ಗುರುವಾರ, ಮೇ 1, 2025
HomeSportsCricketKohli RCB love : ಕಿಂಗ್ ಕೊಹ್ಲಿ ಗಾಳ ಹಾಕಿತ್ತು ಆ ಫ್ರಾಂಚೈಸಿ, No ಅಂದಿದ್ದರು...

Kohli RCB love : ಕಿಂಗ್ ಕೊಹ್ಲಿ ಗಾಳ ಹಾಕಿತ್ತು ಆ ಫ್ರಾಂಚೈಸಿ, No ಅಂದಿದ್ದರು ವಿರಾಟ್, ಕೊಹ್ಲಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಎಂಥದ್ದು ಗೊತ್ತಾ?

- Advertisement -

ಬೆಂಗಳೂರು : ಸತತ 16 ವರ್ಷಗಳಿಂದ ಐಪಿಎಲ್’ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ಆಟಗಾರ ಯಾರಾದ್ರೂ ಇದ್ರೆ ಅದು “ಕಿಂಗ್” ಖ್ಯಾತಿಯ (Kohli RCB love) ವಿರಾಟ್ ಕೊಹ್ಲಿ (Virat Kohli) ಮಾತ್ರ. ಐಪಿಎಲ್’ಗೆ ಪದಾರ್ಪಣೆ ಮಾಡಿದ ದಿನದಿಂದ ಇವತ್ತಿನವರೆಗೂ ಕಿಂಗ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಆಡುತ್ತಿದ್ದಾರೆ. ಐಪಿಎಲ್’ನಲ್ಲಿ ಆರ್’ಸಿಬಿ ಪರ 216 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 129.72ರ ಸ್ಟ್ರೈಕ್’ರೇಟ್’ನಲ್ಲಿ 36.43ರ ಸರಾಸರಿಯಲ್ಲಿ 5 ಶತಕ ಹಾಗೂ 42 ಅರ್ಧಶತಕಗಳ ಸಹಿತ 6411 ರನ್ ಕಲೆ ಹಾಕಿದ್ದಾರೆ. 2013-21ರವರೆಗೆ 9 ವರ್ಷಗಳ ಕಾಲ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿದ್ದರು.

16 ವರ್ಷಗಳಿಂದ ಐಪಿಎಲ್ ಆಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಬೆಂಗಳೂರಿನ ಮನೆಮಗ ಎಂದೇ ಇಲ್ಲಿನ ಕ್ರಿಕೆಟ್ ಪ್ರಿಯರು ಪ್ರೀತಿಸುತ್ತಾರೆ. ಆದರೆ ಒಂದು ಹಂತದಲ್ಲಿ ವಿರಾಟ್ ಕೊಹ್ಲಿ ಆರ್’ಸಿಬಿ ತಂಡ ಬಿಟ್ಟು ಬೇರೆ ಫ್ರಾಂಚೈಸಿ ಪರ ಆಡುವ ಮನಸ್ಸು ಮಾಡಿದ್ದರು. ಆಗ ಯಾವ ಫ್ರಾಂಚೈಸಿಯೂ ಕೊಹ್ಲಿಯನ್ನು ಖರೀದಿಸಲು ಮುಂದಾಗಿರಲಿಲ್ಲ. ಆದರೆ ಕೊಹ್ಲಿಗಾಗಿ ಫ್ರಾಂಚೈಸಿಯೊಂದು ಗಾಳ ಹಾಕಿದಾಗ ಆರ್’ಸಿಬಿ ತಂಡವನ್ನು ಬಿಟ್ಟು ಬರುವುದಿಲ್ಲ ಎಂದು ಕೊಹ್ಲಿ ಖಡಕ್ಕಾಗಿ ಹೇಳಿ ಬಿಟ್ಟಿದ್ದರು. ಜಿಯೊ ಸಿನಿಮಾ ವಾಹಿನಿಯಲ್ಲಿ ರಾಬಿನ್ ಉತ್ತಪ್ಪ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಕಿಂಗ್ ಕೊಹ್ಲಿ ಈ ಗುಟ್ಟು ಬಿಚ್ಚಿಟ್ಟಿದ್ದಾರೆ.

