ಬುಧವಾರ, ಏಪ್ರಿಲ್ 30, 2025
HomeSportsCricketNew Coach For Mumbai Indians: ಜಹೀರ್ ಖಾನ್, ಜಯವರ್ಧನೆಗೆ ಪ್ರಮೋಷನ್.. ಮುಂಬೈ ಇಂಡಿಯನ್ಸ್’ಗೆ ಬರಲಿದ್ದಾರೆ...

New Coach For Mumbai Indians: ಜಹೀರ್ ಖಾನ್, ಜಯವರ್ಧನೆಗೆ ಪ್ರಮೋಷನ್.. ಮುಂಬೈ ಇಂಡಿಯನ್ಸ್’ಗೆ ಬರಲಿದ್ದಾರೆ ಹೊಸ ಕೋಚ್

- Advertisement -

ಮುಂಬೈ: (New Coach For Mumbai Indians) ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಂದಿನ ವರ್ಷ ಹೊಸ ಕೋಚ್ ಬರಲಿದ್ದಾರೆ. ಹಾಲಿ ಕೋಚ್ ಶ್ರೀಲಂಕಾದ ಮಹೇಲ ಜಯವರ್ಧನೆ (Mahela Jayawardene) ಅವರಿಗೆ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಪ್ರಮೋಷನ್ ನೀಡಿರುವುದರಿಂದ ಮುಂಬೈ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿದ್ದ ಮಹೇಲ ಜಯವರ್ಧನೆ ಅವರಿಗೆ ಮುಂಬೈ ಇಂಡಿಯನ್ಸ್’ನ ಗ್ಲೋಬಲ್ ಹೆಡ್ ಆಫ್ ಪರ್ಫಾಮೆನ್ಸ್ (Global Head of Performance, MI) ಜವಾಬ್ದಾರಿ ನೀಡಲಾಗಿದೆ. 2016ರ ನವೆಂಬರ್ ತಿಂಗಳಲ್ಲಿ ಮಹೇಲ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಜಯವರ್ಧನೆ ಗರಡಿಯಲ್ಲಿ ಮುಂಬೈ ತಂಡ 3 ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಐಪಿಎಲ್ ಇತಿಹಾಸದಲ್ಲಿ ಜಯವರ್ಧನೆ 2ನೇ ಅತ್ಯಂತ ಯಶಸ್ವಿ ಕೋಚ್ ಎನಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ನ್ಯೂಜಿಲೆಂಡ್’ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೋಚ್ ಎನಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಟೀಮ್ ಡೈರೆಕ್ಟರ್ ಆಗಿದ್ದ ಮಾಜಿ ವೇಗದ ಬೌಲರ್ ಜಹೀರ್ ಖಾನ್ (Zaheer Khan) ಅವರಿಗೆ ಮುಂಬೈ ಇಂಡಿಯನ್ಸ್ ಕ್ರಿಕೆಟ್ ಡೆವಲಪ್ಮೆಂಟ್ ಗ್ಲೋಬಲ್ ಹೆಡ್ ಆಗಿ ಪ್ರಮೋಷನ್ ನೀಡಲಾಗಿದೆ ( Global Head of Cricket Development, MI). ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಇದೀಗ ಐಪಿಎಲ್’ನಿಂದ ವಿದೇಶೀ ಟಿ20 ಲೀಗ್’ಗಳಿಗೂ ಕಾಲಿಟ್ಟಿದೆ. ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಎಂಐ ಕೇಪ್ ಕೌಟ್ (MI Cape Town in the SA20) ಹಾಗೂ ಯುಎಇ ಇಂಟರ್’ನ್ಯಾಷನಲ್ ಟಿ20 ಲೀಗ್’ನಲ್ಲಿ ಎಐ ಎಮಿರೇಟ್ಸ್ ( MI Emirates in the ILT20) ಹೆಸರಲ್ಲಿ ಆಡಲಿದೆ. ಈ ಹಿನ್ನೆಲೆಯಲ್ಲಿ ಜಹೀರ್ ಖಾನ್ ಮತ್ತು ಜಯವರ್ಧನೆ ಅವರಿಗೆ ತಮ್ಮ ಜವಾಬ್ದಾರಿಗಳಲ್ಲಿ ಬಡ್ತಿ ನೀಡಲಾಗಿದ್ದು, ಜಾಗತಿಕ ಮಟ್ಟದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಾರ್ಯಚಟುವಟಿಕೆಗಳ ಹೊಣೆ ಹೊರಿಸಲಾಗಿದೆ. ಯುಎಇ ಇಂಟರ್’ನ್ಯಾಷನಲ್ ಟಿ20 ಹಾಗೂ ಸೌತ್ ಆಫ್ರಿಕಾ ಟಿ20 ಲೀಗ್ ಲೀಗ್’ಗಳು ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿವೆ.

ಇದನ್ನೂ ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

ಇದನ್ನೂ ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

New Coach For Mumbai Indians Zaheer Khan and mahela jayawardene

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular