Vijay Hazare Trophy Semifinal : ನಾಳೆ ಸೆಮಿಫೈನಲ್, ಕರ್ನಾಟಕಕ್ಕೆ ಸೌರಾಷ್ಟ್ರ ಎದುರಾಳಿ

ಅಹ್ಮದಾಬಾದ್ : 5ನೇ ಚಾಂಪಿಯನ್ ಕಿರೀಟದ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ತಂಡ, ಬುಧವಾರ (ನವೆಂಬರ್ 30) ನಡೆಯುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು (Vijay Hazare Trophy Semifinal) ಎದುರಿಸಲಿದೆ. ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ಸೆಮಿಫೈನಲ್ ಹಣಾಹಣಿಗೆ ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.

ಇದೇ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ತಂಡವನ್ನು 4 ವಿಕೆಟ್’ಗಳಿಂದ ಮಣಿಸಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿತ್ತು. ಪಂಜಾಬ್ ವಿರುದ್ಧ ಗೆಲ್ಲುವುದರೊಂದಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್’ನಲ್ಲಿ ಅನುಭವಿಸಿದ್ದ ಸೋಲಿಗೆ ಕರ್ನಾಟಕ ಸೇಡು ತೀರಿಸಿಕೊಂಡಿತ್ತು. ಸೌರಾಷ್ಟ್ರ ವಿರುದ್ಧದ ಸೆಮಿಫೈನಲ್ ಸಮರದಲ್ಲಿ ಕರ್ನಾಟಕ ಪರ ಕ್ವಾರ್ಟರ್ ಫೈನಲ್’ನಲ್ಲಿ ಆಡಿದವರೇ ಕಣಕ್ಕಿಳಿಯಲಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಮಯಾಂಕ್ ಅಗರ್ವಾಲ್, ಉಪನಾಯಕ ಆರ್.ಸಮರ್ಥ್, ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್, ಮಾಜಿ ನಾಯಕ ಮನೀಶ್ ಪಾಂಡೆ ಮತ್ತು ಆಲ್ರೌಂಡರ್ ಶ್ರೇಯಸ್ ಗೋಪಾಲ್ ತಂಡಕ್ಕೆ ಆಸರೆಯಾಗಲಿದ್ದಾರೆ. ಕೆಳ ಕ್ರಮಾಂಕದಲ್ಲಿ ಆಲ್ರೌಂಡರ್’ಗಳಾದ ಮನೋಜ್ ಭಾಂಡಗೆ ಮತ್ತು ಕೃಷ್ಣಪ್ಪ ಗೌತಮ್ ಅವರ ಬಲ ರಾಜ್ಯ ತಂಡಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ, ವಿ.ಕೌಶಿಕ್ ಮತ್ತು ರೋನಿತ್ ಮೋರೆ ಉತ್ತಮ ಫಾರ್ಮ್’ನಲ್ಲಿರುವುದು ಕರ್ನಾಟಕದ ಬಲವನ್ನು ಹೆಚ್ಚಿಸಿದೆ. ಮತ್ತೊಂದೆಡೆ ಸೌರಾಷ್ಟ್ರ ತಂಡ 4ನೇ ಕ್ವಾರ್ಟರ್ ಫೈನಲ್’ನಲ್ಲಿ ತಮಿಳುನಾಡು ತಂಡವನ್ನು 44 ರನ್’ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

ವಿಜಯ್ ಹಜಾರೆ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಕರ್ನಾಟಕದ ಪ್ಲೇಯಿಂಗ್ XI
1.ಮಯಾಂಕ್ ಅಗರ್ವಾಲ್(ನಾಯಕ), 2.ಆರ್.ಸಮರ್ಥ್(ಉಪನಾಯಕ), 3.ನಿಕಿನ್ ಜೋಸ್, 4.ಮನೀಶ್ ಪಾಂಡೆ, 5.ಶ್ರೇಯಸ್ ಗೋಪಾಲ್, 6.ಬಿ.ಆರ್ ಶರತ್ (ವಿಕೆಟ್ ಕೀಪರ್), 7.ಮನೋಜ್ ಭಾಂಡಗೆ, 8.ಕೃಷ್ಣಪ್ಪ ಗೌತಮ್, 9.ರೋನಿತ್ ಮೋರೆ, 10.ವಿದ್ವತ್ ಕಾವೇರಪ್ಪ, 11.ವಿ.ಕೌಶಿಕ್.

ವಿಜಯ್ ಹಜಾರೆ ಟ್ರೋಫಿ (Vijay Hazare Trophy Karnataka) : ಕರ್ನಾಟಕದ ಸೆಮಿಫೈನಲ್ ಹಾದಿ :

  • ಮೊದಲ ಪಂದ್ಯ: ಮೇಘಾಲಯ ವಿರುದ್ಧ 115 ರನ್ ಗೆಲುವು
  • 2ನೇ ಪಂದ್ಯ: ವಿರರ್ಭ ವಿರುದ್ಧ 66 ರನ್ ಗೆಲುವು
  • 3ನೇ ಪಂದ್ಯ: ಜಾರ್ಖಂಡ್ ವಿರುದ್ಧ 6 ವಿಕೆಟ್ ಗೆಲುವು
  • 4ನೇ ಪಂದ್ಯ: ದೆಹಲಿ ವಿರುದ್ಧ 4 ವಿಕೆಟ್ ಗೆಲುವು
  • 5ನೇ ಪಂದ್ಯ: ಅಸ್ಸಾಂ ವಿರುದ್ಧ 6 ವಿಕೆಟ್ ಸೋಲು
  • 6ನೇ ಪಂದ್ಯ: ಸಿಕ್ಕಿಂ ವಿರುದ್ಧ 6 ವಿಕೆಟ್ ಗೆಲುವು
  • 7ನೇ ಪಂದ್ಯ: ರಾಜಸ್ಥಾನ ವಿರುದ್ಧ 60 ರನ್ ಗೆಲುವು
  • ಪ್ರೀ ಕ್ವಾರ್ಟರ್ ಫೈನಲ್: ಜಾರ್ಖಂಡ್ ವಿರುದ್ಧ 5 ವಿಕೆಟ್ ಗೆಲುವು
  • ಸೆಮಿಫೈನಲ್: ಪಂಜಾಬ್ ವಿರುದ್ಧ 4 ವಿಕೆಟ್ ಗೆಲುವು

ಇದನ್ನೂ ಓದಿ : Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : ODI World Cup final 2023: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 2023ರ ಏಕದಿನ ವಿಶ್ವಕಪ್ ಫೈನಲ್

ಇದನ್ನೂ ಓದಿ : Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ರುತುರಾಜ್ ಗಾಯಕ್ವಾಡ್

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಚಾಂಪಿಯನ್ ಆದ ವರ್ಷಗಳು: 2013-14, 2014-15, 2017-18, 2019-20

Vijay Hazare Trophy Semifinal: Saurashtra will face Karnataka in the semi-final tomorrow

Comments are closed.