Meg Lanning : ಧೋನಿಯೂ ಅಲ್ಲ, ಪಾಂಟಿಂಗೂ ಅಲ್ಲ; ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕಿ ಈ ಮಹಿಳೆ

ಬೆಂಗಳೂರು: ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ನಾಯಕ ಯಾರು ಎಂಬ ಪ್ರಶ್ನೆಗೆ ಎರಡು ಹೆಸರುಗಳು ಕಣ್ಣ (Meg Lanning) ಮುಂದೆ ಬರುತ್ತವೆ. ಒಬ್ಬರು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮತ್ತೊಬ್ಬರು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್.

ಎಂ.ಎಸ್ ಧೋನಿ ತಮ್ಮ ವೃತ್ತಿಜೀವನದಲ್ಲಿ ಒಟ್ಟು 3 ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಗಳನ್ನು ಧೋನಿ ನಾಯಕತ್ವದಲ್ಲಿ ಭಾರತ ಗೆದ್ದಿದೆ. ಇನ್ನು ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಒಟ್ಟು 4 ಐಸಿಸಿ ಟ್ರೋಫಿಗಳನ್ನು (2 ಏಕದಿನ ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ) ಗೆದ್ದಿದೆ. ಆದರೆ ಐಸಿಸಿ ಟ್ರೋಫಿಗಳನ್ನು ಗೆದ್ದ ಆಧಾರದಲ್ಲಿ ಹೇಳುವುದಾದರೆ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ಯಾಪ್ಟನ್ ಚಾಣಾಕ್ಷ ಧೋನಿಯೂ ಅಲ್ಲ, ಪಂಟರ್ ಪಾಂಟಿಂಗೂ ಅಲ್ಲ. ಬದಲಾಗಿ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ (most ICC titles won as captain).

ಮೆಗ್ ಲ್ಯಾನಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್’ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 19 ರನ್’ಗಳಿಂದ ಮಣಿಸಿದ ಆಸೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದರೊಂದಿಗೆ 30 ವರ್ಷದ ಮೆಗ್ ಲ್ಯಾನಿಂಗ್ ಸಾರಥ್ಯದಲ್ಲಿ ಆಸ್ಟ್ರೇಲಿಯಾ ತಂಡ ಒಟ್ಟು 5 ಐಸಿಸಿ ಟ್ರೋಫಿಗಳನ್ನು ಗೆದ್ದಂತಾಗಿದೆ. ಇದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ನಾಯಕ/ನಾಯಕಿಯಾಗಿ ಒಬ್ಬ ಆಟಗಾರ ಅಥವಾ ಆಟಗಾರ್ತಿ ಗೆದ್ದಿರುವ ಅತೀ ಹೆಚ್ಚು ಟ್ರೋಫಿ. ಮೆಗ್ ಲ್ಯಾನಿಂಗ್ ನೇತೃತ್ವದಲ್ಲಿ ಆಸೀಸ್ ತಂಡ ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಚಿನ್ನದ ಪದಕವನ್ನೂ ಗೆದ್ದ ಸಾಧನೆ ಮಾಡಿದೆ.

ಇದನ್ನೂ ಓದಿ : Mayank Agarwal to lead Rest of India : ಇರಾನಿ ಕಪ್ ಪಂದ್ಯಕ್ಕೆ ರೆಸ್ಟ್ ಆಫ್ ಇಂಡಿಯಾ ತಂಡ ಪ್ರಕಟ, ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ

ಇದನ್ನೂ ಓದಿ : ಪತ್ನಿ ಸಮೇತ ಮಹಾಕಾಳೇಶ್ವರನ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಶಿವಾನುಗ್ರಹ?

ಅತೀ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದ ನಾಯಕ/ನಾಯಕಿ

  1. ಮೆಗ್ ಲ್ಯಾನಿಂಗ್
    ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ
    ಒಟ್ಟು 5 ಐಸಿಸಿ ಟ್ರೋಫಿ:
    ಟಿ20 ವಿಶ್ವಕಪ್: 2014, 2018, 2020, 2023
    ಏಕದಿನ ವಿಶ್ವಕಪ್: 2022)
  2. ರಿಕಿ ಪಾಂಟಿಂಗ್
    ಆಸ್ಟ್ರೇಲಿಯಾ ತಂಡದ ಮಾಜಿ ನಾಯತ
    ಒಟ್ಟು 4 ಐಸಿಸಿ ಟ್ರೋಫಿ:
    ಏಕದಿನ ವಿಶ್ವಕಪ್: 2003, 2007
    ಚಾಂಪಿಯನ್ಸ್ ಟ್ರೋಫಿ: 2006, 2009
  3. ಎಂ.ಎಸ್ ಧೋನಿ
    ಭಾರತ ತಂಡದ ಮಾಜಿ ನಾಯಕ
    ಒಟ್ಟು 3 ಐಸಿಸಿ ಟ್ರೋಫಿ:
    ಟಿ20 ವಿಶ್ವಕಪ್: 2007
    ಏಕದಿನ ವಿಶ್ವಕಪ್: 2011
    ಚಾಂಪಿಯನ್ಸ್ ಟ್ರೋಫಿ: 2013

Meg Lanning : Neither Dhoni nor Ponting; This woman is the greatest cricketer of all time

Comments are closed.