Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು : ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಸಹಾಯವಾಗಲೆಂದು ಶಾಲೆಗಳಿಗೆ ಬಸ್‌ ಸೌಲಭ್ಯವನ್ನು (Bus facility for government school) ಕಲ್ಪಿಸಲಾಗುತ್ತಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಶಾಲಾ ಮಕ್ಕಳಿಗೆ ಸಹಾಯವಾಗಲೆಂದು ಈ ಯೋಜನೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಾಲಾರಂಭ ಹಾಗೂ ಶಾಲಾ ಮುಕ್ತಾಯದ ವೇಳೆ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಬಸ್‌ ಕಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ. ಭಾನುವಾರ ಸ್ವಕ್ಷೇತ್ರ ಸುತ್ತಿದ ಸಿಎಂ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಶಾಲೆಗಳಿಗೆ ಬಸ್‌ ಪ್ರಾರಂಭಿಸುವ ಕುರಿತು ಮಾತನಾಡಿದರು.

ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ವಿಶೇಷ ಸಾರಿಗೆ ಸೌಲಭ್ಯ ಕಲ್ಲಿಸುವ ಯೋಜನೆ ಜಾರಿಗೊಳಿಸಲಾಗುವುದು. ಖಾಸಗಿಯವರ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆಯಿಂದಾಗಿ ದೂರದಿಂದ ನಡೆದು ಹೋಗುವ ಶಾಲಾ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಕೇವಲ ಶಾಲಾ ಮಕ್ಕಳಿಗೆ ಮಾತ್ರವಲ್ಲದೇ ಶಿಕ್ಷಕರಿಗೂ ಸಹ ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಯೋಜನೆಯನ್ನು ತಮ್ಮ ಕ್ಷೇತ್ರದಿಂದಲೇ ಆರಂಭಿಸುವಂತೆ ವಾಯವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ ಮಾತ್ರ ವಿಶೇಷವಾಗಿ ಶಾಲಾ ವಾಹನವನ್ನು ಬಿಡಲಾಗುತ್ತಿದ್ದು, ಹಲವಾರು ಮಕ್ಕಳು ಇದರಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕಡೆ ಶಾಲಾ ಮಕ್ಕಳಿಗೆ ಬಸ್‌ನ ಸೌಕರ್ಯ ಇರುವುದಿಲ್ಲ. ಶಾಲೆಗೆ ಮಕ್ಕಳು ದೂರದಿಂದ ನಡೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : CM Bommai announcement: ವಿಕಲಚೇತನ ಮಕ್ಕಳಿಗೆ ವಿಶೇಷ ಯೋಜನೆ : ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ : High Court Notice: ಕೆಜಿಎಫ್- 2 ಹಾಡನ್ನು ತೆಗೆಯದೆ ನ್ಯಾಯಾಂಗ ನಿಂದನೆ; ಕರ್ನಾಟಕ ಹೈಕೋರ್ಟ್ ನಿಂದ ರಾಹುಲ್ ಗಾಂಧಿಗೆ ನೋಟಿಸ್

ಇದನ್ನೂ ಓದಿ : Disabled Welfare Department : ಅಂಗವಿಕಲರ ಕಲ್ಯಾಣ ಇಲಾಖೆ ಹೊಂದಿದ ಮೊದಲ ರಾಜ್ಯ ಮಹಾರಾಷ್ಟ್ರ

ಇನ್ನೂ ಮುಂದೆ ದೂರದಿಂದ ನಡೆದುಕೊಂಡು ಹೋಗುವ ಮಕ್ಕಳಿಗೆ ಸರಕಾರ ಈ ಮೂಲಕ ಸಿಹಿಸುದ್ದಿಯನ್ನು ನೀಡಿದೆ. ಅದರಂತೆ ಇನ್ನು ಮುಂದೆ ಸರಕಾರವೇ ಮಕ್ಕಳಿಗೆ ಶಾಲಾ ಬಸ್‌ ವ್ಯವಸ್ಥೆ ಕಲ್ಪಿಸಿದರೆ ಇದರಿಂದ ದೂರದಿಂದ ಶಾಲಾಗೆ ಬರುವ ಮಕ್ಕಳಿಗೆ ತುಂಬಾ ಸಹಾಯವಾಗುವುದು ಖಂಡಿತ.

Bus facility for government school : CM Basavaraj Bommai

Comments are closed.