“ಆರ್’ಸಿಬಿ ಜೊತೆಗಿನದ್ದು ಅದ್ಭುತ ಪ್ರಯಾಣ. ಆರ್’ಸಿಬಿ ಜೊತೆಗಿನ ಪ್ರಯಾಣವನ್ನು ನಾನು ಯಾಕಿಷ್ಟು ಗೌರವಿಸುತ್ತೇನೆ ಎಂದರೆ, ಮೊದಲ 3 ವರ್ಷಗಳಲ್ಲಿ ಈ ಫ್ರಾಂಚೈಸಿ ನನಗೆ ತುಂಬಾ ಬೆಂಬಲ, ಪ್ರೋತ್ಸಾಹ ನೀಡಿತ್ತು. ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಬಂದಾಗ “ನಿನ್ನನ್ನು ನಾವು ಕೈಬಿಡುವುದಿಲ್ಲ” ಎಂದು ಫ್ರಾಂಚೈಸಿ ಹೇಳಿತ್ತು. ಆರಂಭದಲ್ಲಿ ನಾನು ಆರ್’ಸಿಬಿ ಪರ 5-6 ಕ್ರಮಾಂಕದಲ್ಲಿ ಆಡುತ್ತಿದ್ದೆ. ಆದರೆ ಯಶಸ್ಸು ಸಿಕ್ಕಿರಲಿಲ್ಲ. ಟಾಪ್ ಆರ್ಡರ್’ನಲ್ಲಿ ಆಡುವ ಉದ್ದೇಶದಿಂದ ಬೇರೆ ಫ್ರಾಂಚೈಸಿಯನ್ನು ಸಂಪರ್ಕಿಸಿದೆ. ಆದರೆ ಅವರು ನನ್ನನ್ನು ರಿಜೆಕ್ಟ್ ಮಾಡಿದರು.

ಇದನ್ನೂ ಓದಿ : RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್ ಕೊಹ್ಲಿ

ಇದನ್ನೂ ಓದಿ : Happy birthday KL Rahul: ಪತ್ನಿ ಆತಿಯಾ ಜೊತೆ ಹುಟ್ಟುಹಬ್ಬ ಆಚರಿಸಿದ ಕನ್ನಡಿಗ, ಬರ್ತ್ ಡೇ ಶುಭಾಶಯ ಹೇಳಿದ ಮುದ್ದಿನ ಮಾವ

ಭಾರತ ಪರ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದ ನಾನು ಆರ್’ಸಿಬಿ ಪರ ಅಗ್ರಕ್ರಮಾಂಕದಲ್ಲಿ ಆಡಲು ಬಯಸಿದ್ದ. ಇದನ್ನು ನಾನು ಅಂದಿನ ಕೋಚ್ ರೇ ಜೆನ್ನಿಂಗ್ಸ್’ಗೆ ಹೇಳಿದಾಗ, ಅದಕ್ಕೆ ಅವಕಾಶ ಮಾಡಿ ಕೊಟ್ಟಿದ್ರು. ಭಾರತ ಪರ ನಾನು 3ನೇ ಕ್ರಮಾಂಕದಲ್ಲಿ ಮಿಂಚುತ್ತಿರುವುದನ್ನು ನೋಡಿದ ಅದೇ ಫ್ರಾಂಚೈಸಿ ನನ್ನ ಬಳಿ ಬಂದು “ನೀವು ಹರಾಜಿಗೆ ಬನ್ನಿ, ನಿಮ್ಮನ್ನು ನಾವು ಖರೀದಿ ಮಾಡುತ್ತೇವೆ” ಎಂದರು. “ನನಗೆ ಬೆಂಬಲವಾಗಿ ನಿಂತ ಆರ್’ಸಿಬಿ ಬಿಟ್ಟು ಹೊರ ಬರುವ ಮಾತೇ ಇಲ್ಲ” ಎಂದು ನಾನು ಅವರಿಗೆ ತಿಳಿಸಿದೆ” ಎಂದು ವಿರಾಟ್ ಕೊಹ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 2008ರಲ್ಲಿ ಭಾರತ ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಬೆನ್ನಲ್ಲೇ, ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಂದಿನ ಮಾಲೀಕ ವಿಜಯ್ ಮಲ್ಯ ಆರ್’ಸಿಬಿ ತಂಡಕ್ಕೆ ಸೇರಿಸಿಕೊಂಡಿದ್ದರು.

Kohli RCB love : King Kohli was hooked on that franchise, Virat said No, do you know what kind of love Kohli has for RCB?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular