ಜನವರಿ 31ರಿಂದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ಸ್ : ಮನೆಯಂಗಳದಲ್ಲಿ ಕರ್ನಾಟಕಕ್ಕೆ ಉತ್ತರಾಖಂಡ್ ಎದುರಾಳಿ

ಬೆಂಗಳೂರು: ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2022-23) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಈ ಬಾರಿ ಕ್ವಾರ್ಟರ್ ಫೈನಲ್’ನಲ್ಲಿ (Ranji Trophy quarter finals) ಉತ್ತರಾಖಂಡ್ ತಂಡವನ್ನು ಎದುರಿಸಲಿದೆ. ಎಲೈಟ್ ‘ಸಿ’ ಲೀಗ್ ಹಂತದಲ್ಲಿ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ತಂಡ 35 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು.

ಆಡಿದ 7 ಲೀಗ್ ಪಂದ್ಯಗಳಲ್ಲಿ 4 ಗೆಲುವು ಪಡೆದಿದ್ದ ಕರ್ನಾಟಕ, ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಸಂಪಾದಿಸಿತ್ತು. ಮತ್ತೊಂದೆಡೆ ಉತ್ತರಾಖಂಡ್ 29 ಅಂಕಗಳೊಂದಿಗೆ ಎಲೈಟ್ ‘ಎ’ ಹಂತದಲ್ಲಿ 2ನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಕರ್ನಾಟಕ ಮತ್ತು ಉತ್ತರಾಖಂಡ್ ನಡುವಿನ ಐದು ದಿನಗಳ ಕ್ವಾರ್ಟರ್ ಫೈನಲ್ ಹಣಾಹಣಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 31ರಂದು ಆರಂಭವಾಗಲಿದೆ.

ಎ ಗುಂಪಿನಿಂದ ಬಂಗಾಳ ಮತ್ತು ಉತ್ತರಾಖಂಡ್, ಬಿ ಗುಂಪಿನಿಂದ ಸೌರಾಷ್ಟ್ರ ಮತ್ತು ಆಂಧ್ರ, ಸಿ ಗುಂಪಿನಿಂದ ಕರ್ನಾಟಕ ಮತ್ತು ಜಾರ್ಖಂಡ್ ಹಾಗೂ ಡಿ ಗುಂಪಿನಿಂದ ಮಧ್ಯಪ್ರದೇಶ ಮತ್ತು ಪಂಜಾಬ್ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಅರ್ಹತೆ ಪಡೆದಿವೆ. ಕ್ವಾರ್ಟರ್ ಫೈನಲ್ ಪ್ರವೇಶಿಸಿದ 8 ತಂಡಗಳ ಪೈಕಿ ಲೀಗ್ ಹಂತದಲ್ಲಿ ಕರ್ನಾಟಕ ತಂಡ ಅತೀ ಹೆಚ್ಚು ಅಂಕ (35 ಅಂಕ) ಸಂಪಾದಿಸಿದೆ.

ಇದನ್ನೂ ಓದಿ : IND vs NZ T20 : ಇಂದಿನಿಂದ ಭಾರತ Vs ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ : Playing XI

ಕರ್ನಾಟಕದ ಕ್ವಾರ್ಟರ್ ಫೈನಲ್ ಹಾದಿ :

  • ಮ್ಯಾಚ್-1: ಸರ್ವಿಸಸ್ ವಿರುದ್ಧ ಡ್ರಾ, 3 ಪಾಯಿಂಟ್ಸ್
  • ಮ್ಯಾಚ್-2: ಪುಚೇರಿ ವಿರುದ್ಧ ಇನ್ನಿಂಗ್ಸ್, 7 ರನ್ ಗೆಲುವು; 7 ಪಾಯಿಂಟ್ಸ್
  • ಮ್ಯಾಚ್-3: ಗೋವಾ ವಿರುದ್ಧ ಡ್ರಾ, 3 ಪಾಯಿಂಟ್ಸ್
  • ಮ್ಯಾಚ್-4: ಛತ್ತೀಸ್’ಗಢ ವಿರುದ್ಧ 7 ವಿಕೆಟ್ ಗೆಲುವು, 6 ಪಾಯಿಂಟ್ಸ್
  • ಮ್ಯಾಚ್-5: ರಾಜಸ್ಥಾನ ವಿರುದ್ಧ 10 ವಿಕೆಟ್ ಗೆಲುವು, 7 ಪಾಯಿಂಟ್ಸ್
  • ಮ್ಯಾಚ್-6: ಕೇರಳ ವಿರುದ್ಧ ಡ್ರಾ, 3 ಪಾಯಿಂಟ್ಸ್
  • ಮ್ಯಾಚ್-7: ಜಾರ್ಖಂಡ್ ವಿರುದ್ಧ 9 ವಿಕೆಟ್ ಗೆಲುವು, 6 ಪಾಯಿಂಟ್ಸ್

ಇದನ್ನೂ ಓದಿ : ICC Women’s Under-19 World Cup: ಕಿವೀಸ್ ವಿರುದ್ಧ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ವನಿತೆಯರು

ಇದನ್ನೂ ಓದಿ : Let’s Get Married movie : ಧೋನಿ ಎಂಟರ್ಟೈನ್ಮೆಂಟ್ಸ್ ಮೊದಲ ತಮಿಳು ಸಿನಿಮಾಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್ ಫಿಕ್ಸ್

ಇದನ್ನೂ ಓದಿ : KL Rahul starts training : ಮದುವೆ ಬೆನ್ನಲ್ಲೇ ಟ್ರೈನಿಂಗ್ ಶುರು ಮಾಡಿದ ಕೆ.ಎಲ್ ರಾಹುಲ್, ಕಾಂಗರೂ ಸರಣಿಗೆ ಕನ್ನಡಿಗನ ಭರ್ಜರಿ ಸಿದ್ಧತೆ

Ranji Trophy quarter finals : Ranji Trophy quarter-finals from January 31: Uttarakhand to face Karnataka at home

Comments are closed.