Virat Kohli Instagram Post : “ಯಾರ ಭಾವನೆಗಳನ್ನೂ ನೋಯಿಸದಿರಿ..” ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಪೋಸ್ಟ್‌ನ ಅರ್ಥ ಏನು ?

ಬೆಂಗಳೂರು: (Virat Kohli Instagram Post) ರನ್ ಮಷಿನ್ ವಿರಾಟ್ ಕೊಹ್ಲಿ ಮನಸ್ಸೀಗ ಹೂವಿನಂತೆ ಹಗುರ. ಕಾರಣ ವಿರಾಟ್ ಕೊಹ್ಲಿ ಬ್ಯಾಟ್’ನಿಂದ ಸಿಡಿದಿರುವ 71ನೇ ಅಂತಾರಾಷ್ಟ್ರೀಯ ಶತಕ. ಇತ್ತೀಚೆಗೆಷ್ಟೇ ಏಷ್ಯಾ ಕಪ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದರು. ಆ ಮೂಲಕ ಎರಡೂ ಮುಕ್ಕಾಲು ವರ್ಷಗಳಿಂದ ಮರೀಚಿಕೆಯಾಗಿದ್ದ 71ನೇ ಅಂತಾರಾಷ್ಟ್ರೀಯ ಶತಕವನ್ನು ದಕ್ಕಿಸಿಕೊಂಡಿದ್ದರು.

ಏಷ್ಯಾ ಕಪ್ ನಂತರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ವಾಮಿಕಾಳನ್ನು ನೋಡಲು ದುಬೈನಿಂದ ಲಂಡನ್’ಗೆ ಹಾರಿದ್ದಾರೆ. ಅನುಷ್ಕಾ ಶರ್ಮಾ ಲಂಡನ್’ನಲ್ಲಿ ಸಿನಿಮಾ ಶೂಟಿಂಗ್’ನಲ್ಲಿದ್ದಾರೆ. ಪತ್ನಿ ಜೊತೆ ಲಂಡನ್’ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವಿರಾಟ್ ಕೊಹ್ಲಿ ಈಗ ಮತ್ತೊಂದು ಚಿತ್ರವನ್ನು ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, “ಯಾರ ಭಾವನೆಗಳನ್ನೂ ನೋಯಿಸದಿರಿ..” ಎಂದ ಕುತೂಹಕಾರಿ ಸಾಲನನ್ನು ಬರೆದುಕೊಂಡಿದ್ದಾರೆ.

ಅಂದ ಹಾಗೆ ವಿರಾಟ್ ಕೊಹ್ಲಿ ಈಗ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಿತ್ರ ಅವರ ಬಾಲ್ಯದ್ದು. ಬಾಲ್ಯದಲ್ಲಿ ತಿಂಡಿಪೋತನಾಗಿದ್ದ ಕೊಹ್ಲಿ, ಜಂಕ್ ಫುಡ್ ತಿನ್ನುತ್ತಿರುವ ಫೋಟೋವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, “ತಿನ್ನಿರಿ, ಕುಡಿಯಿರಿ, ಎಂಜಾಯ್ ಮಾಡಿ ಸ್ನೇಹಿತರೇ, ಯಾರ ಭಾವನೆಗಳನ್ನೂ ನೋಯಿಸದಿರಿ” ಎಂದು ಬರೆದಿದ್ದಾರೆ. ಕೊಹ್ಲಿ ಅವರ ಈ ಬರಹ ಈ ಸಮಯದಲ್ಲಿ ಬಂದಿರುವುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ತಿನ್ನುವ, ಕುಡಿಯುವ ವಿಚಾರದಲ್ಲಿ ಭಾವನೆಗಳ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದೇಕೆ ಎಂಬ ವಿಚಾರ ಕುತೂಹಲ ಹುಟ್ಟು ಹಾಕಿದೆ.

ಏಷ್ಯಾ ಕಪ್ ಟೂರ್ನಿಯ ಮೂಲಕ ಫಾರ್ಮ್’ಗೆ ಮರಳಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗುತ್ತಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, 5 ಪಂದ್ಯಗಳಿಂದ 92ರ ಅಮೋಘ ಸರಾಸರಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳೊಂದಿಗೆ 276 ರನ್ ಕಲೆ ಹಾಕಿದ್ದರು. ಸದ್ಯ ಕ್ರಿಕೆಟ್’ನಿಂದ ಸಣ್ಣ ವಿರಾಮ ಪಡೆದಿರುವ ಕಿಂಗ್ ಕೊಹ್ಲಿ, ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ತವರು ಟಿ20 ಸರಣಿಯ ಮೂಲಕ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ನಡೆಯಲಿದೆ. 2ನೇ ಪಂದ್ಯ ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಹಾಗೂ 3ನೇ ಪಂದ್ಯ ಸೆಪ್ಟೆಂಬರ್ 25ರಂದು ಹೈದರಾಬಾದ್’ನಲ್ಲಿ ನಡೆಯಲಿದೆ. ನಂತರ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

ಇದನ್ನೂ ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : Virat Kohli twitter Followers : ಮೋದಿ ಬಿಟ್ಟರೆ ಟ್ವಿಟರ್ ಫಾಲೋವರ್ಸ್ ಸಂಖ್ಯೆಯಲ್ಲಿ ವಿರಾಟ್ ಕೊಹ್ಲಿ ಇಡೀ ಏಷ್ಯಾಗೇ ನಂ.1

Virat Kohli Instagram Post Don’t hurt anyone’s feelings What does Virat Kohli’s post mean

Comments are closed.