Avoid Fruits In Cough : ನಿಮ್ಮ ಮಕ್ಕಳು ಅತಿಯಾಗಿ ಕೆಮ್ಮುತ್ತಿದ್ದರೆ ಈ ಹಣ್ಣುಗಳಿಂದ ದೂರವಿಡಿ

ಚಳಿಗಾಲ (Winter) ದಲ್ಲಿ ಬೀಸುವ ಶೀತಗಾಳಿಯು ಮಕ್ಕಳಿಗೆ ಅನಾರೋಗ್ಯವನ್ನುಂಟು ಮಾಡುತ್ತದೆ. ಈ ಋತುವಿನಲ್ಲಿ ಶೀತ , ಜ್ವರ, ಗಂಟಲು ನೋವು, ಕಿವಿ ನೋವು ಮುಂತಾದವುಗಳು ಸಾಮಾನ್ಯ. ಕೆಲವು ಮಕ್ಕಳಲ್ಲಿ ರೋಗದ ಸೋಂಕು ಎರಡು, ಮೂರು ವಾರಗಳವರೆಗೆ ಇರುತ್ತದೆ. ಇದರಿಂದ ಪಾಲಕರು ಚಿಂತೆಗೀಡಾಗುತ್ತಾರೆ. ಆದರೆ ಸಾಮಾನ್ಯವಾಗಿ ಕೆಮ್ಮು, ಅಲರ್ಜಿ, ಶೀತ ಈ ರೀತಿ ರೋಗಗಳು ನಾವು ಸೇವಿಸುವ ಆಹಾರದಿಂದಲೇ ಬರುತ್ತವೆ (Avoid Fruits In Cough). ಹಾಗಾಗಿ ಮಕ್ಕಳಲ್ಲಿ ಇಂತಹ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಮಕ್ಕಳ ತಜ್ಞ ಡಾ. ನಿಹಾರ್ ಪರೇಖ್ ಅವರು ಪೋಷಕರು ತಮ್ಮ ಮಕ್ಕಳನ್ನು ಹೇಗೆ ಕಾಳಜಿ ಮಾಡಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಚಳಿಗಾಲದಲ್ಲಿ ಮಕ್ಕಳನ್ನು ಈ ಹಣ್ಣುಗಳಿಂದ ದೂರವಿಡಿ (Avoid Fruits In Cough) :

ಚಳಿಗಾಲದಲ್ಲಿ ಕಾಡುವ ನ್ಯೂಮೋನಿಯಾ, ಗಂಟಲು ನೋವು, ಶೀತ, ಜ್ವರ, ಕೆಮ್ಮು ಸೋಂಕುಗಳಿಂದ ದೂರವಿರಲು, ನಿಮ್ಮ ಮಕ್ಕಳಿಗೆ ದ್ರಾಕ್ಷಿ, ಸ್ಟ್ರಾಬೆರಿ, ಮತ್ತು ಲಿಚಿ ಹಣ್ಣುಗಳನ್ನು ನೀಡಬೇಡಿ. ಸ್ಟ್ರಾಬೆರಿ ಹಿಸ್ಟಮೈನ್ ಅನ್ನು ಬಿಡುಗಡೆ ಮಾಡುತ್ತದೆ. ಅದು ಕೆಮ್ಮನ್ನು ಪ್ರಚೋದಿಸುತ್ತದೆ. ಈಗಾಗಲೇ ಇರುವ ಕೆಮ್ಮನ್ನು ಉಲ್ಬಣಗೊಳಿಸುತ್ತದೆ ಅಥವಾ ಕೆಮ್ಮನ್ನು ಉಂಟುಮಾಡುತ್ತದೆ. ಹಾಗೆಯೇ ದ್ರಾಕ್ಷಿ ಮತ್ತು ಲಿಚಿ ನೈಸರ್ಗಿಕ ಸಕ್ಕರೆ ಅಧಿಕವಾಗಿರುವ ಹಣ್ಣುಗಳಾಗಿವೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಉತ್ತಮ ಮಾಧ್ಯಮವಾಗಿದೆ.

ಚಳಿಗಾಲದಲ್ಲಿ ಮಕ್ಕಳ ಆಹಾರದ ಕಾಳಜಿ ಹೀಗಿರಲಿ:
ಮಕ್ಕಳ ತಜ್ಞರು ಹೇಳುವುದೇನೆಂದರೆ ಕೃತಕವಾಗಿ ಸಿಹಿಗೊಳಿಸಲಾದ, ಕೃತಕ ಬಣ್ಣ ಅಥವಾ ಅತಿಯಾದ ತಣ್ಣನೆಯ ಆಹಾರಗಳನ್ನು ಮಕ್ಕಳಿಗೆ ಕೊಡಬೇಡಿ. ತಣ್ಣನೆಯ ಆಹಾರವು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಮತ್ತು ಬ್ಯಾಕ್ಟೀರಿಯಾವನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಐಸ್ ಕ್ರೀಮ್, ಚಾಕೊಲೇಟ್, ಕ್ಯಾಂಡಿ, ಪೇಸ್ಟ್ರಿ, ಡೋನಟ್ಸ್, ಕೇಕ್, ಸ್ಟ್ರಾಬೆರಿ, ಲಿಚಿ, ದ್ರಾಕ್ಷಿ ಮತ್ತು ಫ್ರಿಡ್ಜ್‌ನಲ್ಲಿ ಇರಿಸಲಾದ ಯಾವುದೇ ತಂಪಾದ ವಸ್ತುಗಳನ್ನು ಮಕ್ಕಳಿಗೆ ತಿನ್ನಲು ಕೊಡಬೇಡಿ. ಇಲ್ಲಿ ಹೇಳಿರುವ ಹಣ್ಣುಗಳನ್ನು ಮಕ್ಕಳು ತಿನ್ನುವುದನ್ನು ತಪ್ಪಿಸಬೇಕು. ಹಾಗೆಯೇ ಮಕ್ಕಳಿಗೆ ಏನು ತಿನ್ನಬೇಕು ಮತ್ತು ಏನ್ನನು ತಿನ್ನಬಾರದು ಎಂದು ತಿಳಿಯುವುದಿಲ್ಲ. ಅದಕ್ಕಾಗಿ ಮಕ್ಕಳಿಗೆ ಶೀತ ಹೆಚ್ಚಿಸುವಂತಹ ಆಹಾರಗಳನ್ನು ನೀಡಬಾರದು. ಇದನ್ನು ಪೋಷಕರು ನೆನಪಿನಲ್ಲಿಡಬೇಕು. ಬಿಸಿಯಾದ ಮತ್ತು ತಾಜಾ ಆಹಾರಗಳನ್ನೇ ಮಕ್ಕಳಿಗೆ ನೀಡಬೇಕು. ಒಂದುವೇಳೆ ನಿಮ್ಮ ಮಗುವಿಗೆ ಕೆಮ್ಮಿನ ಗಂಭೀರ ಲಕ್ಷಣಗಳು ಕಾಣಿಸುತ್ತಿದ್ದರೆ ತ್ಜಜ್ಞ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ : Beetroot Health Benefits:ಬಿಟ್ರೋಟ್ ಸೇವನೆ ಮಾಡಿ ಆರೋಗ್ಯದ ಪ್ರಯೋಜನ ಪಡೆಯಿರಿ

ಇದನ್ನೂ ಓದಿ : Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ ನೋಡಿ

(Avoid Fruits In Cough, is your child suffering from cough and cold)

Comments are closed.