Mohammad Siraj : ಐಪಿಎಲ್‌ನಲ್ಲಿ ಸಿರಾಜ್ ಬೆಂಕಿ ಬೌಲಿಂಗ್, ಟ್ರೋಲ್ ಆಗಿದ್ದ ಆಟಗಾರ ಈಗ ಖತರ್ನಾಕ್ ಬೌಲರ್

ಬೆಂಗಳೂರು : ಕೆಲ ವರ್ಷಗಳ ಹಿಂದೆ ಐಪಿಎಲ್’ನಲ್ಲಿ ತಮ್ಮ ಲಯವಿಲ್ಲದ ಬೌಲಿಂಗ್’ನಿಂದ ಟ್ರೋಲ್ ಆಗಿದ್ದ ಆರ್’ಸಿಬಿ ವೇಗಿ ಮೊಹಮ್ಮದ್ ಸಿರಾಜ್ (Mohammad Siraj) ಈಗ ಐಪಿಎಲ್ ಅಂಗಣದ ಖತರ್ನಾಕ್ ಬೌಲರ್. 29 ವರ್ಷದ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಪ್ರಸಕ್ತ ಐಪಿಎಲ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಅಮೋಘ ಪ್ರದರ್ಶನ ತೋರುತ್ತಿದ್ದು, ಆಡಿರುವ 6 ಪಂದ್ಯಗಳಿಂದ 12 ವಿಕೆಟ್ ಪಡೆದು ಟೂರ್ನಿಯಲ್ಲೇ ಅತೀ ಹೆಚ್ಚು ವಿಕೆಟ್’ಗಳೊಂದಿಗೆ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಆರು ಪಂದ್ಯಗಳಲ್ಲಿ ಒಟ್ಟು 24 ಓವರ್ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ 6.70 ಎಕಾನಮಿಯಲ್ಲಿ ಕೇವಲ 161 ರನ್ ನೀಡಿ 12 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ 40 ಓವರ್’ಗಳಲ್ಲಿ 400ಕ್ಕೂ ಹೆಚ್ಚು ರನ್ ದಾಖಲಾದ ಆರ್’ಸಿಬಿ Vs ಸಿಎಸ್’ಕೆ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 4 ಓವರ್’ಗಳಲ್ಲಿ ಕೇವಲ 30 ರನ್ನಿತ್ತು 1 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲ, ಪಂದ್ಯದಲ್ಲಿ 400ಕ್ಕೂ ಹೆಚ್ಚು ರನ್ ದಾಖಲಾದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಮಿಂಚಿದ್ದ ಸಿರಾಜ್ 4 ಓವರ್’ಗಳಲ್ಲಿ ಕೇವಲ 22 ರನ್ನಿತ್ತು 3 ವಿಕೆಟ್ ಕಬಳಿಸಿದ್ದರು.

ಮೂರ್ನಾಲ್ಕು ವರ್ಷಗಳ ಹಿಂದೆ ಮೊಹಮ್ಮದ್ ಸಿರಾಜ್ ತಮ್ಮ ದುಬಾರಿ ಬೌಲಿಂಗ್ ಮೂಲಕ ಆರ್’ಸಿಬಿ ಅಭಿಮಾನಿಗಳಿಂದಲೇ ಟ್ರೋಲ್’ಗೆ ಗುರಿಯಾಗಿದ್ದರು. ಸಿರಾಜ್ ಬೌಲಿಂಗ್’ಗೆ ಬಂದ್ರು ಅಂದ್ರೆ ಆರ್’ಸಿಬಿ ಫ್ಯಾನ್ಸ್ ಉಸಿರು ಬಿಗಿ ಹಿಡಿದು ಕೂರುವ ಪರಿಸ್ಥಿತಿ ಇತ್ತು. ಇವತ್ತು ಅದೇ ಬೌಲರ್ ಐಪಿಎಲ್ ಅಖಾಡದಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಗುರುವಾರ ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 21 ರನ್ನಿಗೆ 4 ವಿಕೆಟ್ ಪಡೆದು ಆರ್’ಸಿಬಿ ಗೆಲುವಿಗೆ ಕಾರಣರಾಗಿದ್ದ ಸಿರಾಜ್, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್’ಗಳಲ್ಲಿ 44 ರನ್ ನೀಡಿದ್ದು ಬಿಟ್ಟರೆ, ಉಳಿದ ಐದು ಪಂದ್ಯಗಳಲ್ಲಿ ಸಿರಾಜ್ ಒಮ್ಮೆಯೂ 30ಕ್ಕಿಂತ ಹೆಚ್ಚು ರನ್ ನೀಡಿಲ್ಲ. ಅದರಲ್ಲೂ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಎಕಾನಮಿ 6 ದಾಟಿಲ್ಲ. ಕಳೆದ ವರ್ಷದ ಐಪಿಎಲ್’ನಲ್ಲಿ ಆಡಿದ 15 ಪಂದ್ಯಗಳಿಂದ 10.08ರ ದುಬಾರಿ ಎಕಾನಮಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ದರು. ಆದರೆ ಈ ಬಾರಿಯ ಐಪಿಎಲ್’ನಲ್ಲಿ 6 ಪಂದ್ಯಗಳಿಂದ 12 ವಿಕೆಟ್ ಪಡೆದಿರುವ ಸಿರಾಜ್, 24 ಓವರ್’ಗಳಲ್ಲಿ ಈಗಾಗಲೇ 82 ಡಾಟ್ ಬಾಲ್’ಗಳನ್ನು ಎಸೆದು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : Shreyas Iyer surgery success : ಶ್ರೇಯಸ್ ಅಯ್ಯರ್‌ಗೆ ಲಂಡನ್‌ನಲ್ಲಿ ಸಕ್ಸಸ್‌ಫುಲ್ ಸರ್ಜರಿ, ಮುಂಬೈಕರ್ ಕಂಬ್ಯಾಕ್ ಯಾವಾಗ ಗೊತ್ತಾ?

ಐಪಿಎಲ್-2023: ಮೊಹಮ್ಮದ್ ಸಿರಾಜ್ ಬೌಲಿಂಗ್ ಪರ್ಫಾಮೆನ್ಸ್ :

  • 4-0-21-1 Vs ಮುಂಬೈ ಇಂಡಿಯನ್ಸ್
  • 4-0-44-1 Vs ಕೋಲ್ಕತಾ ನೈಟ್ ರೈಡರ್ಸ್
  • 4-0-22-3 Vs ಲಕ್ನೋ ಸೂಪರ್ ಜೈಂಟ್ಸ್
  • 4-0-21-2 Vs ಡೆಲ್ಲಿ ಕ್ಯಾಪಿಟಲ್ಸ್
  • 4-0-30-1 Vs ಚೆನ್ನೈ ಸೂಪರ್ ಕಿಂಗ್ಸ್
  • 4-0-21-4 Vs ಪಂಜಾಬ್ ಕಿಂಗ್ಸ್

Mohammad Siraj : Siraj Benki bowling in IPL, the player who was a troll is now a Khatarnak bowler

Comments are closed.