ಸೋಮವಾರ, ಏಪ್ರಿಲ್ 28, 2025
HomeSportsCricketKL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು...

KL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು ಕೊಹ್ಲಿ ಟಿಪ್ಸ್

- Advertisement -


ಅಡಿಲೇಡ್: (KL Rahul back in form)ಟಿ20 ವಿಶ್ವಕಪ್’ನಲ್ಲಿ (T20 World cup 2022) ಸತತ ಮೂರು ಪಂದ್ಯಗಳಲ್ಲಿ ಸಿಂಗಲ್ ಡಿಜಿಟ್ ಸ್ಕೋರ್’ಗಳಿಗೆ ಔಟಾಗಿ ಭಾರೀ ಟೀಕೆಗಳನ್ನು ಎದುರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಕೊನೆಗೂ ಫಾರ್ಮ್ ಕಂಡುಕೊಂಡಿದ್ದಾರೆ.ಬಾಂಗ್ಲಾದೇಶ ವಿರುದ್ಧದ (India Vs Bangladesh) ಸೂಪರ್-12 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸುವ ಮೂಲಕ ರಾಹುಲ್, ಟೀಕಾಕಾರರಿಗೆ ಬ್ಯಾಟ್’ನಿಂದಲೇ ಉತ್ತರಿಸಿದ್ದಾರೆ.

(KL Rahul back in form)ಅಡಿಲೇಡ್ ಓವಲ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಟಾಸ್ ಸೋತ ಭಾರತ ಬ್ಯಾಟಿಂಗ್’ಗೆ ಇಳಿಯಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಆರಂಭದಲ್ಲಿ ರನ್ ಗಳಿಸಲು ತಿಣುಕಾಡಿದರು. ನಾಯಕ ರೋಹಿತ್ 8 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಔಟಾದ್ರೆ, ಆರಂಭದಲ್ಲಿ ನಿಧಾನಗತಿಯ ಆಟವಾಡಿದ ನಂತರ ಲಯ ಕಂಡುಕೊಂಡರು. ಮೂರು 4 ಅಮೋಘ ಸಿಕ್ಸರ್’ಗಳೊಂದಿಗೆ ಅಬ್ಬರಿಸಿದ ರಾಹುಲ್ 32 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು.

ಇದನ್ನೂ ಓದಿ:Provident Fund Facility : 10 ಕೋಟಿ ಉದ್ಯೋಗಿಗಳು ಇಪಿಎಫ್‌ಒ ವ್ಯಾಪ್ತಿಗೆ : ಸಚಿವ ಭೂಪೇಂದರ್ ಯಾದವ್

ಇದನ್ನೂ ಓದಿ:Top Selling : ಹಬ್ಬಗಳ ಋತುವಿನಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರವಾಹನಗಳು ಯಾವುದು ಗೊತ್ತಾ?

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ಸತತ 3 ಪಂದ್ಯಗಳಲ್ಲಿ ವಿಫಲರಾಗಿದ್ದರು. ಪಾಕಿಸ್ತಾನ ವಿರುದ್ಧ 4 ರನ್, ನೆದರ್ಲೆಂಡ್ಸ್ ವಿರುದ್ಧ 9 ರನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 9 ರನ್ನಿಗೆ ಔಟಾಗಿದ್ದರು. ಹೀಗಾಗಿ ಉಪನಾಯಕ ರಾಹುಲ್ ಅವರನ್ನು ಮುಂದಿನ ಪಂದ್ಯಗಳಲ್ಲಿ ಆಡುವ ಬಳಗದಿಂದ ಕೈಬಿಡಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ ರಾಹುಲ್ ಅವರನ್ನು ಆಡುವ ಬಳಗದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟ ಪಡಿಸಿದ್ದರು. ಇದೀಗ ತಂಡ ತಮ್ಮ ಮೇಲಿಟ್ಟ ನಂಬಿಕೆಯನ್ನು ರಾಹುಲ್ ಉಳಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಅಡಿಲೇಡ್ ಮೈದಾನದಲ್ಲಿ ನಡೆದ ನೆಟ್ ಪ್ರಾಕ್ಟೀಸ್ ವೇಳೆ ರಾಹುಲ್ ಅವರಿಗೆ ಕೊಹ್ಲಿ ಅತ್ಯಮೂಲ್ಯ ಸಲಹೆ-ಸೂಚನೆಗಳನ್ನು ನೀಡಿ ಕನ್ನಡಿಗನಿಗೆ ಆತ್ಮವಿಶ್ವಾಸ ತುಂಬಿದ್ದರು.

ಟಿ20 ವಿಶ್ವಕಪ್-2022: ಕೆ.ಎಲ್ ರಾಹುಲ್ ಸ್ಕೋರ್
04 Vs ಪಾಕಿಸ್ತಾನ
09 Vs ನೆದರ್ಲೆಂಡ್ಸ್
09 Vs ದಕ್ಷಿಣ ಆಫ್ರಿಕಾ
50 Vs ಬಾಂಗ್ಲಾದೇಶ

Rahul answers critics with scintillating half-century, Kohli tips for workout

RELATED ARTICLES

Most Popular