Sophie Devine painful story : ಗುಜರಾತ್ ವಿರುದ್ಧ 99 ರನ್ ಚಚ್ಚಿದ ರಾಯಲ್ ಚಾಲೆಂಜರ್ಸ್ ಸ್ಟಾರ್ ಆಟಗಾರ್ತಿಯ ಹಿಂದಿದೆ ನೋವಿನ ಕಥೆ!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women’s) ತಂಡದ ಪರ ಆಡುತ್ತಿರುವ ನ್ಯೂಜಿಲೆಂಡ್ ಆಲ್ರೌಂಡರ್ ಸೋಫಿ ಡಿವೈನ್ (Sophie Devine painful story), ಮಹಿಳಾ ಪ್ರೀಮಿಯರ್ ಲೀಗ್ (Women’s Premier league – WPL)ನಲ್ಲಿ ಶನಿವಾರ ಗುಜರಾತ್ ಜೈಂಟ್ಸ್ ವಿರುದ್ಧ ಕೇವಲ 36 ಎಸೆತಗಳಲ್ಲಿ ಸಿಡಿಲಬ್ಬರದ 99 ರನ್ ಸಿಡಿಸಿದ್ದರು. ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ WPL ಪಂದ್ಯದಲ್ಲಿ ಸೋಫಿ ಡಿವೈನ್ ಗುಜರಾತ್ ಜೈಂಟ್ಸ್ ವಿರುದ್ಧ 9 ಬೌಂಡರಿ ಹಾಗೂ 8 ಸಿಡಿಲ ಸಿಕ್ಸರ್’ಗಳನ್ನು ಬಾರಿಸಿ ಅಬ್ಬರಿಸಿದ್ದರು. ಕ್ರಿಕೆಟ್ ಮೈದಾನದಲ್ಲಿ ರಣಚಂಡಿಯಂತೆ ಅಬ್ಬರಿಸುವನ್ಯೂಜಿಲೆಂಡ್ ಆಲ್ರೌಂಡರ್ ಸೋಫಿ ಡಿವೈನ್ ಬದುಕಲ್ಲೊಂದು ನೋವಿನ ಕಥೆಯಿದೆ.

ಸೋಫಿಗೆ (Sophie Devine painful story) ಹದಿನೈದು ವರ್ಷ ಇದ್ದಾಗಲೇ ಡಯಾಬಿಟಿಸ್ ಶುರುವಾಗಿತ್ತು. ಅದು ಟೈಪ್-1 ಡಯಾಬಿಟಿಸ್. ಅಂದ್ರೆ ಟಚಿಕ್ಕವಯಸ್ಸಿನಲ್ಲೇ ಬರುವ ಸಕ್ಕರೆ ಕಾಯಿಲೆ. ಹದಿಹರೆಯದಲ್ಲೇ ಕಾಣಿಸಿಕೊಂಡ ಡಯಾಬಿಟಿಸ್ ಕಾರಣ ಸೋಫಿ ಡಿವೈನ್’ಳ ಪ್ಯಾನ್ಕ್ರಿಯಾಸ್ ಇನ್ಸುಲಿಲ್ ಉತ್ಪತ್ತಿ ಮಾಡುವುದನ್ನು ನಿಲ್ಲಿಸಿತ್ತು. ಆದರೆ ಸೋಫಿ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಶಾಲೆಯಲ್ಲಿ ಹುಡುಗರ ಜೊತೆ ಹಾಕಿ, ಕ್ರಿಕೆಟ್ ಆಡುತ್ತಿದ್ದಳು‌. ಹಾಕಿಯಲ್ಲಿ ಹಂತಹಂತವಾಗಿ ಆಡಿ ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೂ ಆಡಿದಳು. ಹಾಕಿ ಆಡುತ್ತಿದ್ದರೂ ಕ್ರಿಕೆಟ್ ಸೆಳೆತ ಬಿಡಲಿಲ್ಲ. ಕೊನೆಗೆ ಹಾಕಿ ಬಿಟ್ಟು ಕ್ರಿಕೆಟ್ ನಲ್ಲೇ ಮುಂದುವರಿದು ನ್ಯೂಜಿಲೆಂಡ್ ರಾಷ್ಟ್ರೀಯ ಮಹಿಳಾ ತಂಡಕ್ಕೆ ಆಯ್ಕೆಯಾದಳು ಸೋಫಿ.

35 ವರ್ಷದ ಆಲ್ರೌಂಡರ್ ಸೋಫಿ ಡಿವೈನ್ ಸ್ಫೋಟಕ್ಕೆ ಆಟಕ್ಕೆ ಹೆಸರುವಾಸಿ. ಲಯದಲ್ಲಿ ಇದ್ದಾಗ ರಣಚಂಡಿಯಂತೆ ಅಬ್ಬರಿಸಿ ಬಿಡುತ್ತಾಳೆ. ಇದಕ್ಕೆ ಸಾಕ್ಷಿ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೋಫಿ ಆಡಿದ ಆಟ. ಗುಜರಾತ್ ಜೈಂಟ್ಸ್ ನ ಎಡಗೈ ಸ್ಪಿನ್ನರ್ ತನುಜಾ ಕನ್ವರ್’ಗೆ ಮಿಡ್ ವಿಕೆಟ್ ನಲ್ಲಿ ಎತ್ತಿದ ಸಿಕ್ಸರ್ 94 ಮೀಟರ್ ದೂರ ಹೋಗಿ ಬಿದ್ದಿತ್ತು.

ಭಾರತ ವಿರುದ್ಧದ ಪಂದ್ಯವೊಂದರಲ್ಲಿ ಒಂದೇ ಓವರ್ ನಲ್ಲಿ ಮೂವತ್ತೆರಡು ರನ್ ಬಾರಿಸಿದ್ದ ಸೋಫಿ, ಲೀಗ್ ಮ್ಯಾಚ್ ಒಂದರಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದಳು. ಚೊಚ್ಚಲ ಆವೃತ್ತಿಯ ಮಹಿಳ್ ಪ್ರೀಮಿಯರ್ ಲೀಗ್’ನಲ್ಲಿ ಅಬ್ಬರಿಸುತ್ತಿರುವ ಸೋಫಿ ಡಿವೈನ್ ಆಡಿದ 7 ಪಂದ್ಯಗಳಿಂದ 250ಕ್ಕೂ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಸಂಪಾದಿಸಿದ್ದಾರೆ.

ಇದನ್ನೂ ಓದಿ : KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

ಇದನ್ನೂ ಓದಿ : Sophie Devine : ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಒಂದೇ ಒಂದು ರನ್ನಿಂದ ಶತಕ ಮಿಸ್ ಮಾಡಿಕೊಂಡ RCB ಸ್ಟಾರ್

Comments are closed.