Ranji Trophy Karnataka : ತವರು ನೆಲದಲ್ಲಿ ಕರ್ನಾಟಕಕ್ಕೆ ಮತ್ತೊಂದು ಚಾನ್ಸ್, ಗೆಲುವಿನ ಖಾತೆ ತೆರೆಯುತ್ತಾ ಮಯಾಂಕ್ ಬಳಗ ?

ಬೆಂಗಳೂರು: 8 ಬಾರಿಯ ಚಾಂಪಿಯನ್ ಕರ್ನಾಟಕದ ತಂಡ ಮಂಗಳವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ (Ranji Trophy Karnataka)ರಣಜಿ ಟ್ರೋಫಿ (Ranji Trophy 2022-23) ಎಲೈಟ್ ‘ಸಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿದ್ದ ಸರ್ವಿಸಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟು 3 ಅಂಕ ಗಳಿಸಿದ್ದ ಕರ್ನಾಟಕ, ಪಾಂಡಿಚೇರಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್’ಗಳಲ್ಲಿ ವಿಫಲರಾಗಿರುವ ಕರ್ನಾಟಕ ತಂಡದ ಮಾಜಿ ನಾಯಕ ಮನೀಶ್ ಪಾಂಡೆಗೆ ಫಾರ್ಮ್ ಕಂಡುಕೊಳ್ಳಲು ಪಾಂಡಿಚೇರಿ ವಿರುದ್ಧದ ಪಂದ್ಯ ಉತ್ತಮ ಅವಕಾಶ.

ಉಳಿದಂತೆ ಸರ್ವಿಸಸ್ ವಿರುದ್ಧದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಶತಕ ಬಾರಿಸಿದ್ದ ಉಪನಾಯಕ ಆರ್.ಸಮರ್ಥ್, ಅರ್ಧಶತಕದೊಂದಿಗೆ ಮಿಂಚಿದ್ದ ನಾಯಕ ಮಯಾಂಕ್ ಅಗರ್ವಾಲ್, ಚೊಚ್ಚಲ ರಣಜಿ ಪಂದ್ಯದಲ್ಲೇ ಭರವಸೆ ಮೂಡಿಸಿರುವ ಯುವ ಬ್ಯಾಟ್ಸ್’ಮನ್’ಗಳಾದ ನಿಕಿನ್ ಜೋಸ್ ಮತ್ತು ವಿಶಾಲ್ ಓನಟ್, ನಾಲ್ಕು ವರ್ಷಗಳ ನಂತರ ರಣಜಿ ಟ್ರೋಫಿಯಲ್ಲಿ ಅರ್ಧಶತಕ ಗಳಿಸಿರುವ ವಿಕೆಟ್ ಕೀಪರ್ ಬಿ.ಆರ್ ಶರತ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ.

ಸರ್ವಿಸಸ್ ವಿರುದ್ಧ ಬೌಲಿಂಗ್’ನಲ್ಲಿ ಮಿಂಚಿದ್ದ ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್ ವಿಜಯಕ್ ಕುಮಾರ್, ರೋನಿತ್ ಮೋರೆ, ಸ್ಪಿನ್ನರ್’ಗಳಾದ ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್’ರನ್ನೊಳಗೊಂಡ ಕರ್ನಾಟಕದ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಪಾಂಡಿಚೇರಿ ತಂಡದಲ್ಲಿ ತಮಿಳುನಾಡಿನ ವಿಕೆಟ್ ಕೀಪರ್ ಅರುಣ್ ಕಾರ್ತಿಕ್, ಪರಾಸ್ ದೋಗ್ರಾರಂತಹ ಅನುಭವಿ ಆಟಗಾರರಿದ್ದಾರೆ.

