Student Teacher Love Suicide: ಟೀಚರ್ ಜೊತೆ ಪ್ರೀತಿ.. ಲವ್ ಬ್ರೇಕ್ ಅಪ್.. ಸಾವಿಗೆ ಶರಣಾದ ವಿದ್ಯಾರ್ಥಿ.. ಶಿಕ್ಷಕಿ ಅರೆಸ್ಟ್

ಚೆನ್ನೈ : Student Teacher Love Suicide ಗುರುವಿಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ಸ್ಥಾನವನ್ನ ನೀಡಲಾಗಿದೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕಿಯ ಪ್ರೇಮ ಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಶಿಕ್ಷಕಿಯನ್ನ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ : ತಮಿಳುನಾಡು ರಾಜಧಾನಿ ಚೆನ್ನೈನಿಂದ ಕೇವಲ 20 ಕಿಲೋಮಿಟರ್ ದೂರದಲ್ಲಿರುವ ಅಂಬತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ವಿಚಿತ್ರ ಪ್ರಕರಣ ಇದು. 17 ವರ್ಷದ ವಿದ್ಯಾರ್ಥಿ ಸರ್ಕಾರಿ ಅನುದಾನಿತ ಶಾಲೆಯಲ್ಲಿ ತಾನು 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಅದೇ ಶಾಲೆಯಲ್ಲಿದ್ದ ಶಿಕ್ಷಕಿಯೊಬ್ಬಳು ಆ ವಿದ್ಯಾರ್ಥಿಗೆ ಪಾಠ ಮಾಡುತ್ತಿದ್ಲು. ಇದೇ ವೇಳೆ ಇಬ್ಬರೂ ಪ್ರೀತಿಸುತ್ತಿದ್ದರು ಅಂತಾ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಆದ್ರೆ, ವಿದ್ಯಾರ್ಥಿ 10ನೇ ತರಗತಿ ಪಾಸಾಗಿ ಕಾಲೇಜಿಗೆ ಹೋದ್ಮೇಲೂ ಆಗಾಗ ತನ್ನ ಸಹಪಾಠಿಗಳ ಜೊತೆಗೆ ಶಿಕ್ಷಕಿಯ ಮನೆಗೆ ಹೋಗ್ತಾ ಇದ್ನಂತೆ. ಸುಮಾರು ಮೂರು ವರ್ಷದಿಂದ ಶಿಕ್ಷಕಿ ಜೊತೆ ಪ್ರೀತಿ ಪ್ರೇಮ ಅಂತ ಮರ ಸುತ್ತಿದ್ದನಂತೆ. ಆದ್ರೆ ಇತ್ತೀಚೆಗೆ ಶಿಕ್ಷಕಿಗೆ ಬೇರೊಬ್ಬನ ಜೊತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಹೀಗಿದ್ರೂ ಶಿಕ್ಷಕಿ ಜೊತೆಗೆ ಸಂಬಂಧವನ್ನ ಮುಂದುವರಿಸಿಲು ವಿದ್ಯಾರ್ಥಿ ಬಯಸಿದ್ನಂತೆ. ಆದ್ರೆ ಶಿಕ್ಷಕಿ ವಿದ್ಯಾರ್ಥಿ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿದ್ಲಂತೆ. ಇದ್ರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಂಬತ್ತೂರು ಮಹಿಳಾ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಜ್ಯೋತಿ ಲಕ್ಷ್ಮೀ ಹೇಳಿಕೆ ನೀಡಿದ್ದಾರೆ.

ಅಸಲಿಗೆ 12ನೇ ತರಗತಿ ಪರೀಕ್ಷೆ ಮುಗಿದ್ಮೇಲೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಸಾವಿಗೆ ಬೇರೆ ಕಾರಣಗಳು ಇರಬಹುದೆಂದು ಆತನ ತಾಯಿ ಶಂಕಿಸಿದ್ಲು. ಪೊಲೀಸರ ತನಿಖೆಯಲ್ಲಿ ವಿದ್ಯಾರ್ಥಿಯ ಮೊಬೈಲ್ ನಲ್ಲಿ ಶಿಕ್ಷಕಿ ಜೊತೆಗಿನ ಫೋಟೋಗಳು ಲಭ್ಯವಾಗಿವೆ. ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಗೊತ್ತಾಗಿದೆ. ಬಳಿಕ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಶಿಕ್ಷಕಿಯನ್ನ ಬಂಧಿಸಿದ್ದಾರೆ. ವಿದ್ಯಾರ್ಥಿನಿ ಜೊತೆಗಿನ ಪ್ರೇಮರಾಮಾಣದಿಂದ ಶಿಕ್ಷಕಿ ಜೈಲು ಪಾಲಾಗುವಂತಾಗಿದೆ.

ಇದನ್ನೂ ಓದಿ : bjp mla uday garudachar : ಚುನಾವಣಾ ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ : ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ 2 ತಿಂಗಳು ಜೈಲು ಶಿಕ್ಷೆ

ಇದನ್ನೂ ಓದಿ : LPG cylinders ration shops : ಗುಡ್ ನ್ಯೂಸ್‌ : ಪಡಿತರ ಅಂಗಡಿಯಲ್ಲೇ ಸಿಗುತ್ತೆ LPG ಸಿಲಿಂಡರ್‌

ಇದನ್ನೂ ಓದಿ : Puneeth RajKumar Movie Gandhadagudi : “ಪುನೀತ್‌ ಪರ್ವ” ಕಾರ್ಯಕ್ರಮಕ್ಕೆ ಆಹ್ವಾನ : ಸಿಎಂ ಬೊಮ್ಮಾಯಿ ಆಹ್ವಾನಿಸಿದ ರಾಜ್ ಕುಟುಂಬ

Student Teacher Love Suicide Chennai Student Dies By Suicide, Cops Arrest Teacher Who Had An Affair With Him

Comments are closed.