The teacher committed suicide : ಆನ್ ಲೈನ್‌ ನಲ್ಲಿ ಹಣ ಕಳೆದುಕೊಂಡು ಶಿಕ್ಷಕಿ ಆತ್ಮಹತ್ಯೆಗೆ ಶರಣು

ಬೀದರ್‌ : (The teacher committed suicide) ಉಪನ್ಯಾಸಕಿಯೊಬ್ಬರು ಆನ್‌ ಲೈನ್‌ ನಲ್ಲಿ ಹಣ ಕಳೆದುಕೊಂಡಿದ್ದು , ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್‌ನ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ಆರತಿ ಕನಾಟೆ (28 ವರ್ಷ) ಎನ್ನುವವರು ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ.

ಇತ್ತೀಚೆಗೆ ಆನ್ಲೈನ್‌ ಮೂಲಕ ಅಮಾಯಕರನ್ನು ಪರಿಚಯ ಮಾಡಿಕೊಂಡು ನೀವು ಹಣ ಹಾಕಿದರೆ ಎರಡರಷ್ಟು ಹಣ ಬರುತ್ತದೆ, ಇದೊಂದು ಪಾರ್ಟ್‌ ಟೈಮ್‌ ಜಾಬ್‌ ಎಂದೆಲ್ಲಾ ಹೇಳಿ ಹಣ ದೋಚುವ ಹಲವು ಗುಂಪುಗಳು ಪತ್ತೆಯಾಗಿರುವುದನ್ನು ನಾವು ನೋಡಬಹುದು. ಈ ರೀತಿಯ ಮೋಸದ ಬಲೆಗೆ ಅದೇಷ್ಟೋ ಅಮಾಯಕರು ಬಲಿಯಾಗಿದ್ದಾರೆ. ಅಲ್ಲದೆ ಇದರಿಂದ ಸಮಾಜಕ್ಕೆ ಮುಖ ತೋರಿಸಲಾಗದೆ ಸಾವಿಗೀಡಾದವರು ಹಲವರಿದ್ದಾರೆ. ಬೀದರ್‌ನಲ್ಲಿ ಅಂತಹದೇ ಒಂದು ಘಟನೆ ನಡೆದಿದ್ದು ಶಿಕ್ಷಕಿಯೊಬ್ಬರು ಮೋಸದ ಬಲೆಗೆ ಬಿದ್ದು, ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ(The teacher committed suicide) ಶರಣಾಗಿದ್ದಾರೆ.

ಖಾಸಗಿ ಕಾಲೇಜು ಒಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರತಿ ಕನಾಟೆ ಅವರು ಆನ್‌ ಲೈನ್‌ ನಲ್ಲಿ ಪರಿಚಯವಾದ ವ್ಯಕ್ತಿಯೋರ್ವನಿಗೆ ಹಣ ನೀಡಿದ್ದರು. ಇದೊಂದು ಪಾರ್ಟ್‌ ಟೈಮ್‌ ಜಾಬ್‌, ನೀವು ಹಾಕಿದ ಹಣ ಹಿಂತಿರುಗಿ ಬರುತ್ತದೆ ಎಂದು ನಂಬರ್‌ ಒಂದರಿಂದ ಮೆಸೇಜ್‌ ಬಂದಿದ್ದು, ಆ ವ್ಯಕ್ತಿಗೆ ಹಂತ ಹಂತವಾಗಿ ಒಟ್ಟು 2.5 ಲಕ್ಷ ರೂ ಹಣವನ್ನು ನೀಡಿದ್ದರು. ಆದರೆ ಮುಂದೆ ಮೋಸ ಹೋಗಿರುವುದು ತಿಳಿದಿದೆ. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ : Suicide Case : ನಿನ್ನೆ ಎರಡನೇ ಮದುವೆ ಗಲಾಟೆ, ಇಂದು ಯೋಧ ಮೊದಲನೇ ಹೆಂಡತಿ ಜೊತೆ ಅತ್ಮಹತ್ಯೆ

ಇದನ್ನೂ ಓದಿ : Crime News : ಕಾರಿನಲ್ಲಿ ಅಕ್ರಮವಾಗಿ ರೂ.2 ಕೋಟಿ ಸಾಗಾಟ : 8 ಮಂದಿ ಬಂಧನ

ಜೀವನದಲ್ಲಿ ಮೋಸ ಹೋಗಿರುವುದಾಗಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್‌ ನೋಟ್‌ ನಲ್ಲಿ ನಾಲ್ಕು ದಿನಗಳ ಹಿಂದೆ ಬರೆದಿಟ್ಟು, ಬಾವಿಗೆ ಹಾರಿ ಆರತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಸವಕಲ್ಯಾಣ ಗ್ರಾಮಾಂತರ ಪೋಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(The teacher committed suicide) An incident where a lecturer lost money online and committed suicide by jumping into a well took place in Islampur village of Basavakalyan taluk of Bidar. Aarti Kanate (28 years old) is a teacher who committed suicide.

Comments are closed.