ರಣಜಿ ಟ್ರೋಫಿ 2022-23: ಪಾಂಡಿಚೇರಿ ವಿರುದ್ದದ ಪಂದ್ಯಕ್ಕೆ ಕರ್ನಾಟಕದ ಸಂಭಾವ್ಯ ಪ್ಲೇಯಿಂಗ್ XI (Karnataka Ranji Team)
1.ಮಯಾಂಕ್ ಅಗರ್ವಾಲ್ (ನಾಯಕ), 2.ಆರ್.ಸಮರ್ಥ್ (ಉಪನಾಯಕ), 3.ನಿಕಿನ್ ಜೋಸ್, 4.ವಿಶಾಲ್ ಓನಟ್, 5.ಮನೀಶ್ ಪಾಂಡೆ, 6. ಬಿ.ಆರ್ ಶರತ್ (ವಿಕೆಟ್ ಕೀಪರ್), 7.ಶ್ರೇಯಸ್ ಗೋಪಾಲ್, 8.ಕೃಷ್ಣಪ್ಪ ಗೌತಮ್, 9.ರೋನಿತ್ ಮೋರೆ, 10.ವಿದ್ವತ್ ಕಾವೇರಪ್ಪ, 11.ವೈಶಾಖ್ ವಿಜಯ್ ಕುಮಾರ್.

ಕೋಚ್: ಪಿ.ವಿ ಶಶಿಕಾಂತ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ, ಫಿಸಿಯೊ: ಜಾಬಾ ಪ್ರಭು, ಸ್ಟ್ರೆಂತ್ & ಕಂಡಿಷನಿಂಗ್ ಕೋಚ್: ಕೆ.ಸಿ ಅವಿನಾಶ್, ಮ್ಯಾನೇಜರ್: ಎ.ರಮೇಶ್ ರಾವ್, ವೀಡಿಯೊ ಅನಾಲಿಸ್ಟ್: ರಾಜ್ ಕಿರೀಟ್ ಕಪಾಡಿಯಾ

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ರಣಜಿ ಟ್ರೋಫಿ 2022-23: ಕರ್ನಾಟಕ ತಂಡದ ವೇಳಾಪಟ್ಟಿ (Ranji Trophy Karnataka) :
ಡಿಸೆಂಬರ್ 13-16 Vs ಸರ್ವಿಸಸ್ (ಬೆಂಗಳೂರು, ಪಂದ್ಯ ಡ್ರಾ)
ಡಿಸೆಂಬರ್ 20-23 Vs ಪಾಂಡಿಚೇರಿ (ಬೆಂಗಳೂರು)
ಡಿಸೆಂಬರ್ 27-30 Vs ಗೋವಾ (ಪೊರ್ವರಿಮ್)
ಜನವರಿ 03-06 Vs ಛತ್ತೀಸ್’ಗಢ (ರಾಯ್ಪುರ)
ಜನವರಿ 10-13 Vs ರಾಜಸ್ಥಾನ (TBC)
ಜನವರಿ 17-20 Vs ಕೇರಳ (ತಿರುವನಂತಪುರಂ)
ಜನವರಿ 24-27 Vs ಜಾರ್ಖಂಡ್ (ರಾಂಚಿ)

ಇದನ್ನೂ ಓದಿ : FIFA World Cup Final : ಸ್ಪೆಷಲ್ ಸ್ಕ್ರೀನ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಮ್ಯಾಚ್ ವೀಕ್ಷಿಸಿದ ಟೀಮ್ ಇಂಡಿಯಾ ಆಟಗಾರರು

ಇದನ್ನೂ ಓದಿ : Karnataka Players IPL Auction 2023: ಐಪಿಎಲ್ ಹರಾಜು ಪಟ್ಟಿಯಲ್ಲಿರುವ ಕರ್ನಾಟಕ ಆಟಗಾರರ ಕಂಪ್ಲೀಟ್ ಲಿಸ್ಟ್

ಇದನ್ನೂ ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

Ranji Trophy Karnataka: Another chance for Karnataka at home, Mayank team opening the winning account?

Comments are closed.