ಐಪಿಎಲ್ ಪಂದ್ಯಗಳಿಗೆ ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ ಬಿಗ್ ಬಾಸ್ ಸ್ಟಾರ್ ರೂಪೇಶ್ ಶೆಟ್ಟಿ

ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಕಾರ್ಯಕ್ರಮದ ವಿಜೇತ, ಮಂಗಳೂರು ಮೂಲದ ನಟ ರೂಪೇಶ್ ಶೆಟ್ಟಿ, ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕನ್ನಡ ವೀಕ್ಷಕ ವಿವರಣೆಗಾರನಾಗಿ (List of Star Sports commentators) ಕಾರ್ಯ ನಿರ್ವಹಿಸಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರನಾಗಿ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ರಾಜ್ಯದ ಬ್ಯಾಟಿಂಗ್ ದಿಗ್ಗಜ ಜಿ.ಆರ್ ವಿಶ್ವನಾಥ್, ಕರ್ನಾಟಕದ ಮಾಜಿ ಕ್ರಿಕೆಟಿಗರಾದ ವಿಜಯ್ ಭಾರದ್ವಾಜ್, ಜಿ.ಕೆ ಅನಿಲ್ ಕುಮಾರ್, ಭರತ್ ಚಿಪ್ಲಿ, ಶ್ರೀನಿವಾಸ ಮೂರ್ತಿ, ಬಾಲಚಂದ್ರ ಅಖಿಲ್, ಕ್ರಿಕೆಟಿಗ ಪವನ್ ದೇಶಪಾಂಡೆ ಕೂಡ ಕನ್ನಡ ವೀಕ್ಷಕ ವಿವರಣೆಗಾರರ ತಂಡದಲ್ಲಿದ್ದಾರೆ.

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭಕ್ಕಿನ್ನು ಕೇವಲ ಎರಡು ವಾರಗಳಷ್ಟೇ ಬಾಕಿ. ಐಪಿಎಲ್ (IPL 2023) 16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಅಹ್ಮದಾಬಾದ್’ನಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್-16: ಸ್ಟಾರ್ ಸ್ಪೋರ್ಟ್ಸ್ ವೀಕ್ಷಕವಿವರಣೆಗಾರರ ಪಟ್ಟಿ :

  • ಇಂಗ್ಲಿಷ್: ಸುನಿಲ್ ಗವಾಸ್ಕರ್, ಜ್ಯಾಕ್ಸ್ ಕಾಲೀಸ್, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಆರೋನ್ ಫಿಂಚ್, ಟಾಮ್ ಮೂಡಿ, ಪಾಲ್ ಕಾಲಿಂಗ್’ವುಡ್, ಡೇನಿಯೆಲ್ ವೆಟ್ಟೋರಿ, ಡ್ಯಾನಿ ಮೊರಿಸನ್, ಡೇವಿಡ್ ಹಸ್ಸಿ.
  • ಕನ್ನಡ: ಜಿ.ಆರ್ ವಿಶ್ವನಾಥ್, ವಿಜಯ್ ಭಾರದ್ವಾಜ್, ಜಿ.ಕೆ ಅನಿಲ್ ಕುಮಾರ್, ಶ್ರೀನಿವಾಸಮೂರ್ತಿ, ಬಾಲಚಂದ್ರ ಅಖಿಲ್, ಪವನ್ ದೇಶಪಾಂಡೆ, ಸೋಮೇಶ್ ಗೋಣಿ, ರೂಪೇಶ್ ಶೆಟ್ಟಿ.
  • ತಮಿಳು: ಕೃಷ್ಣಮಾಚಾರಿ ಶ್ರೀಕಾಂತ್, ಎಸ್.ಬದ್ರಿನಾಥ್, ಲಕ್ಷ್ಮೀಪತಿ ಬಾಲಾಜಿ, ಸಡಗೋಪನ್ ರಮೇಶ್, ಮುರಳಿ ವಿಜಯ್, ಆರ್.ಜೆ ಬಾಲಾಜಿ, ಯೋ ಮಹೇಶ್, ಮುತ್ತುರಾಮನ್, ಕೆ.ವಿ ಸತ್ಯನಾರಾಯಣ್, ತಿರುಶ್ ಕಾಮಿನಿ.
  • ತೆಲುಗು: ಎಂ.ಎಸ್.ಕೆ ಪ್ರಸಾದ್, ವೇಣುಗೋಪಾಲ್ ರಾವ್, ಟಿ.ಸುಮನ್, ಕಲ್ಯಾಣ ಕೃಷ್ಣ, ಆಶಿಶ್ ರೆಡ್ಡಿ, ಕೌಶಿನ್ ಎನ್.ಸಿ., ರವಿ ರಾಕ್ಲೀ.
  • ಮರಾಠಿ: ಸಂದೀಪ್ ಪಾಟೀಲ್, ಅಮೋಲ್ ಮಜುಮ್ದಾರ್, ಆದಿತ್ಯ ತರೆ, ನೀಲೇಶ್ ನಾತು, ಪ್ರಸಾದ್ ಕ್ಷೀರಸಾಗರ್.
  • ಮಲಯಾಳಂ: ಎಸ್.ಶ್ರೀಶಾಂತ್, ಟಿನು ಯೊಹಾನನ್, ಶಿಯಾಸ್ ಮೊಹಮ್ಮದ್, ವಿಷ್ಣು ಹರಿಹರನ್.
  • ಗುಜರಾತಿ: ಮನನ್ ದೇಸಾಯಿ, ಆಕಾಶ್ ತ್ರಿವೇದಿ, ನಯನ್ ಮೊಂಗಿಯಾ.
  • ಬಂಗಾಳಿ: ಅಶೋಕ್ ದಿಂಡ, ವರುಣ್ ಕೌಶಿಕ್, ಪ್ರದೀಪ್ ರಾಯ್, ಪ್ರಲಬ್ ಬಸು, ಅಭಿಷೇಕ್ ಜುಂಜುನ್ವಾಲ.
  • ಹಿಂದಿ: ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಮಿಥಾಲಿ ರಾಜ್, ಸಂಜಯ್ ಮಾಂಜ್ರೇಕರ್, ದೀಪ್ ದಾಸ್ ಗುಪ್ತಾ, ಅಜಯ್ ಮೆಹ್ರಾ, ಪದಮ್ಜಿತ್ ಸೆಹ್ರಾವತ್, ಜತಿನ್ ಸಪ್ರು.

ಇದನ್ನೂ ಓದಿ : Sophie Devine painful story : ಗುಜರಾತ್ ವಿರುದ್ಧ 99 ರನ್ ಚಚ್ಚಿದ ರಾಯಲ್ ಚಾಲೆಂಜರ್ಸ್ ಸ್ಟಾರ್ ಆಟಗಾರ್ತಿಯ ಹಿಂದಿದೆ ನೋವಿನ ಕಥೆ!

ಇದನ್ನೂ ಓದಿ : KL Rahul Suryakumar : ಕೆ.ಎಲ್ ರಾಹುಲ್ ಒಂದು ವೈಫಲ್ಯಕ್ಕೆ ಕಿಡಿ ಕಾರುವ ಸೋ ಕಾಲ್ಡ್ ಕ್ರಿಕೆಟ್ ಪಂಡಿತರು ಸೂರ್ಯನ ವಿಚಾರದಲ್ಲಿ ಮೌನವೇಕೆ?

List of Star Sports commentators : Big Boss star Rupesh Shetty will provide commentary in Kannada for IPL matches

Comments are closed.