ಮಯಾಂಕ್ ಅಗರ್ವಾಲ್ ದ್ವಿಶತಕ ವ್ಯರ್ಥ : ರಣಜಿ ಸೆಮಿಫೈನಲ್ ಸೋತ ಕರ್ನಾಟಕ

ಬೆಂಗಳೂರು: ನಾಯಕ ಮಯಾಂಕ್ ಅಗರ್ವಾಲ್ ದ್ವಿಶತಕದ (Mayank Agarwal double century) ನಡುವಲ್ಲೂ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ದದ ರಣಜಿ ಟ್ರೋಫಿ ಸೆಮಿ ಫೈನಲ್‌ ಪಂದ್ಯ ಸೋಲು ಕಂಡಿದೆ. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ನಡುವಲ್ಲೂ ನಾಯಕ ಮಯಾಂಕ್‌ ಏಕಾಂಗಿ ಹೋರಾಟ ನಡೆಸಿದ್ದರು. ಆದರೆ ಸೌರಾಷ್ಟ್ರದ ಆಟಗಾರರು ಕರ್ನಾಟಕದ ರಣಜಿ ಟ್ರೋಫಿ ಗೆಲ್ಲುವ ಕನಸ್ಸನ್ನು ಭಗ್ನ ಮಾಡಿದ್ದಾರೆ.

ಮೊದಲ ಇನ್ನಿಂಗ್ಸ್ ನಲ್ಲಿ ನಾಯಕ ಅಗರ್ವಾಲ್‌ ದ್ವಿಶತಕ ಸಿಡಿಸಿದ್ದರು. ಆರಂಭದಲ್ಲಿ ಕುಸಿತ ಕಂಡಿದ್ದ ತಂಡಕ್ಕೆ ಮಯಾಂಕ್‌ ಆಸರೆಯಾಗಿದ್ದರು, ದ್ವಿಶತಕದ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದ್ದಾರೆ. ಆರಂಭಿಕರಾದ ರವಿಕುಮಾರ್‌ ಸಮರ್ಥ್‌ ಕೇವಲ ಮೂರು ರನ್‌ ಗಳಿಸಿ ಔಟಾದರು. ಅವರ ಬೆನ್ನಲ್ಲೇ ದೇವದತ್‌ ಪಡಿಕಲ್‌ ಕೂಡಾ ಒಂದಂಕಿ ಮೊತ್ತಕ್ಕೆ ನಿರ್ಗಮಿಸಿದರು. ಕೆಲ ಕಾಲ ನಾಯಕನ ಜತೆಗೂಡಿ ನಿಕಿನ್‌ ಜೋಸ್‌ ಪ್ರತಿರೋಧ ಒಡ್ಡಿದರು. ಆದರೆ ಅವರ ಆಟ 18 ರನ್‌ಗಳಿಗೆ ಮುಕ್ತಾಯವಾಗಿದೆ. ಮನೀಶ್‌ ಪಾಂಡೆ ಕೂಡಾ ಒಂದಂಕಿ ರನ್‌ ಗಳಿಸಿ ಔಟಾದರು. ಹೀಗಾಗಿ ಕೊನೆಯಲ್ಲಿ ನಾಯಕ ಮಯಾಂಕ್ ಮಾತ್ರ ಏಕಾಂಗಿಯಾಗಿ ಆಟ ಮುಂದುವರೆಸಿದ್ದಾರೆ.

ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶ್ರೇಯಸ್‌ ಗೋಪಾಲ್‌, ಎಮಿ ಫೈನಲ್‌ ಅಲ್ಲಿ ರನೌಟ್‌ ಆಗಿ ವಿಕೆಟ್‌ ಕಳೆದುಕೊಂಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಉತ್ತಮ ಜೊತೆಯಾಟದ ಅಗತ್ಯವಿದ್ದು, ಆ ವೇಳೆಯಲ್ಲಿ ಶ್ರೀನಿವಾಸ್‌ ಶರತ್‌ ಮತ್ತು ಅಗರ್ವಾಲ್‌ ಉತ್ತಮ ಜೊತೆಯಾಟ ಆಡಿದ್ದಾರೆ. ಶರತ್‌ ಅರ್ಧಶತಕ ಸಿಡಿಸಿ ಔಟಾದರು. ಆ ಬಳಿಕ ಬಂದ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ನಾಯಕನ ಆಟವಾಡಿದ ಮಯಾಂಕ್‌ ಮಾತ್ರ ಆಟ ಮುಂದುವರೆಸಿದ್ದಾರೆ.

ಸೌರಾಷ್ಟ್ರ ಪರ ಕುಶಾಂಗ್‌ ಪಟೇಲ್‌ ಮೂರು ವಿಕೆಟ್‌ ಪಡೆದರೆ, ಚೇತನ್‌ ಸಕಾರಿಯಾ 2 ವಿಕೆಟ್‌ ಪಡೆದರು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಭರ್ಜರಿಯಾಗಿ ಗೆದ್ದ ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇನ್ನಿಂಗ್ಸ್ ಮತ್ತು 281 ರನ್‌ಗಳಿಂದ ಭರ್ಜರಿಯಾಗಿ ಗೆದ್ದಿರುವ ಮಯಾಂಕ್‌ ಅಗರ್ವಾಲ್‌ ಪಡೆ, ತನ್ನ ಬತ್ತಳಿಕೆಗೆ ಒಂಬತ್ತನೇ ಟ್ರೋಫಿಯನ್ನು ಸೇರಿಸುವ ಉತ್ಸಾಹದಲ್ಲಿದೆ.

ಇದನ್ನೂ ಓದಿ : Ravindra Jadeja : ಟೆಸ್ಟ್ ಗೆಲುವಿನ ಬೆನ್ನಲ್ಲೇ ರವೀಂದ್ರ ಜಡೇಜಾಗೆ ಶಾಕ್ ಕೊಟ್ಟ ಬಿಸಿಸಿಐ

ಇದನ್ನೂ ಓದಿ : Border-Gavaskar test series : ರೋಹಿತ್ ಸೆಂಚುರಿ, ಜಡೇಜಾ-ಅಕ್ಷರ್ ಭರ್ಜರಿ ಬ್ಯಾಟಿಂಗ್; ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ

ಇದನ್ನೂ ಓದಿ : Border-Gavaskar test series : ರೋಹಿತ್ ಸೆಂಚುರಿ, ಜಡೇಜಾ-ಅಕ್ಷರ್ ಭರ್ಜರಿ ಬ್ಯಾಟಿಂಗ್; ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ

Mayank Agarwal double century : ಕರ್ನಾಟಕ ತಂಡದ ಆಟಗಾರರ ವಿವರ:

ದೇವದತ್ ಪಡಿಕ್ಕಲ್, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ಶ್ರೀನಿವಾಸ್ ಶರತ್ (ವಿಕೆಟ್‌ ಕೀಪರ್), ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ

Mayank Agarwal’s double century wasted: Karnataka lose Ranji semi-final

Comments are closed.