Prithvi Shaw : ಪೃಥ್ವಿ ಶಾ ಮೇಲೆ ಕಾರಿನ ಮೇಲೆ ಪುಂಡರ ದಾಳಿ, ಬೇಸ್ ಬಾಲ್ ಬ್ಯಾಟ್‌ನಿಂದ ಹಲ್ಲೆಗೆ ಯತ್ನ; ಅಷ್ಟಕ್ಕೂ ಅಲ್ಲಿ ಆಗಿದ್ದೇನು ?


ಮುಂಬೈ: ಯುವ ಕ್ರಿಕೆಟ್ ತಾರೆ ಪೃಥ್ವಿ ಶಾ (Prithvi shaw) ಅವರ ಕಾರಿನ ಮೇಲೆ ಎಂಟು ಜನ ಗುಂಪೊಂದು ದಾಳಿ ನಡೆಸಿದ ಕಾರಿನ ಗಾಜು ಒಡೆದು ಹಾಕಿದೆ. ಪೃಥ್ವಿ ಶಾ ಮೇಲೆ ಸನಾ ಗಿಲ್ ಮತ್ತು ಶೋಭಿತ್ ಠಾಕೂರ್ ಸೇರಿ ಒಟ್ಟು ಎಂಟು ಮಂದಿ ದಾಳಿ ನಡೆಸಿದ್ದಾರೆ. ಸನಾ ಗಿಲ್ ಎಂಬ ಯುವತಿ ಬೇಸ್ ಬಾಲ್ ಬ್ಯಾಟ್’ನಿಂದ ಪೃಥ್ವಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಬೇಸ್ ಬಾಲ್ ಬ್ಯಾಟನ್ನು ಆಕೆಯ ಕೈಯಿಂದ ಕಸಿದುಕೊಳ್ಳುವಲ್ಲಿ ಪೃಥ್ವಿ ಶಾ ಯಶಸ್ವಿಯಾಗಿದ್ದಾರೆ. ಆ ವೀಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಪೃಥ್ವಿ ಶಾ ಜೊತೆ ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿದೆ. ಇಬ್ಬರ ಜೊತೆ 2ನೇ ಬಾರಿ ಸೆಲ್ಫಿ ತೆಗೆದುಕೊಳ್ಳಲು ಪೃಥ್ವಿ ಶಾ (Prithvi shaw ) ನಿರಾಕರಿಸಿದ್ದೇ ಈ ಗಲಾಟೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಸ್ಥಳೀಯ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದರು. ಆಗ ಅಲ್ಲಿದ್ದ ಕೆಲವರು ಪೃಥ್ವಿ ಜೊತೆ ಫೋಟೋ ತೆಗೆಯಲು ಶುರು ಮಾಡಿದ್ದರು. ಅಭಿಮಾನಿಗಳ ಅತಿರೇಕದಿಂದ ಬೇಸತ್ತ ಪೃಥ್ವಿ ರೆಸ್ಟೋರೆಂಟ್ ಮ್ಯಾನೇಜರ್’ಗೆ ದೂರು ನೀಡಿದ್ದಾರೆ. ಈ ವೇಳೆ ಮ್ಯಾನೇಜರ್ ಎಚ್ಚರಿಗೆ ನೀಡಿದರೂ ಕಿರಿಕಿರಿ ಮುಂದುವರಿಸಿದ್ದಾರೆ. ಹೀಗಾಗಿ ಒಟ್ಟು ಎಂಟು ಮಂದಿಯನ್ನು ಹೋಟೆಲ್’ನಿಂದ ಹೊರಗೆ ಕಳುಹಿಸಲಾಗಿದೆ.

ಹೋಟೆಲ್’ನಿಂದ ಹೊರ ಬಿದ್ದವರು ಪೃಥ್ವಿ ಶಾ ಹೊರ ಬರುವುದನ್ನೇ ಕಾದಿದ್ದರು. ಪೃಥ್ವಿ ಶಾ ಮತ್ತು ಸ್ನೇಹಿತ ಹೋಟೆಲ್’ನಿಂದ ಹೊರಬರುತ್ತಿದ್ದಂತೆ ಮಾತಿನ ಚಕಮಕಿ ಆರಂಭಿದ್ದಾರೆ. ನಂತರ ಇದು ಗಲಾಟೆಗೆ ತಿರುಗಿದೆ. 8 ಜನರ ಗುಂಪು ಪೃಥ್ವಿ ಕಾರಿನ ಮೇಲೆ ದಾಳಿ ನಡೆಸಿದ. ಗುಂಪಿನಲ್ಲಿದ್ದ ಸನಾ ಗಿಲ್ ಎಂಬ ಯುವತಿ ಪೃಥ್ವಿ ಶಾ ಮೇಲೆ ಬೇಸ್ ಬಾಲ್ ಬ್ಯಾಟ್’ನಿಂದ ಹಲ್ಲೆಗೆ ಯತ್ನಿಸಿದ್ಧಾಳೆ. ಘಟನೆಯ ಬಗ್ಗೆ ಪೊಲೀಸರಿಗೆ ಪೃಥ್ವಿ ಶಾ ದೂರು ನೀಡಿದ್ದು, ಸನಾ ಗಿಲ್ ಮತ್ತು ಶೋಭಿತ್ ಠಾಕೂರ್ ಸೇರಿ 8 ಮಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

23 ವರ್ಷದ ಪೃಥ್ವಿ ಶಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ 8 ತಿಂಗಳ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರೂ, ಆಡುವ ಅವಕಾಶ ಸಿಕ್ಕಿರಲಿಲ್ಲ. ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಆಗಿರುವ ಪೃಥ್ವಿ ಶಾ ಭಾರತ ಪರ ಇದುವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.37ರ ಸರಾಸರಿಯಲ್ಲಿ ಒಂದು ಶತಕ, 2 ಅರ್ಧಶತಕ ಸಹಿತ 339 ರನ್ ಕಲೆ ಹಾಕಿದ್ದಾರೆ. ಟೀಮ್ ಇಂಡಿಯಾ ಪರ ಆರು ಏಕದಿನ ಪಂದ್ಯಗಳನ್ನೂ ಆಡಿರುವ ಪೃಥ್ವಿ 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. ಆಡಿರುವ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಪೃಥ್ವಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾಗಿದ್ದರು.

ಇದನ್ನೂ ಓದಿ : Jasprit Bumrah : ಆಸೀಸ್ ವಿರುದ್ಧದ ಏಕದಿನ ಸರಣಿಗೂ ಟೀಮ್ ಇಂಡಿಯಾ ಸ್ಟಾರ್ ಔಟ್, ಐಪಿಎಲ್‌ನಲ್ಲಿ ಆಡಲು ಇಷ್ಟೆಲ್ಲಾ ನಾಟಕ

ಇದನ್ನೂ ಓದಿ : Cheteshwar Pujara : ನಾಳೆಯಿಂದ ಭಾರತ Vs ಆಸೀಸ್ 2ನೇ ಟೆಸ್ಟ್, 100ನೇ ಟೆಸ್ಟ್ ಸಂಭ್ರಮದಲ್ಲಿ ಚೇತೇಶ್ವರ್ ಪೂಜಾರ

prithvi shaw car attacked by thugs attempted assault with baseball bat What happened

Comments are closed.