ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಅರ್ಜಿ ತುರ್ತು ವಿಚಾರಣೆ: ಪಕ್ಷಪಾತ ಎಂದು ಸಿಜೆಗೆ ದೂರು ಸಲ್ಲಿಸಿದ ವಕೀಲರು

ಬೆಂಗಳೂರು : ಒಂದೆಡೆ ಬಿಜೆಪಿಗೆ ಮಾಡಾಳು ವಿರೂಪಾಕ್ಷಪ್ಪ ಪ್ರಕರಣ (Modalu Virupaksappa case) ತೀವ್ರ ಮುಜುಗರಕ್ಕೆ ಕಾರಣವಾಗಿದ್ದರೇ, ಶಾಸಕ ಮಾಡಾಳು ಮಾತ್ರ ಜಾಮೀನು ಪಡೆದು ಅದ್ದೂರಿ ಮೆರವಣಿಗೆ ಮಾಡಿಸಿಕೊಂಡು ಬಿಜೆಪಿಯ ಮುಜುಗರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಈ ಮಧ್ಯೆ ಅನಾರೋಗ್ಯದ ಕಾರಣವನ್ನಿಟ್ಟುಕೊಂಡು ಮಾಡಾಳು ಪಡೆದ ಜಾಮೀನು ಈಗ ಸ್ವತಃ ವಕೀಲರ ವಲಯದಲ್ಲೂ ಅಸಮಧಾನ ಮೂಡಿಸಿದ್ದು ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.

ಮಾಡಾಳು ವಿರೂಪಾಕ್ಷಪ್ಪಗೆ ಹೈಕೋರ್ಟ್ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಕೆಯಾದ ಒಂದೇ ದಿನಕ್ಕೆ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದಕ್ಕೆ ಅಸಮಧಾನ ವ್ಯಕ್ತವಾಗಿದೆ. ಬೆಂಗಳೂರು ವಕೀಲರ ಸಂಘ ಚೀಫ್ ಜಸ್ಟೀಸ್ ಆಫ್ ಇಂಡಿಯಾಗೆ ದೂರು ಸಲ್ಲಿಸಿದ್ದು, ಪ್ರಕರಣದ ವಿವರ ಹಾಗೂ ನ್ಯಾಯಾಲಯದ ಆದೇಶದ ಮಾಹಿತಿಯನ್ನು ಸಲ್ಲಿಸಿದೆ. ಬೆಂಗಳೂರು ವಕೀಲರ ಸಂಘದಿಂದಿಂದ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದ್ದು, ಸಂಘದ ಅಧ್ಯಕ್ಷ ವಿವೇಕ್ ಸುಬ್ಬ ರೆಡ್ಡಿ, ಜನರಲ್ ಸೆಕ್ರೆಟರಿ ಟಿ ಜಿ ರವಿ ಹಾಗೂ ಖಜಾಂಜಿ ಹರೀಶ ಎಂ.ಟಿರವರು ಸಿಐಜೆ ಗೆ ಪತ್ರ ರವಾನಿಸಿದ್ದಾರೆ‌.

ಎಂಎಲ್ಎ ಆದ ಕಾರಣ ತುರ್ತು ಅರ್ಜಿ ಕೈಗೆತ್ತಿಕೊಂಡಿದ್ದಕ್ಕೆ ಬೇಸರ ವ್ಯಕ್ತ ಪಡಿಸಿರುವ ವಕೀಲರ ಸಂಘ, ಬೇರೆ ಪ್ರಕರಣಗಳಲ್ಲಿ ವಾರ ಕಳೆದ್ರೂ ಬೆಂಚ್ ಮುಂದೆ ಪ್ರಕರಣ ಅರ್ಜಿ ವಿಚಾರಣೆಗೆ ಬರುತ್ತಿರಲಿಲ್ಲ. ಆದರೆ ವಿಐಪಿ ಪ್ರಕರಣಗಳು ಮಾತ್ರ ರಾತ್ರೋರಾತ್ರಿ ಪೋಸ್ಟಿಂಗ್ ಆಗ್ತಾ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ . ಮಾಡಾಳು ಪ್ರಕರಣದ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಅರ್ಜಿ ಬೆಂಚ್ ಮುಂದೆ ಬಂದು ಜಾಮೀನು ನೀಡಲಾಗಿದೆ. ಅಲ್ಲದೇ ಲಂಚ ಪ್ರಕರಣದಲ್ಲಿ ಮಾಡಾಳುಗೆ ಅನಾರೋಗ್ಯದ ಗ್ರೌಂಡ್ ಮೇಲೆ ಜಾಮೀನು ಕೂಡ ನೀಡಲಾಗಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ ವಕೀಲರ ಸಂಘ, ಸಿಜೆಐ ಡಿ ವೈ ಚಂದ್ರಚೂಡ್ ರವರಿಗೆ ಪತ್ರದ ಮೂಲಕ ದೂರು ಸಲ್ಲಿಕೆ‌ಮಾಡಿದೆ.

ಇದನ್ನೂ ಓದಿ : ನಾಲ್ವರನ್ನು ಬಿಟ್ಟು ಎಲ್ಲರಿಗೂ ಟಿಕೇಟ್: ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಇದನ್ನೂ ಓದಿ : ಪಿಎಂ, ಲೋಪಿ, ಸಿಜೆಐ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರ ನೇಮಕ ಎಂದ ಸುಪ್ರೀಂ ಕೋರ್ಟ್‌

ಇದನ್ನೂ ಓದಿ : ಗೃಹ ಸಚಿವ ಆರಗ ಜ್ಞಾನೇಂದ್ರ ಎಸ್ಕಾರ್ಟ್ ವಾಹನ ಬೈಕ್‌ ಗೆ ಢಿಕ್ಕಿ : ಸವಾರ ಸಾವು

ಅಲ್ಲದೇ ಸಾಮಾನ್ಯರ ಅರ್ಜಿಗಳನ್ನು ಒಂದೇ ದಿನಕ್ಕೆ ಬೆಂಚ್ಗೆ ಪೋಸ್ಟ್ ಮಾಡಬೇಕು.ನ್ಯಾಯದೇಗುಲ ಎಲ್ಲರಿಗೂ ಸಮಾನವಾಗಿರಬೇಕು ಎಂದು ಮನವಿಮಾಡಿದೆ. ಅಲ್ಲದೇ ಉಳ್ಳವರ ಪ್ರಕರಣ ತೀರ್ಮಾನಿಸುವಂತೆ ಬಡವರ ಅರ್ಜಿ ಪರಿಗಣಿಸಬೇಕು ಎಂದು ಪತ್ರದಲ್ಲಿ ವಕೀಲರ ಸಂಘವು ಮನವಿ ಮಾಡಿದೆ. ಇನ್ನು ವಕೀಲರ ಸಂಘದ ಈ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದು, ಜನ ಸಾಮಾನ್ಯರ ಭಾವನೆಯನ್ನು ವಕೀಲರ ಸಂಘ ಪತ್ರದಲ್ಲಿ ಬರೆದಿದೆ ಎಂದು ಜನ ಅಭಿಪ್ರಾಯಿಸಿದ್ದಾರೆ.

Modalu Virupaksappa case: Urgent hearing of MLA Modalu Virupaksappa’s bail plea: Lawyers complain to CJ alleging bias

Comments are closed.