RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

ಬೆಂಗಳೂರು : ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli), ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ (Chris Gayle) ಮತ್ತು ಮಿಸ್ಟರ್ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್ (AB De Villiers). ಕ್ರಿಕೆಟ್ ಜಗತ್ತು ಕಂಡ (RCB Unbox) ತ್ರಿಮೂರ್ತಿಗಳು. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಈ ತ್ರಿಮೂರ್ತಿಗಳು ಒಟ್ಟಾಗಿ ಆಡುತ್ತಿದ್ದಾಗ ಅಭಿಮಾನಿಗಳ ಪಾಲಿಗೆ ಅದು ನಿಜಕ್ಕೂ ಹಬ್ಬ.

ತ್ರಿಮೂರ್ತಿಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈಗ ಉಳಿದಿರುವುದು ವಿರಾಟ್ ಕೊಹ್ಲಿ ಮಾತ್ರ. ಎಬಿ ಡಿ ವಿಲಿಯರ್ಸ್ ಕಳೆದ ವರ್ಷವೇ ಐಪಿಎಲ್’ಗೆ ವಿದಾಯ ಹೇಳಿದ್ರೆ, ಅದಕ್ಕೂ ಮೊದಲೇ ಕ್ರಿಸ್ ಗೇಲ್ ಅವರನ್ನು ಆರ್’ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಇದೀಗ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಮತ್ತೆ ಒಟ್ಟಾಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿ ಬಂದಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಮಾರ್ಚ್ 26) ಆರ್’ಸಿಬಿ ಅನ್’ಬಾಕ್ಸ್ (RCB Unbox) ಕಾರ್ಯಕ್ರಮ ನಡೆಯಲಿದ್ದು, ಕೊಹ್ಲಿ, ಎಬಿಡಿ ಮತ್ತು ಗೇಲ್ ಪಾಲ್ಗೊಳ್ಳಲಿದ್ದಾರೆ.

ಇದೇ ವೇಳೆ ಆರ್’ಸಿಬಿ ತಂಡದ ಮಾಜಿ ದಿಗ್ಗಜರಾದ ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ. ಇಬ್ಬರ ಜರ್ಸಿ ನಂಬರ್’ಗಳನ್ನು ರಿಟೈರ್ಡ್ ಮಾಡಿಸುವ ಮೂಲಕ ದಿಗ್ಗಜರಿಗೆ ಗೌರವ ಸಲ್ಲಿಸಲು ಆರ್’ಸಿಬಿ ಫ್ರಾಂಚೈಸಿ ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಪರ ಆಡುವ ಯಾವೊಬ್ಬ ಆಟಗಾರನೂ ಎಬಿಡಿ ಅವರ ಜರ್ಸಿ ನಂ.17 ಹಾಗೂ ಕ್ರಿಸ್ ಗೇಲ್ ಅವರ ಜರ್ಸಿ ನಂ.333 ಅನ್ನು ಧರಿಸುವಂತಿಲ್ಲ.

ಅನ್ ಬಾಕ್ಸ್ ಕಾರ್ಯಕ್ರಮದ ನಂತರ ರಾಯಲ್ ಚಾಲೆಂಜರ್ಸ್ ಆಟಗಾರರು ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವಾಡಲಿದ್ದಾರೆ. ಅಂತರಾಷ್ಟ್ರೀಯ ಸರಣಿಯನ್ನಾಡುತ್ತಿರುವ ಆಟಗಾರರೆಲ್ಲಾ ಶನಿವಾರವೇ ಆರ್’ಸಿಬಿ ಕ್ಯಾಂಪ್ ಸೇರುವ ನಿರೀಕ್ಷೆಯಿದ್ದು, ಸಂಪೂರ್ಣ ತಂಡ ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್’ವೆಲ್, ನಾಯಕ ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಸಹಿತ ಪ್ರಮುಖ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : IPL Injury : ಐಪಿಎಲ್ ಫ್ರಾಂಚೈಸಿಗಳಿಗೆ “ಇಂಜ್ಯುರಿ” ಶಾಕ್, ಯಾವೆಲ್ಲಾ ತಂಡಗಳಿಗೆ ತಟ್ಟಿದೆ ಗಾಯದ ಬಿಸಿ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Virat Kohli : ರಾಯಲ್ ಚಾಲೆಂಜರ್ಸ್ ಸೈನ್ಯ ಸೇರಲು ಮುಂಬೈನಿಂದ ಹೊರಟ ರಣಬೇಟೆಗಾರ

ಇದನ್ನೂ ಓದಿ : Women’s Premier League 2023: ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್; ಮುಂಬೈ ಇಂಡಿಯನ್ಸ್ Vs ಯು.ಪಿ ವಾರಿಯರ್ಸ್, ಯಾರಿಗೆ ಫೈನಲ್ ಟಿಕೆಟ್?

ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

RCB Unbox : Maha Sangam tomorrow at Chinnaswamy, King Kohli, Gayle, ABD will appear together again

Comments are closed.