾನ): 75 ಪಂದ್ಯ, 27 ಅರ್ಧಶತಕ
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ): 91 ಪಂದ್ಯ, 23 ಅರ್ಧಶತಕ
- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 121 ಪಂದ್ಯ, 22 ಅರ್ಧಶತಕ
Kohli breaks Rohit's Record