Pandya Meets Big Brother : ವೆಸ್ಟ್ ಇಂಡೀಸ್’ನಲ್ಲಿ “ದೊಡ್ಡಣ್ಣ”ನನ್ನು ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ


ಟ್ರಿನಿಡಾಡ್: (Pandya Meets Big Brother
) ಭಾರತ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೆಸ್ಟ್ ಇಂಡೀಸ್”ನಲ್ಲಿ “ದೊಡ್ಡಣ್ಣ”ನನ್ನು ಭೇಟಿ ಮಾಡಿದ್ದಾರೆ. ಟೀಮ್ ಇಂಡಿಯಾ ಜೊತೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಹಾರ್ದಿಕ್ ಪಾಂಡ್ಯ, ವಿಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ನಂತರ ಕೆರಿಬಿಯನ್ ನಾಡಿನ ತಮ್ಮ ಬಿಗ್ ಬ್ರದರ್ ಕೀರನ್ ಪೊಲಾರ್ಡ್ ಅವರನ್ನು ಭೇಟಿಯಾಗಿದ್ದಾರೆ. ಸೇಂಟ್”ಕಿಟ್ಸ್”ನಲ್ಲಿ ಆಗಸ್ಟ್ 2ರಂದು ನಡೆದ 3ನೇ ಟಿ20 ಪಂದ್ಯದ ನಂತರ ಟ್ರಿನಿಡಾಡ್”ನಲ್ಲಿರುವ ಪೊಲಾರ್ಡ್ ಅವರ ಮನೆಗೆ ತೆರಳಿದ್ದ ಹಾರ್ದಿಕ್ ಪಾಂಡ್ಯ, ಪೊಲಾರ್ಡ್ ಮತ್ತವರ ಪತ್ನಿ ಹಾಗೂ ಮಕ್ಕಳನ್ನು ಭೇಟಿ ಮಾಡಿದ್ದಾರೆ (Hardik Pandya visits Kieron Pollard’s Home).

“ಕಿಂಗ್ ಮನೆಗೆ ಭೇಟಿ ಕೊಡದಿದ್ದರೆ ಯಾವುದೇ ವೆಸ್ಟ್ ಇಂಡೀಸ್ ಪ್ರವಾಸ ಅಪೂರ್ಣ. ಪೊಲ್ಲೀ ಮತ್ತವರ ಸುಂದರ ಕುಟುಂಬ ನನ್ನ ಫೇವರಿಟ್. ನನಗೆ ಆತಿಥ್ಯ ನೀಡಿದಕ್ಕಾಗಿ ಧನ್ಯವಾದಗಳು ಸಹೋದರ” ಎಂದು ಪೊಲಾರ್ಡ್ ಮನೆಗೆ ಭೇಟಿ ನೀಡಿದ ಚಿತ್ರಗಳ ಸಮೇತ ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ.

ವಿಂಡೀಸ್”ನ ಕ್ರಿಕೆಟ್ ದೈತ್ಯ ಕೀರನ್ ಪೊಲಾರ್ಡ್ ಮತ್ತು ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಧ್ಯೆ ವಿಶೇಷ ಬಾಂಧವ್ಯವಿದೆ. ಈ ಬಾಂಧವ್ಯವನ್ನು ಬೆಸೆದದ್ದು ಐಪಿಎಲ್. ಇಬ್ಬರೂ ಆಟಗಾರರು ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಕಳೆದ ಐಪಿಎಲ್ ಟೂರ್ನಿಯ ಹೊತ್ತಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿತ್ತು. ಬಳಿಕ ಗುಜರಾತ್ ಟೈಟನ್ಸ್ ತಂಡ ಸೇರಿಕೊಂಡಿದ್ದ ಪಾಂಡ್ಯ, ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು.

ಮುಂಬೈ ಇಂಡಿಯನ್ಸ್ ಜೊತೆಗಿನ ಹಾರ್ದಿಕ್ ಪಾಂಡ್ಯ ಬಾಂಧವ್ಯ ಅಂತ್ಯಗೊಂಡಿದ್ದರೂ, ಕೀರನ್ ಪೊಲಾರ್ಡ್ ಜೊತೆ ಅದೇ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಕೆರಿಬಿಯನ್ ನಾಡಿನ ಟಿ20 ದೈತ್ಯವನ್ನು ಪಾಂಡ್ಯ “ಬಿಗ್ ಬ್ರದರ್” ಎಂದೇ ಕರೆಯುತ್ತಾರೆ.ವೆಸ್ಟ್ ಇಂಡೀಸ್ ವಿರುದ್ಧದ 4ನೇ ಹಾಗೂ 5ನೇ ಟಿ20 ಪಂದ್ಯ ಶನಿವಾರ ಮತ್ತು ಭಾನುವಾರ ಅಮೆರಿಕದ ಫ್ಲೋರಿಡಾದಲ್ಲಿರುವ ಲಾಡರ್’ಹಿಲ್ ಮೈದಾನದಲ್ಲಿ ನಡೆಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2-1ರ ಮುನ್ನಡೆಯಲ್ಲಿದೆ. ಮೊದಲ ಪಂದ್ಯವನ್ನು ಭಾರತ 68 ರನ್’ಗಳಿಂದ ಗೆದ್ದಿದ್ರೆ, 2ನೇ ಪಂದ್ಯವನ್ನು ವೆಸ್ಟ್ ಇಂಡೀಸ್ 5 ವಿಕೆಟ್’ಗಳಿಂದ ಗೆದ್ದುಕೊಂಡಿತ್ತು.

3ನೇ ಪಂದ್ಯವನ್ನು 7 ವಿಕೆಟ್’ಗಳಿಂದ ಭರ್ಜರಿಯಾಗಿ ಗೆದ್ದಿದ್ದ ರೋಹಿತ್ ಶರ್ಮಾ ಬಳಗ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಫ್ಲೋರಿಡಾದಲ್ಲಿ ನಡೆಯುವ 4ನೇ ಪಂದ್ಯವನ್ನೂ ಟೀಮ್ ಇಂಡಿಯಾ ಗೆದ್ದಲ್ಲಿ, ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನೂ ಕೈವಶ ಮಾಡಿಕೊಳ್ಳಲಿದೆ. ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶಿಖರ್ ಧವನ್ ನಾಯಕತ್ವದಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಇದನ್ನೂ ಓದಿ : India Vs West Indies 3rd T20 : ಕೆರಿಬಿಯನ್ ನಾಡಿನಲ್ಲಿ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಪೋಸ್ಟರ್

ಇದನ್ನೂ ಓದಿ : CWG : ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗಿಯಾಗಿದ್ದ ಶ್ರೀಲಂಕಾದ ಇಬ್ಬರು ಆಟಗಾರರು, ಓರ್ವ ಸಿಬ್ಬಂದಿ ನಾಪತ್ತೆ

Pandya Meets Big Brother, Hardik Pandya visits Kieron Pollard Home

Comments are closed.