MS Dhoni Issued Notice ಎಂ.ಎಸ್​ ಧೋನಿಗೆ ‘ಸುಪ್ರೀಂ’ನಿಂದ ನೋಟಿಸ್​ : ಏನಿದು ಆಮ್ರಪಾಲಿ ಪ್ರಕರಣ, ಇಲ್ಲಿದೆ ಮಾಹಿತಿ

MS Dhoni : ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ (MS Dhoni Issued Notice) ಸೋಮವಾರದಂದು ಸುಪ್ರೀಂ ಕೋರ್ಟ್ ನೋಟಿಸ್​ ಜಾರಿ ಮಾಡಿದೆ. ಇದರ ಜೊತೆಯಲ್ಲಿ ಧೋನಿ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಆರಂಭಿಸಿದ್ದ ಆಮ್ರಪಾಲಿ ಗ್ರೂಪ್​ ವಿರುದ್ಧ ಮಧ್ಯಸ್ಥಿಕೆ ಪ್ರಕ್ರಿಯೆಗೆ ತಡೆ ನೀಡಿದೆ. ಆಮ್ರಪಾಲಿ ಗ್ರೂಪ್​ನ ಬ್ರಾಂಡ್​ ಅಂಬಾಸಿಡರ್​ ಆಗಿದ್ದ ಎಂ.ಎಸ್​ ಧೋನಿ ತನಗೆ ಬರಬೇಕಾದ 40 ಕೋಟಿ ರೂಪಾಯಿಗಳನ್ನು ಕೊಡಿಸುವಂತೆ ಕೋರಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಆಮ್ರಪಾಲಿ ಗ್ರೂಪ್​ನ ರಾಯಭಾರಿ ಆಗಿದ್ದ ಮಹೇಂದ್ರ ಸಿಂಗ್​ ಧೋನಿ 2016ರಲ್ಲಿ ಈ ಗ್ರೂಪ್​ನಿಂದ ಹೊರ ಬಂದಿದ್ದರು. ಅಲ್ಲದೇ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಆಮ್ರಪಾಲಿ ಸಂಸ್ಥೆ ನೀಡಬೇಕೆಂದು ಕೋರಿ ಮೊದಲು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆಮ್ರಪಾಲಿ ಗ್ರೂಪ್​ನಿಂದ ಮನೆ ಖರೀದಿ ಮಾಡಿದವರೂ ಸೇರಿದಂತೆ ಒಟ್ಟು 1800 ಮಂದಿಗೆ ನೋಟಿಸ್​ ನೀಡಿದೆ. ಆಮ್ರಪಾಲಿ ಗ್ರೂಪ್​ ಧೋನಿಗೆ ಬಾಕಿ ಮೊತ್ತ ಪಾವತಿಸಲು ಮುಂದಾದರೆ ನಮಗೆ ಗ್ರೂಪ್​ನಿಂದ ಬರಬೇಕಾದ ಹಣ ಸಿಗುವುದು ಮತ್ತಷ್ಟು ತಡವಾಗುತ್ತದೆ ಎಂಬುದು ಆಮ್ರಪಾಲಿ ಗ್ರೂಪ್​ನ ಗ್ರಾಹಕರ ಅಳಲಾಗಿದೆ. ಹೀಗಾಗಿ ಆಮ್ರಪಾಲಿ ಗ್ರೂಪ್​ನ ಗ್ರಾಹಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಆಮ್ರಪಾಲಿ ಗ್ರೂಪ್​ ಗ್ರಾಹಕರಿಂದ ಹಣ ಪಡೆದು ಫ್ಲ್ಯಾಟ್​ ನೀಡಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದೆ. ಈ ಗ್ರೂಪ್​ಗೆ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದ ಮಹೇಂದ್ರ ಸಿಂಗ್​ ಧೋನಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಯಾವಾಗ ಆಮ್ರಪಾಲಿ ಗ್ರೂಪ್​ನ ಕಳ್ಳಾಟಗಳು ಬಯಲಿಗೆ ಬಂತೋ ಅಂದೇ ಧೋನಿ ಆಮ್ರಪಾಲಿ ಗ್ರೂಪ್​ನೊಂದಿಗಿನ ತಮ್ಮ ಒಪ್ಪಂದದಿಂದ ಹಿಂದೆ ಸರಿದಿದ್ದರು. ಆದರೆ ನನಗೆ ಬಾಕಿ ನೀಡಬೇಕಾದ ಮೊತ್ತವನ್ನು ಆಮ್ರಪಾಲಿ ಸಂಸ್ಥೆ ನೀಡಿಲ್ಲ ಎಂಬುದು ಧೋನಿ ವಾದವಾಗಿದೆ .

ಇದನ್ನು ಓದಿ : Nikhil Kumaraswamy : ಮುಂದಿನ ಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಇಲ್ಲ : ಹೆಚ್​ಡಿಕೆ ಸ್ಪಷ್ಟನೆ

ಇದನ್ನೂ ಓದಿ : Youth dies : ಕಬಡ್ಡಿ ಆಡುತ್ತಿರುವಾಗಲೇ ಹಾರಿ ಹೋಯ್ತು ವಿದ್ಯಾರ್ಥಿಯ ಪ್ರಾಣ ಪಕ್ಷಿ: ಮನಕಲುಕುತ್ತೆ ಯುವಕನ ಕೊನೆಕ್ಷಣದ ವಿಡಿಯೋ

MS Dhoni Issued Notice By Supreme Court In Arbitration Proceeding Against Amrapali Group

Comments are closed.