ನವದೆಹಲಿ : (Legends League Cricket) ಬಿಸಿಸಿಐ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕ್ರಿಕೆಟ್‌ನಿಂದ ನಿವೃತ್ತರಾಗಿ ಹಲವು ವರ್ಷಗಳೇ ಕಳೆದಿದೆ. ಆದ್ರೆ ಸೌರವ್ ಗಂಗೂಲಿ ಅವರ ಬ್ಯಾಟಿಂಗ್ ವೈಖರಿಯನ್ನು ಮರೆಯೋದಕ್ಕೆ ಯಾರಿಂದಲೂ ಸಾಧ್ಯನೇ ಇಲ್ಲ. ಆದ್ರೀಗ ಗಂಗೂಲಿ ಬ್ಯಾಟ್ ಹಿಡಿದು ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ. ಅಷ್ಟೇ ಅಲ್ಲಾ ಟೀ ಇಂಡಿಯಾದ ನಾಯಕರಾಗಿಯೂ (Sourav Ganguly to captain Indian team) ಸೇವೆ ಸಲ್ಲಿಸಲಿದ್ದಾರೆ.
ಭಾರತ ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16 ರಂದು ವಿಶೇಷ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಪಂದ್ಯದಲ್ಲಿ ವರ್ಲ್ಡ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಭಾರತ ಮಹಾರಾಜಸ್ ತಂಡವನ್ನು ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಮುನ್ನಡೆಸಲಿದ್ದಾರೆ. ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ರೆಸ್ಟ್ ಆಫ್ ದಿ ವರ್ಲ್ಡ್ ನಾಯಕನಾಗಿದ್ದಾರೆ.
ನಾವು ನಮ್ಮ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಹೆಮ್ಮೆಯ ಭಾರತೀಯನಾಗಿ, ನಾವು ಈ ವರ್ಷದ ಲೀಗ್ ಅನ್ನು 75 ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ಮೀಸಲಿಡಲು ನಿರ್ಧರಿಸಿದ್ದೇವೆ ಎಂದು ಹಂಚಿಕೊಳ್ಳಲು ಇದು ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ” ಎಂದು ಹೇಳಿದರು. ಎಲ್‌ಎಲ್‌ಸಿ ಆಯುಕ್ತ ರವಿಶಾಸ್ತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಬಾರಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ಇದು ಎರಡನೇ ಆವೃತ್ತಿಯಾಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾರತ ಮಾತ್ರವಲ್ಲದೇ ಒಟ್ಟು 10 ದೇಶಗಳ ಆಟಗಾರರು ಈ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಒಟ್ಟು, 15 ಪಂದ್ಯಗಳು ನಡೆಯಲಿವೆ.
ಭಾರತ ಮಹಾರಾಜಸ್ ತಂಡ :
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಎ. ಬದ್ರಿನಾಥ್, ಪ್ರಗ್ಯಾನ್ ಓಜಾ, ಪಾರ್ಥಿವ್ ಪಟೇಲ್, ಯೂಸುಫ್ ಪಠಾಣ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಆರ್‌ಪಿ ಸಿಂಗ್, ಅಜಯ್ ಜಡೇಜಾ, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಮತ್ತು ಇರ್ಫಾನ್ ಪಠಾಣ್.
ರೆಸ್ಟ್ ಆಫ್ ದಿ ವರ್ಲ್ಡ್ :
ಇಯಾನ್ ಮಾರ್ಗನ್ (ನಾಯಕ), ಹರ್ಷಲ್ ಗಿಬ್ಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್, ಲೆಂಡ್ಲ್ ಸಿಮನ್ಸ್, ಜಾಕ್ವೆಸ್ ಕಾಲಿಸ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮಶ್ರಫೆ ಮೊರ್ತಾಜಾ, ಅಸ್ಗರ್ ಅಫ್ಘಾನ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಒ ಬ್ರೆಟ್ಟಾಬ್ಜಾ, ಡಿಚ್ ಜಾನ್‌ಡಿನ್, ಎಂ.
ಇದನ್ನೂ ಓದಿ : MI Cape Town : ಎಂಐ ಕೇಪ್ ಟೌನ್ ತಂಡಕ್ಕೆ ಟಿ20 ದಿಗ್ಗಜರ ಎಂಟ್ರಿ, ಮುಂಬೈ ತಂಡ ಸೇರಿದವರು ಯಾರ್ಯಾರು ಗೊತ್ತಾ?
Legends League Cricket Sourav Ganguly to captain Indian team