Prithvi Shaw triple hundred : ರಣಜಿ ಟ್ರೋಫಿಯಲ್ಲಿ 379 ರನ್ ಚಚ್ಚಿದ ಪೃಥ್ವಿ ಶಾ, ಬಿಸಿಸಿಐಗೆ ಖಡಕ್ ಮೆಸೇಜ್ ಕೊಟ್ಟ ಮುಂಬೈ ಆಟಗಾರ

ಗುವಾಹಟಿ: ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ಮುಂಬೈನ ಸ್ಫೋಟಕ ಓಪನರ್ ಪೃಥ್ವಿ ಶಾ (Prithvi Shaw) ರಣಜಿ ಟ್ರೋಫಿ (Ranji Trophy 2022-23) ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಭರ್ಜರಿ 379 ರನ್ (Prithvi Shaw triple hundred) ಬಾರಿಸಿದ್ದಾರೆ. ಆ ಮೂಲಕ ತಮ್ಮನ್ನು ಭಾರತ ತಂಡದಿಂದ ಹೊರಗಿಟ್ಟಿರುವ ಬಿಸಿಸಿಐ ಆಯ್ಕೆ ಸಮಿತಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಗುವಾಹಟಿಯ ಅಮಿನ್ಗಾವೊನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಬ್ಬರಿಸಿದ 23 ವರ್ಷದ ಪೃಥ್ವಿ ಶಾ ಕೇವಲ 383ಎಸೆತಗಳಲ್ಲಿ 49 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 379 ರನ್ ಸಿಡಿಸಿ ಔಟಾಗಿದ್ದಾರೆ. ಈ ಮೂಲಕ ಕೇವಲ 21 ರನ್’ಗಳ ಅಂತರದಲ್ಲಿ 400 ರನ್’ಗಳ ಮೈಲುಗಲ್ಲಿನಿಂದ ವಂಚಿತರಾಗಿದ್ದಾರೆ.

ಅಸ್ಸಾಂ ವಿರುದ್ಧ ಪೃಥ್ವಿ ಶಾ ಗಳಿಸಿದ 379 ರನ್ ರಣಜಿ ಟ್ರೋಫಿ ಇತಿಹಾಸದಲ್ಲೇ 2ನೇ ಟಾಪ್ ಸ್ಕೋರ್. ಮಹಾರಾಷ್ಟ್ರದ ಭಾವುಸಾಹೇಬ್ ನಿಂಬಾಳ್ಕರ್ 1948ರಲ್ಲಿ ಆಗಿನ ಕಥಿವಾರ್ (ಈಗಿನ ಸೌರಾಷ್ಟ್ರ) ತಂಡದ ವಿರುದ್ಧ ಗಳಿಸಿದ್ದ 443 ರನ್’ಗಳು ರಣಜಿ ಟ್ರೋಫಿಯಲ್ಲಿ ಆಟಗಾರನೊಬ್ಬನ ಅತೀ ಹೆಚ್ಚು ವೈಯಕ್ತಿಕ ಸ್ಕೋರ್.

ರಣಜಿ ಟ್ರೋಫಿ: ಇನ್ನಿಂಗ್ಸ್ ಒಂದರಲ್ಲಿ ಟಾಪ್ ಸ್ಕೋರ್ :
443*: ಬಿ.ಬಿ ನಿಂಬಾಳ್ಕರ್, ಮಹಾರಾಷ್ಟ್ರ (ಸೌರಾಷ್ಟ್ರ ವಿರುದ್ಧ)
379: ಪೃಥ್ವಿ ಶಾ, ಮುಂಬೈ (ಅಸ್ಸಾಂ ವಿರುದ್ಧ)
377: ಸಂಜಯ್ ಮಾಂಜ್ರೇಕರ್, ಮುಂಬೈ (ಹೈದರಾಬಾದ್ ವಿರುದ್ಧ)

