R Samath Ranji century: ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ ಸಮರ್ಥ್

ಪೊರ್ವರಿಮ್ (ಗೋವಾ): ಕರ್ನಾಟಕ ತಂಡದ ಉಪನಾಯಕ ಆರ್.ಸಮರ್ಥ್ (R Samath Ranji century) ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ( Ranji Trophy 2022-23) ಹ್ಯಾಟ್ರಿಕ್ ಶತಕ ಸಾಧನೆ ಮಾಡಿದ್ದಾರೆ. ಆತಿಥೇಯ ಗೋವಾ ವಿರುದ್ಧ ಪೊರ್ವರಿಮ್’ನಲ್ಲಿ (Karnataka Vs Goa ranji match) ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ’ಸಿ’ ಗುಂಪಿನ ಮೂರನೇ ಲೀಗ್ ಪಂದ್ಯದಲ್ಲಿ ಸಮರ್ಥ್ ಆಕರ್ಷಕ ಶತಕ ದಾಖಲಿಸಿದರು. ಇದು ಈ ಸಾಲಿನ ರಣಜಿ ಟೂರ್ನಿಯಲ್ಲಿ ಸಮರ್ಥ್ ಬಾರಿಸಿದ ಸತತ 3ನೇ ಶತಕ. ಸರ್ವಿಸಸ್ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ನಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಆಕರ್ಷಕ 119 ರನ್ ಸಿಡಿಸಿದ್ದ ಸಮರ್ಥ್, ಚಿನ್ನಸ್ವಾಮಿ ಮೈದಾನದಲ್ಲೇ ನಡೆದ ಪಾಂಡಿಚೇರಿ ವಿರುದ್ಧದ ಪಂದ್ಯದಲ್ಲಿ 137 ರನ್ ಬಾರಿಸಿ ಮಿಂಚಿದ್ದರು.

ಇದೀಗ ಗೋವಾ ವಿರುದ್ಧವೂ ಸಮರ್ಥ್140 ರನ್’ಗಳೊಂದಿಗೆ ಅಬ್ಬರಿಸಿದ್ದು, ಆಡಿದ ಮೊದಲ ಮೂರೂ ಪಂದ್ಯಗಳಲ್ಲಿ ಶತಕಗಳೊಂದಿಗೆ ಮಿಂಚಿದ್ದಾರೆ. ಗೋವಾ ವಿರುದ್ಧದ ಸೆಂಚುರಿ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ಸಮರ್ಥ್ ಬಾರಿಸಿದ 13ನೇ ಶತಕ, ರಣಜಿ ಟ್ರೋಫಿಯಲ್ಲಿ 12ನೇ ಶತಕ. 2013ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದ ಸಮರ್ಥ್, ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಗೋವಾ ವಿರುದ್ಧದ ತಮ್ಮ ಶತಕದಾಟದ ವೇಳೆ ಆರ್.ಸಮರ್ಥ್ ರಣಜಿ ವೃತ್ತಿಜೀವನದಲ್ಲಿ 4 ಸಾವಿರ ರನ್’ಗಳ ಮೈಲುಗಲ್ಲು ನೆಟ್ಟರು. ತಮ್ಮ 58ನೇ ರಣಜಿ ಪಂದ್ಯದ 101ನೇ ಇನ್ನಿಂಗ್ಸ್’ನಲ್ಲಿ ಸಮರ್ಥ್ ಈ ಸಾಧನೆ ಮಾಡಿದರು.

ಗೋವಾ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಉಪನಾಯಕ ಸಮರ್ಥ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಮೊದಲ ವಿಕೆಟ್’ಗೆ 116 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮಯಾಂಕ್ 50 ರನ್ ಗಳಿಸಿ ಔಟಾದ ನಂತರ ಸಮರ್ಥ್ ಜೊತೆಗೂಡಿ ಯುವ ಬ್ಯಾಟ್ಸ್’ಮನ್ ವಿಶಾಲ್ ಓನಟ್ 2ನೇ ವಿಕೆಟ್’ಗೆ 143 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಸಮರ್ಥ್ 140 ರನ್ ಗಳಿಸಿ 75ನೇ ಓವರ್’ನಲ್ಲಿ ಅರ್ಜುನ್ ತೆಂಡೂಲ್ಕರ್’ಗೆ ವಿಕೆಟ್ ಒಪ್ಪಿಸಿದರು. ಪ್ರಥಮ ದಿನದಂತ್ಯಕ್ಕೆ ಕರ್ನಾಟಕ ತಂಡ 3 ವಿಕೆಟ್ ನಷ್ಟಕ್ಕೆ 294 ರನ್ ಗಳಿಸಿದ್ದು, ವಿಶಾಲ್ ಓನಟ್ ಅಜೇಯ 73 ರನ್ ಹಾಗೂ ಮಾಜಿ ನಾಯಕ ಮನೀಶ್ ಪಾಂಡೆ ಅಜೇಯ 8 ರನ್’ಗಳೊಂದಿಗೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : Avinash Singh: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಶ್ಮೀರದ ಆಟೋ ಚಾಲಕನ ಮಗ

ಇದನ್ನೂ ಓದಿ : David Warner double century: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಾರ್ನರ್ ದ್ವಿಶತಕ, ಸಚಿನ್ ದಾಖಲೆ ಸರಿಗಟ್ಟಿದ ಕ್ರಿಕೆಟ್ ಬಾಕ್ಸರ್

R Samath Ranji century Ranji Trophy 2022-23 Karnataka Vs Goa ranji match

Comments are closed.