Chandra Grahan 2022 : ಚಂದ್ರ ಗ್ರಹಣ 2022: ಯಾವ ರಾಶಿಯವರ ಮೇಲೆ ಪ್ರಭಾವ ಹೆಚ್ಚು…

ಈ ವರ್ಷದ ಕೊನೆಯ ಮತ್ತು ಎರಡನೇಯ ಖಂಡಗ್ರಾಸ ಚಂದ್ರ ಗ್ರಹಣವು (Chandra Grahan 2022) ನವೆಂಬರ್‌ 8 ರಂದು ನಡೆಯಲಿದೆ. ಹಿಂದೂ ಪಂಚಾಂಗದ ಪ್ರಕಾರ ನವೆಂಬರ್‌ 8 ಕಾರ್ತಿಕ ಹುಣ್ಣಿಮೆಯಾಗಿದೆ (Full Moon). ಜ್ಯೋತಿಷಿಗಳ ಪ್ರಕಾರ ಈ ಚಂದ್ರ ಗ್ರಹಣವು ಆತಂಕಕಾರಿಯಾಗಿದೆ. ಏಕೆಂದರೆ 15 ದಿನಗಳ ಅಂತರದಲ್ಲಿ ನಡೆಯಲಿರುವ ಎರಡನೇ ಗ್ರಹಣ ಇದಾಗಿದೆ. ಇದಕ್ಕೂ ಮೊದಲು ಅಕ್ಟೋಬರ್‌ 25 ದೀಪಾವಳಿಯ ಅಮಾವಾಸ್ಯೆಯಂದು ಸೂರ್ಯ ಗ್ರಹಣ (Solar Eclipse) ಸಂಭವಿಸಿತ್ತು. ಗ್ರಹಣವು ಕೆಲವು ರಾಶಿಯವರಿಗೆ ಶುಭವನ್ನು ತಂದರೆ, ಉಳಿದ ಕೆಲವು ರಾಶಿಯವರಿಗೆ ಅಶುಭವನ್ನು ತರಬಹುದು ಎಂದು ಹೇಳಲಾಗುತ್ತಿದೆ.

ಹಾಗಾದರೆ ಯಾವ ರಾಶಿಯವರಿಗೆ ಗ್ರಹಣದ ಪ್ರಭಾವ ಹೆಚ್ಚು:

ಮೇಷ ರಾಶಿ :
ಜೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷದ ಕೊನೆಯ ಚಂದ್ರ ಗ್ರಹಣವು ನಕಾರಾತ್ಮಕ ಪರಿಣಾಮ ಬೀರಲಿದೆ. ಮೇಷ ರಾಶಿಯವರಿಗೆ ಧನಹಾನಿ ಸಂಭವಿಸಬಹುದು, ಆರೋಗ್ಯ ಹದಗೆಡಬಹುದು. ಈ ರಾಶಿಯವರಿಗೆ ಇದು ಹೂಡಿಕೆಗೆ ಅನುಕೂಲಕರ ಸಮಯವಲ್ಲ.

ವೃಷಭ ರಾಶಿ :
ಈ ರಾಶಿಯವರು ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರಿಗೆ ಈ ಸಮಯವು ಉತ್ತಮ ‌ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಕನ್ಯಾ ರಾಶಿ :
ಈ ರಾಶಿಯವರು ಕೌಟುಂಬಿಕ ವಿವಾದಗಳನ್ನು ಎದುರಿಸಬೇಕಾಗಬಹುದು. ಕನ್ಯಾ ರಾಶಿಯವರಿಗೆ ಧನ ಲಾಭದ ಯೋಗವಿದೆ. ಆದರೂ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.

ಮೀನ ರಾಶಿ :
ಮೀನ ರಾಶಿಯವರಿಗೆ ಆರೋಗ್ಯದ ಮೇಲೆ ಚಂದ್ರ ಗ್ರಹಣವು ನಕಾರಾತ್ಮಕ ಪರಿಣಾಮ ಬೀರಲಿದೆ. ಹಣ ನಷ್ಟವಾಗುವ ಸಂಭವವಿದೆ. ಇದಕ್ಕಾಗಿ ಅನಗತ್ಯ ಖರ್ಚು–ವೆಚ್ಚವನ್ನು ತಪ್ಪಿಸುವುದು ಒಳ್ಳೆಯದು.

ಇದನ್ನೂ ಓದಿ : Chandra Grahan 2022: ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ…

ಇದನ್ನೂ ಓದಿ : Horoscope Today : ಹೇಗಿದೆ ಗುರುವಾರದ ದಿನಭವಿಷ್ಯ (03.11.2022)

(Chandra Grahan 2022 of November 2022 increasing worry 4 zodiac signs)

Comments are closed.