ಉಡುಪಿ : ನಾಡೋಜಾ ಡಾ.ಜಿ.ಶಂಕರ್‌ ಮನೆ, ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ

ಉಡುಪಿ : ಕರಾವಳಿಯ ಮೊಗವೀರ ಪ್ರಭಾವಿ ಮುಖಂಡ ನಾಡೋಜಾ ಡಾ.ಜಿ.ಶಂಕರ್‌ ಅವರ ಮನೆ ಹಾಗೂ ಸಮೂಹ ಸಂಸ್ಥೆಗಳ (G. Shankar family group organization Udupi) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾಗಿರುವ ಜಿ. ಶಂಕರ್ ಅವರ ಮನೆ, ಶಾಮಿಲಿ ಸಭಾಂಗಣ ಸೇರಿದಂತೆ ಸಮೂಹ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರು, ಗೋವಾ ನೋಂದಾಯಿತ ಕಾರಿನಲ್ಲಿ ಬಂದಿರುವ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ.

ಇದನ್ನೂ ಓದಿ : ಕೋಟ : ಊಟದಲ್ಲಿ ಗಾಜಿನ ಚೂರು ಬೆರೆಸಿ ಸಂಬಂಧಿಕರ ಕೊಲೆಗೆ ಯತ್ನ, ಆರೋಪಿ ಅರೆಸ್ಟ್‌

ಇದನ್ನೂ ಓದಿ : Congress final list : ಕಾಂಗ್ರೆಸ್‌ ಅಂತಿಮ ಪಟ್ಟಿ ಪ್ರಕಟ : ಮೊಯಿದ್ದೀನ್‌ ಬಾವಾಗೆ ಒಂದು ಕರೆಯಿಂದ ತಪ್ಪಿದ ಟಿಕೆಟ್‌ !

ಡಾ.ಜಿ.ಶಂಕರ್‌ ಅವರ ಮನೆ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸಂಸ್ಥೆಯ ಲೆಕ್ಕಪತ್ರ ಹಾಗೂ ನಗದು ವಹಿವಾಟುಗಳ ವಿವರಗಳನ್ನು ಪಡೆಯುತ್ತಿದ್ದಾರೆ. ಡಾ.ಜಿ.ಶಂಕರ್‌ ಅವರು ಮೊಗವೀರ ಸಮುದಾಯದ ಪ್ರಭಾವಿ ಮುಖಂಡರಾಗಿದ್ದು, ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ.

ನಿರಂತರ 12 ಗಂಟೆಗಳ ಕಾಲ ಪರಿಶೀಲನೆ

ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಮನೆ ಹಾಗೂ ಕಚೇರಿ ಮೇಲೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸಂಜೆ 6 ಗಂಟೆಯ ವರೆಗೂ ಪರಿಶೀಲನೆ ಯನ್ನು ಮುಂದುವರಿಸಿದ್ದಾರೆ. ಮನೆ ಹಾಗೂ ಕಚೇರಿಯಲ್ಲಿರುವ ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ಜಿ. ಶಂಕರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟು ಮೂರು ಐಟಿ ಅಧಿಕಾರಿಗಳ ಮೂರು ತಂಡ ಮನೆಯಲ್ಲಿ ಬೀಡುಬಿಟ್ಟಿದ್ದು, ಪರಿಶೀಲನೆಯನ್ನು ನಡೆಸುತ್ತಿದೆ. ಉಡುಪಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿಯನ್ನು ನಡೆಸಲಾಗಿದೆ. ಉಡುಪಿ ಜಿಲ್ಲೆಯಲ್ಲಿರುವ ಮನೆ ಹಾಗೂ ಶ್ಯಾಮಿಲಿ ಹಾಲ್‌ ಮೇಲೆ ದಾಳಿ ನಡೆಸಿದ್ರೆ, ವಿಜಯಪುರದಲ್ಲಿರುವ ಕಚೇರಿಯ ಮೇಲೆ ದಾಳಿ ನಡೆದಿದೆ. ಪ್ರಮುಖವಾಗಿ ಸಂಸ್ಥೆಯ ಲೆಕ್ಕಪತ್ರ ಮತ್ತು ನಗದು ವ್ಯವಹಾರದ ಕುರಿತು ದಾಖಲೆಗಳ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

G. Shankar family group organization : Udupi : IT attack on Dr. G. Shankar’s house, group organizations in Nadoja

Comments are closed.