ರಣಜಿ ಟ್ರೋಫಿಯಲ್ಲಿ ಜಡೇಜ ಕಮಾಲ್, 7 ವಿಕೆಟ್ ಪಡೆದು ಕಾಂಗರೂಗಳಿಗೆ ವಾರ್ನಿಂಗ್ ಕೊಟ್ಟ ರಾಕ್ ಸ್ಟಾರ್

ಚೆನ್ನೈ: ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ (Ravindra Jadeja) ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ (Ranji Trophy 2022-23) ಪಂದ್ಯದಲ್ಲಿ 7 ವಿಕೆಟ್ ಪಡೆಯುವ ಮೂಲಕ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ (National Cricket Academy) ಸಜ್ಜಾಗಿದ್ದಾರೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್ ‘ಬಿ’ ಪಂದ್ಯದ ಮೂರನೇ ದಿನ ರವೀಂದ್ರ ಜಡೇಜ ಅಮೋಘ ಬೌಲಿಂಗ್ ಪ್ರದರ್ಶನ ತೋರಿದರು. ತಮಿಳುನಾಡಿನ 2ನೇ ಇನ್ನಿಂಗ್ಸ್’ನಲ್ಲಿ ತಮ್ಮ ಸ್ಪಿನ್ ಕೈಚಳಕ ತೋರಿಸಿದ ರವೀಂದ್ರ ಜಡೇಜ 7 ವಿಕೆಟ್ ಪಡೆದು ಮಿಂಚಿದರು. ಜಡೇಜ ಸ್ಪಿನ್ ಮೋಡಿಗೆ ತತ್ತರಿಸಿದ ತಮಿಳುನಾಡು ತನ್ನ ದ್ವಿತೀಯ ಇನ್ನಿಂಗ್ಸ್’ನಲ್ಲಿ ಕೇವಲ 133 ರನ್ನಿಗೆ ಆಲೌಟಾಯಿತು.

ಪ್ರಥಮ ಇನ್ನಿಂಗ್ಸ್’ನಲ್ಲಿ 1 ವಿಕೆಟ್ ಪಡೆದಿದ್ದ ಜಡೇಜ 2ನೇ ಇನ್ನಿಂಗ್ಸ್’ನಲ್ಲಿ 53 ರನ್ನಿತ್ತು 7 ವಿಕೆಟ್ ಕಬಳಿಸಿದರು. ಸೌರಾಷ್ಟ್ರ ತಂಡದ ನಾಯಕತ್ವ ವಹಿಸಿರುವ ರವೀಂದ್ರ ಜಡೇಜ ಬ್ಯಾಟಿಂಗ್’ನಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾದರೂ, ಬೌಲಿಂಗ್’ನಲ್ಲಿ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದರು.ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯ ವೇಳೆ ರವೀಂದ್ರ ಜಡೇಜ ಪಾದದ ಗಾಯಕ್ಕೊಳಗಾಗಿದ್ದರು.

ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಿದ್ದ ಜಡೇಜ ಮುಂಬೈನಲ್ಲಿ ಪಾದದ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಗಾಯದಿಂದ ಚೇತರಿಸಿಕೊಂಡ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ಜಡೇಜ ಅಭ್ಯಾಸ ಆರಂಭಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ರಣಜಿ ಪಂದ್ಯದಲ್ಲಿ ಜಡೇಜ ಕಣಕ್ಕಿಳಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ 4 ಪಂದ್ಯಗಳ ಟೆಸ್ಟ್ ಸರಣಿ (India Vs Australia test series) ಫೆಬ್ರವರಿ 9 ರಂದು ಆರಂಭವಾಗಲಿದ್ದು, ಪ್ರಥಮ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ : IND vs NZ T20 : ಇಂದಿನಿಂದ ಭಾರತ Vs ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ : Playing XI

ಇದನ್ನೂ ಓದಿ : RCB ಆಟಗಾರ ಮೊಹಮ್ಮದ್ ಸಿರಾಜ್ ವಿಶ್ವದ ನಂ 1 ಬೌಲರ್

ಇದನ್ನೂ ಓದಿ : India vs New Zealand 3rd ODI : ರೋಹಿತ್ ಶರ್ಮಾ, ಶುಭಮನ್ ಗಿಲ್ ಆರ್ಭಟ : ನ್ಯೂಜಿಲೆಂಡ್ ಗೆ 385 ರನ್ ಸವಾಲು

ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳಾಪಟ್ಟಿ :

  • ಪ್ರಥಮ ಟೆಸ್ಟ್: ಫೆಬ್ರವರಿ 9-13 (ನಾಗ್ಪುರ)
  • ದ್ವಿತೀಯ ಟೆಸ್ಟ್: ಫೆಬ್ರವರಿ 17-21 (ದೆಹಲಿ)
  • ಮೂರನೇ ಟೆಸ್ಟ್: ಮಾರ್ಚ್ 01-05 (ಧರ್ಮಶಾಲಾ)
  • ನಾಲ್ಕನೇ ಟೆಸ್ಟ್: ಮಾರ್ಚ್ 09-13 (ಅಹ್ಮದಾಬಾದ್)

National Cricket Academy: Jadeja Kamal in Ranji Trophy, the rock star who took 7 wickets and gave a warning to Kangaroos

Comments are closed.