ಅಸ್ಸಾಂ ವಿರುದ್ಧ 379 ರನ್ ಗಳಿಸುವ ಮೂಲಕ ರಣಜಿ ಇನ್ನಿಂಗ್ಸ್ ಒಂದರಲ್ಲಿ 350+ ರನ್ ಕಲೆ ಹಾಕಿದ 9ನೇ ಆಟಗಾರನೆಂಬ ಹಿರಿಮೆಗೆ ಪೃಥ್ವಿ ಶಾ ಪಾತ್ರರಾಗಿದ್ದಾರೆ. ಈ ಹಿಂದೆ ಗುಜರಾತ್’ನ ಸ್ವಪ್ನಿಲ್ ಗುಗಾಲೆ(351), ಸೌರಾಷ್ಟ್ರದ ಚೇತೇಶ್ವರ್ ಪೂಜಾರ(352), ಹೈದರಾಬಾದ್ ಪರ ಆಡುತ್ತಿದ್ದ ವಿವಿಎಸ್ ಲಕ್ಷ್ಣಣ್(353), ಗುಜರಾತ್’ನ ಸಮಿತ್ ಗೋಹೆಲ್(359), ಹೈದರಾಬಾದ್’ನ ಎಂ.ವಿ ಶ್ರೀಧರ್(366) ಮತ್ತು ಮುಂಬೈನ ಸಂಜಯ್ ಮಾಂಜ್ರೇಕರ್(377) ಈ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಆಡಿದ ಮೊದಲ 7 ಇನ್ನಿಂಗ್ಸ್’ಗಳಲ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದ ಪೃಥ್ವಿ ಶಾ, 8ನೇ ಪಂದ್ಯದಲ್ಲಿ ತ್ರಿಶತಕದೊಂದಿಗೆ ಅಬ್ಬರಿಸಿದರು. 2021ರ ಜುಲೈನಲ್ಲಿ ಭಾರತ ಪರ ಕೊನೆಯ ಪಂದ್ಯವಾಡಿದ್ದ ಪೃಥ್ವಿ ಶಾಗೆ 2020ರಿಂದ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಪದಾರ್ಪಣೆಯ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ್ದ ಪೃಥ್ವಿ ಶಾ, ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.37ರ ಸರಾಸರಿಯಲ್ಲಿ 1 ಶತಕ, 2 ಅರ್ಧಶತಕ ಸಹಿತ 339 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Rohit Sharma Dasun Shanaka : ರನೌಟ್ ಅಪೀಲ್ ವಾಪಸ್ ಪಡೆದು ಶನಕ ಶತಕ ಬಾರಿಸಲು ನೆರವಾದ ಹೃದಯವಂತ ಹಿಟ್‌ಮ್ಯಾನ್

ಇದನ್ನೂ ಓದಿ : International Hundreds without dropped Catches : ಒಂದೇ ಒಂದು “ಲೈಫ್” ಪಡೆಯದೆ ವಿರಾಟ್ ಕೊಹ್ಲಿ ಬಾರಿಸಿದ್ದಾರೆ 55 ಸೆಂಚುರಿ, ಸಚಿನ್ ಬಾರಿಸಿದ ಶತಕ ಎಷ್ಟು?

ಇದನ್ನೂ ಓದಿ : Virat Kohli Vs Gautam Gambhir : ಹೊಟ್ಟೆಕಿಚ್ಚಿಗೆ ಮದ್ದೇ ಇಲ್ಲ; ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ ಗಂಭೀರ್ ಹೇಳಿದ್ದೇನು ಗೊತ್ತಾ?

ಭಾರತ ಪರ 6 ಏಕದಿನ ಪಂದ್ಯಗಳನ್ನೂ ಆಡಿರುವ ಶಾ, 189 ರನ್ ಗಳಿಸಿದ್ದು, ಆಡಿರುವ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು.2018ರಲ್ಲಿ ನ್ಯೂಜಿಲೆಂಡ್’ನಲ್ಲಿ ನಡೆದ ಐಸಿಸಿ ಅಂಡರ್-19 ವಿಶ್ವಕಪ್’ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ನಾಯಕರಾಗಿದ್ದ ಪೃಥ್ವಿ ಶಾ, ದೇಶೀಯ ಕ್ರಿಕೆಟ್’ನಲ್ಲಿ ಅಬ್ಬರಿಸಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.

Prithvi Shaw triple hundred: Prithvi Shaw, who scored 379 runs in the Ranji Trophy, is the Mumbai player who gave a strong message to BCCI.

Comments are closed.