RCB : ಕರ್ನಾಟಕದ ಸ್ಟಾರ್‌ಗಳನ್ನು ಆರ್‌ಸಿಬಿ ಕಡೆಗಣಿಸಲು ತಮಿಳುನಾಡಿನ ಈ “ಮಹಾನುಭಾವ”ನೇ ಕಾರಣ..!

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಕಂಡ ಐಪಿಎಲ್-2023 (IPL 2023) ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 4 ಪಂದ್ಯಗಳನ್ನು ಗೆದ್ದಿದೆ ಅಂದ್ರೆ (Malolan Rangarajan) ಅದಕ್ಕೆ ಕಾರಣ ನಾಲ್ವರು ಆಟಗಾರರು.

ಬ್ಯಾಟಿಂಗ್‌ನಲ್ಲಿ ನಾಯಕ ಫಾಫ್ ಡುಪ್ಲೆಸಿಸ್, ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್, ಬೌಲಿಂಗ್‌ನಲ್ಲಿ ಮೊಹಮ್ಮದ್ ಸಿರಾಜ್. ಈ ನಾಲ್ವರೇ ಈ ಬಾರಿ ಆರ್‌ಸಿಬಿ ತಂಡದ ಆಧಾರ ಸ್ಥಂಭಗಳಾಗಿ ನಿಂತಿದ್ದಾರೆ. ಬ್ಯಾಟಿಂಗ್‌ನಲ್ಲಿ ತ್ರಿಮೂರ್ತಿಗಳನ್ನು ಬಿಟ್ಟದೆ ಆರ್’ಸಿಬಿ ಪರ ಯಾರೂ ಮಿಂಚುತ್ತಿಲ್ಲ. ಡುಪ್ಲೆಸಿಸ್ 405, ವಿರಾಟ್ ಕೊಹ್ಲಿ 279 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 253 ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ, ಆರ್’ಸಿಬಿ ಪರ 4ನೇ ಅತೀ ಹೆಚ್ಚಿನ ರನ್ ದಿನೇಶ್ ಕಾರ್ತಿಕ್ ಗಳಿಸಿರುವ 61 ರನ್.

ಆರ್‌ಸಿಬಿ ತಂಡ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ನಂತರ ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಆಟವಾಡಿ ತಂಡಕ್ಕೆ ಆಸರೆಯಾಗಬಲ್ಲ ಭರವಸೆಯ ಆಟಗಾರ ಆರ್‌ಸಿಬಿ ತಂಡದಲ್ಲಿಲ್ಲ. ಇದೇ ವೇಳೆ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ ಗುಜರಾತ್ ಟೈಟನ್ಸ್ ಪರ ಧೂಳೆಬ್ಬಿಸುತ್ತಿದ್ದಾರೆ.

ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ್ದ ಅಭಿನವ್ ಮನೋಹರ್ ಕೇವಲ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಸ್ಫೋಟಕ 42 ರನ್ ಸಿಡಿಸಿದ್ದರು. ಕರ್ನಾಟಕದ ಆಟಗಾರರನ್ನು ಆರ್‌ಸಿಬಿ ಫ್ರಾಂಚೈಸಿ ಕಡೆಗಣಿಸಲು ಕಾರಣ ತಮಿಳುನಾಡಿನ ಮಲೋಲನ್ ರಂಗರಾಜನ್ (Malolan Rangarajan) ಎಂಬ ಮಾಜಿ ಕ್ರಿಕೆಟಿಗ.

ಇದನ್ನೂ ಓದಿ : Rishabh Pant : ವಿಶ್ವಕಪ್‌ಗಿಲ್ಲ ರಿಷಭ್ ಪಂತ್, ಬೆಂಗಳೂರಿಗೆ ಬಂದದ್ದೇಕೆ ಸ್ಫೋಟಕ ವಿಕೆಟ್ ಕೀಪರ್?

ಈತ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಪ್ರತಿಭಾನ್ವೇಷಕ (Scout or Talent hunt) ಜವಾಬ್ದಾರಿ ಹೊತ್ತಿದ್ದಾನೆ. ದೇಶೀಯ ಕ್ರಿಕೆಟ್ ಟೂರ್ನಿಗಳ ಮೇಲೆ ಕಣ್ಣಿಟ್ಟು ಪ್ರತಿಭಾನ್ವಿತ ಆಟಗಾರರನ್ನು ಗುರುತಿಸುವುದು ಈ ಪ್ರತಿಭಾನ್ವೇಷಕನ ಜವಾಬ್ದಾರಿ. ಆದರೆ ಈ ಮಲೋಲನ್ ರಂಗರಾಜನ್ ಕರ್ನಾಟಕದ ಪ್ರತಿಭಾವಂತರತ್ತ ಕಣ್ಣೆತ್ತಿಯೂ ನೋಡದೆ, ರಾಜಸ್ಥಾನದ ಮಹಿಪಾಲ್ ಲೋಮ್ರೋರ್, ಗೋವಾದ ಸುಯಾಶ್ ಪ್ರಭುದೇಸಾಯಿ, ದೆಹಲಿಯ ಅನುಜ್ ರಾವತ್’ರಂತಹ ಕಳಪೆ ಆಟಗಾರರನ್ನು ಆಯ್ಕೆ ಮಾಡಿ ಆರ್’ಸಿಬಿ ತಂಡದ ಮಧ್ಯಮ ಕ್ರಮಾಂಕವನ್ನೇ ಹಳ್ಳ ಹಿಡಿಸಿ ಬಿಟ್ಟಿದ್ದಾನೆ.

Malolan Rangarajan : This “greatness” of Tamil Nadu is the reason why RCB ignores Karnataka stars..!

Comments are closed.