M S Dhoni : ಸಚಿನ್ ತೆಂಡೂಲ್ಕರ್ ಅವರಂತೆ ಆಡಲು ಬಯಸಿದ್ದೆ ಆದ್ರೆ, ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

ಚೆನ್ನೈ : MS Dhoni Sachin Tendulkar : ಸದ್ಯ ಕ್ರಿಕೆಟ್ ಮೈದಾನದಿಂದ ದೂರ ಇರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ತಮ್ಮ ಆಸೆ ಏನಾಗಿತ್ತು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಮೈದಾನದಲ್ಲಿ ಕಾಣಿಸಿಕೊಳ್ಳದೇ ಇದ್ರೂ ಧೋನಿ ಹವಾ ಇನ್ನೂ ಕಡಿಮೆ ಆಗಿಲ್ಲ. ಇದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾತ್ರ ಐಪಿಎಲ್ ನಲ್ಲಿ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ ಹಳೆಯ ನೆನಪುಗಳನ್ನ ಮೆಲಕು ಹಾಕಿದ್ದಾರೆ. ತಾವು ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ ತೆಂಡೂಲ್ಕರ್ ಅವರಂತೆ ಆಡಲು ಬಯಸಿದ್ದೆ ಎಂದಿದ್ದಾರೆ’

ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆ ಮಹೇಂದ್ರ ಧೋನಿ ಸಂದರ್ಶನವೊಂದರ ತುಣಕನ್ನ ಹಂಚಿಕೊಂಡಿದ್ದು ಅದ್ರಲ್ಲಿ ಧೋನಿ ತಾವು ಸಚಿನ್ ತೆಂಡೂಲ್ಕರ್ ಅವರ ಆಟವನ್ನ ನೋಡಿಕೊಂಡೇ ಬೆಳೆದಿದ್ದು, ಮೈದಾನದಲ್ಲಿ ಅವರಂತೆಯೇ ನಾನು ಆಡಲು ಇಷ್ಟ ಪಡುತ್ತಿದೆ. ಆದ್ರೆ ನಂತ್ರ ಅಂತಾರಾಷ್ಟ್ರೀಯ ಕಿಕೆಟ್ ಗೆ ಬಂದಾಗ ನನಗೆ ಅರಿವಿಗೆ ಬಂದಿದ್ದು ಏನಂದ್ರೆ, ಸಚಿನ್ ತೆಂಡೂಲ್ಕರ್ ಅವರ ಶೈಲಿಯೇ ಬೇರೆ ಇದೆ. ಅವರಂತೆ ಆಡೋದು ಸಾಧ್ಯವಿಲ್ಲ ಎಂದಿದ್ದಾರೆ.

ಅದೇ ಸಂದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬಳು ನಿಮಗೆ ಶಾಲೆ, ಕಾಲೇಜಿನಲ್ಲಿ ಯಾವ ಸಬ್ಜೆಕ್ಟ್ ಅಂದ್ರೆ ಯಾವ ವಿಷಯ ಇಷ್ಟವಾಗಿತ್ತು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಉತ್ತರಿಸಿರುವ ಮಹೇಂದ್ರ ಸಿಂಗ್ ‘ಕ್ರೀಡೆಗೆ ಯಾವುದಾದರೂ ವಿಷಯದ ಅರ್ಹತೆ ಬೇಕಾ ಎಂದು  ನಗುತ್ತಲೇ ಉತ್ತರಿಸಿದ್ದಾರೆ. ಧೋನಿ ಉತ್ತರ ಕೇಳಿ ಎಲ್ಲರೂ ನಗೆಗಡಲಲ್ಲಿ ತೇಲಿದ್ರು. ಹೀಗಿದ್ರೂ ಶಾಲೆಯಲ್ಲಿದ್ದಾಗ ಧೋನಿ ತಮಗೆ ಪಿಟಿ ಅಂದ್ರೆ ದೈಹಿಕ ಶಿಕ್ಷಣದ ಕ್ಲಾಸ್ ಇಷ್ಟ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ‘ ತಲಾ ಅವರಿಗೂ PT ಕ್ಲಾಸ್ ಅಂದ್ರೆ ಇಷ್ಟ ಅನ್ನೋ ಬರಹದಲ್ಲಿ ಮಹೇಂದ್ರ ಸಿಂಗ್ ಧೋನಿಯ ಸಂದರ್ಶನ ತುಣಕನ್ನ ಹಂಚಿಕೊಂಡಿದೆ.

ಇದನ್ನೂ ಓದಿ : LPG cylinders ration shops : ಗುಡ್ ನ್ಯೂಸ್‌ : ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್‌

ಇದನ್ನೂ ಓದಿ : Women’s Asia Cup Final INDW vs SLW : ಮಹಿಳಾ ಏಷ್ಯಾ ಕಪ್: ನಾಳೆ ಭಾರತ Vs ಶ್ರೀಲಂಕಾ ಫೈನಲ್, 8ನೇ ಕಿರೀಟದ ಗುರಿಯಲ್ಲಿ ಟೀಮ್ ಇಂಡಿಯಾ

ಇದನ್ನೂ ಓದಿ : T20 World Cup : ಕೆ.ಎಲ್ ರಾಹುಲ್ ಏಕಾಂಗಿ ಹೋರಾಟ ವ್ಯರ್ಥ, 2ನೇ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಸೋಲು

MS Dhoni wanted to play like legendary cricketer Sachin Tendulkar but realized his style was different

Comments are closed.