Exclusive: RCB practice match: ಮಾರ್ಚ್ 26ಕ್ಕೆ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪ್ರಾಕ್ಟೀಸ್ ಮ್ಯಾಚ್, ಅಭಿಮಾನಿಗಳಿಗೆ ಫ್ರೀ ಎಂಟ್ರಿ

ಬೆಂಗಳೂರು: RCB practice match : “ಈ ಸಲ ಕಪ್ ನಮ್ದೇ” ಎಂಬ ಫೇಮಸ್ ಘೋಷಣೆಯ ಮಧ್ಯೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಸತತ 15 ವರ್ಷಗಳಿಂದ ಐಪಿಎಲ್’ನಲ್ಲಿ (IPL 2023) ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿದೆ.

15 ವರ್ಷಗಳ ವೈಫಲ್ಯಗಳ ನಂತರ ಐಪಿಎಲ್’ನಲ್ಲಿ ಮತ್ತೊಂದು ಹೊಸ ಋತು ಆರಂಭವಾಗಲು ಇನ್ನು 13 ದಿನಗಳಷ್ಟೇ ಬಾಕಿ. ಐಪಿಎಲ್-16 ಟೂರ್ನಿಗೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಏಪ್ರಿಲ್ 2ರಂದು ತನ್ನ ಅಭಿಯಾನ ಆರಂಭಿಸಲಿದೆ. ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್’ಸಿಬಿ ಪಡೆ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಆಟಗಾರರು ಮಾರ್ಚ್ 26ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (RCB practice match ಅಭ್ಯಾಸ ಪಂದ್ಯವಾಡಲಿದ್ದಾರೆ. ಅಂತರಾಷ್ಟ್ರೀಯ ಸರಣಿಯನ್ನಾಡುತ್ತಿರುವ ಆಟಗಾರರೆಲ್ಲಾ ಮಾರ್ಚ್ 25ರೊಳಗೆ ಆರ್’ಸಿಬಿ ಕ್ಯಾಂಪ್ ಸೇರುವ ನಿರೀಕ್ಷೆಯಿದ್ದು, ಸಂಪೂರ್ಣ ತಂಡ ಮಾರ್ಚ್ 26ರ ಅಭ್ಯಾಸ ಪಂದ್ಯದಲ್ಲಿ ಆಡಲಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ತಂಡದ ಅಭ್ಯಾಸ ಪಂದ್ಯಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಸತತ 15 ವರ್ಷಗಳಿಂದ ಆರ್’ಸಿಬಿ ಪ್ರಶಸ್ತಿ ಗೆಲ್ಲದಿದ್ದರೂ ತಂಡದ ಮೇಲೆ ಅಭಿಮಾನಿಗಳ ಪ್ರೀತಿ, ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಆರ್’ಸಿಬಿ ತಂಡ ಪಂದ್ಯವಾಡಿದಲ್ಲೆಲ್ಲಾ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ತಂಡವನ್ನು ಬೆಂಬಲಿಸುತ್ತಾ ಬಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್’ಸಿಬಿ ಪಂದ್ಯಗಳ ವೇಳಾಪಟ್ಟಿ
ಏಪ್ರಿಲ್ 2: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಮುಂಬೈ ಇಂಡಿಯನ್ಸ್ (ರಾತ್ರಿ 7.30ಕ್ಕೆ)
ಏಪ್ರಿಲ್ 10: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್ (ರಾತ್ರಿ 7.30ಕ್ಕೆ)
ಏಪ್ರಿಲ್ 15: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಡೆಲ್ಲಿ ಕ್ಯಾಪಿಟಲ್ಸ್ (ಮಧ್ಯಾಹ್ನ 3.30ಕ್ಕೆ)
ಏಪ್ರಿಲ್ 17: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಚೆನ್ನೈ ಸೂಪರ್ ಕಿಂಗ್ಸ್ (ರಾತ್ರಿ 7.30ಕ್ಕೆ)
ಏಪ್ರಿಲ್ 23: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ ರಾಯಲ್ಸ್ (ಮಧ್ಯಾಹ್ನ 3.30ಕ್ಕೆ)
ಏಪ್ರಿಲ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಕೋಲ್ಕತಾ ನೈಟ್ ರೈಡರ್ಸ್ (ರಾತ್ರಿ 7.30ಕ್ಕೆ)
ಮೇ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಗುಜರಾತ್ ಟೈಟನ್ಸ್ (ರಾತ್ರಿ 7.30ಕ್ಕೆ)

ಇದನ್ನೂ ಓದಿ : Yuvraj meets Rishabh Pant : ರಿಷಭ್ ಪಂತ್ ಭೇಟಿ ಮಾಡಿ ಧೈರ್ಯ ತುಂಬಿದ “ದಿ ಫೈಟರ್” ಯುವರಾಜ್ ಸಿಂಗ್

ಇದನ್ನೂ ಓದಿ : David Warner : ಮುಂಬೈನ ಬೀದಿಯಲ್ಲಿ ಕ್ಯಾಬ್ ಡ್ರೈವರ್ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಡೇವಿಡ್ ವಾರ್ನರ್, ಫೋಟೋ ವೈರಲ್

Comments are closed.