Fruit Vs Fruit Juice : ಯಾವುದು ಬೆಸ್ಟ್‌? ತಾಜಾ ಹಣ್ಣುಗಳಾ ಅಥವಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌

ದೇಹವನ್ನು ಫಿಟ್‌ (Fit) ಆಗಿ ಇರಿಸಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ಡಯಟ್‌ನಲ್ಲಿ ಪ್ರತಿದಿನ ಯಾವುದಾದರೂ ಒಂದು ಹಣ್ಣುಗಳನ್ನು (Fruits) ತಿನ್ನುವುದು ಅಥವಾ ಜ್ಯೂಸ್‌ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಹಣ್ಣುಗಳು ರುಚಿಯಾಗಿಯೂ, ವಿಟಮಿನ್‌, ಮಿನರಲ್ಸ್‌ ಮತ್ತು ಆಂಟಿಒಕ್ಸಿಡೆಂಟ್‌ಗಳಿಂದ ಕೂಡಿದೆ. ಹಣ್ಣುಗಳನ್ನು ಹಾಗೆಯೇ ತಿನ್ನಬಹುದು ಅಥವಾ ಅವುಗಳಿಂದ ತಯಾರಿಸಿದ ಜ್ಯೂಸ್‌ಗಳನ್ನು ಕುಡಿಯಬಹುದು. ಆದರೆ ಯಾವುದು ನಮ್ಮ ದೇಹಕ್ಕೆ ಹೆಚ್ಚು ಪ್ರಯೋಜನಕಾರಿ (Fruit Vs Fruit Juice). ಅವೆರಡರ ನಡುವೆ ಆಯ್ಕೆ ಮಾಡುವಾಗ ಯಾವುದನ್ನು ಆರಿಸಿಕೊಳ್ಳುವುದು ಉತ್ತಮ? ಇಲ್ಲಿದೆ ಓದಿ.

ಹಣ್ಣುಗಳನ್ನು ಹಾಗೆಯೇ ತಿನ್ನುವುದರಿಂದ ಸಿಗುವ ಪ್ರಯೋಜನಗಳು:
ತಾಜಾ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಫೈಬರ್‌ ಅಂಶ ದೊರೆಯುತ್ತದೆ. ಅದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ. ಹಣ್ಣುಗಳ ಸೇವೆನೆಯಿಂದ ದೇಹಕ್ಕೆ ವಿಟಮಿನ್‌, ಆಂಟಿಒಕ್ಸಿಡೆಂಟ್‌ ಮತ್ತು ಮಿನರಲ್ಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತವೆ. ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳಲ್ಲಿ ಕಡಿಮೆ ಕ್ಯಾಲೋರಿ ಇರುತ್ತದೆ ಮತ್ತು ಫೈಬರ್‌ ಅಂಶ ಹೆಚ್ಚಿರುತ್ತದೆ. ಇದರಿಂದ ತ್ವರಿತವಾಗಿ ರಿಫ್ರೆಶ್‌ ಆಗಲು ಸಹಾಯ ಮಾಡುತ್ತದೆ. ಹಾಗಾಗಿ ಸಂಪೂರ್ಣ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ. ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಹಣ್ಣುಗಳಲ್ಲಿ ಸೇಬು, ಪೇರಳೆ, ಸಿಟ್ರಸ್ ಹಣ್ಣುಗಳು ಮತ್ತು ದ್ರಾಕ್ಷಿಗಳು ಸೇರಿವೆ.

ಇದನ್ನೂ ಓದಿ: Avoid Fruits In Cough : ನಿಮ್ಮ ಮಕ್ಕಳು ಅತಿಯಾಗಿ ಕೆಮ್ಮುತ್ತಿದ್ದರೆ ಈ ಹಣ್ಣುಗಳಿಂದ ದೂರವಿಡಿ

ಹಣ್ಣಿನಿಂದ ತಯಾರಿಸಿದ ಜ್ಯೂಸ್‌ನಿಂದ ನಿಜವಾಗಿಯೂ ಪ್ರಯೋಜನಗಳಿದೆಯೇ?
ಜ್ಯೂಸ್‌ ಅನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಹಣ್ಣುಗಳನ್ನು ಸೇರಿಸಿ ಜ್ಯೂಸ್‌ ತಯಾರಿಸಲಾಗುತ್ತದೆ. ರುಚಿ ಹೆಚ್ಚಿಸಲು ಅದರಲ್ಲಿ ಸಕ್ಕರೆ ಹಾಕಲಾಗುತ್ತದೆ. ಹಣ್ಣುಗಳಿಂದ ತಯಾರಿಸಿದ ಸಂಪೂರ್ಣವಾಗಿ ಫೈಬರ್‌ಗಳು ಕಂಡುಬರುವುದಿಲ್ಲ. ಸಕ್ಕರೆಯನ್ನು ಸೇರಿಸುವುದರಿಂದ ಕ್ಯಾಲೋರಿ ಅಧಿಕವಾಗಿರುತ್ತದೆ. ಅದರಲ್ಲೂ ಪ್ಯಾಕೇಜ್‌ ಮಾಡಿದ ಜ್ಯೂಸ್‌ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜ್ಯೂಸ್‌ ಆರೋಗ್ಯಕರ ಎಂದು ಕಂಡುಬಂದರೂ, ತೂಕ ಇಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಅನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಜ್ಯೂಸ್‌ ಕುಡಿಯುವುದು ಹೆಚ್ಚಿನ ಕ್ಯಾಲೋರಿ ಸೇವನೆಗೆ ಕಾರಣವಾಗಬಹುದು. ಇದು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುವ ಬದಲಿಗೆ ಅನಾನುಕೂಲವನ್ನುಂಟು ಮಾಡುತ್ತದೆ. ತಾಜಾ ಹಣ್ಣುಗಳನ್ನು ಹಾಗೆಯೇ ಸೇವಿಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಜ್ಯೂಸ್‌ ಕುಡಿಯಲೇಬೇಕೆಂದಿದ್ದರೆ ಮನೆಯಲ್ಲಿಯೇ ತಯಾರಿಸಿದ ಮತ್ತು ಸಕ್ಕರೆ ಸೇರಿಸದ ಜ್ಯೂಸ್‌ ಅನ್ನು ಆರಿಸಿಕೊಳ್ಳಬಹುದು.

ಇದನ್ನೂ ಓದಿ: Best Superfoods : ಯಾವಾಗಲೂ ಫಿಟ್‌ ಆಗಿರಲು ಈ ಸೂಪರ್‌ಫುಡ್‌ಗಳು ನಿಮಗೆ ಸಹಾಯ ಮಾಡುತ್ತವೆ; ತಪ್ಪದೇ ಇವುಗಳನ್ನು ಸೇವಿಸಿ

(Fruit Vs Fruit Juice, which is the best choice for good health)

Comments are closed.