RCB Vs CSK: ಚಿನ್ನಸ್ವಾಮಿಯಲ್ಲಿ ಧೋನಿ ಹವಾ, ಈ ಸಲ ಕಪ್ ನಮ್ದೇ ಅಂದ ಸಿಎಸ್‌ಕೆ; ಹಳದಿ+ಕೆಂಪು= ಇಂಡಿಯಾ ಅಂದ್ರು ಕಿಂಗ್ ಕೊಹ್ಲಿ

ಬೆಂಗಳೂರು: (RCB Vs CSK) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದು ಮತ್ತೊಮ್ಮೆ ಸಾಬೀತಾಯ್ತು.

ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಎಂ.ಎಸ್ ಧೋನಿ (MS Dhoni) ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ವಿರುದ್ಧ 8 ರನ್’ಗಳ ರೋಚಕ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್’ಕೆ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿದ್ರೆ, ಗುರಿ ಬೆನ್ನಟ್ಟಿದ ಆರ್’ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (62 ರನ್, 33 ಎಸೆತ, 5 ಬೌಂಡರಿ, 4 ಸಿಕ್ಸರ್) ಮತ್ತು ಗ್ಲೆನ್ ಮ್ಯಾಕ್ಸ್’ವೆಲ್ (76 ರನ್, 36 ಎಸೆತ, 3 ಬೌಂಡರಿ, 8 ಸಿಕ್ಸರ್) ಅವರ ಸಿಡಿಲಬ್ಬರದ ಆಟದ ಬಲದಿಂದ ಒಂದು ಹಂತದಲ್ಲಿ ಸುಲಭ ಜಯದತ್ತ ದಾಪುಗಾಲು ಹಾಕಿತ್ತು. ಆದರೆ ಇಬ್ಬರೂ ಔಟಾಗುತ್ತಿದ್ದಂತೆ ಗೆಲುವಿನ ಅವಕಾಶ ಕೈಚೆಲ್ಲಿದ ಆರ್’ಸಿಬಿ ಕೊನೆಯಲ್ಲಿ 20 ಓವರ್’ಗಳಲ್ಲಿ 8 ವಿಕೆಟ್’ಗೆ 218 ರನ್ ಗಳಿಸಿ 8 ರನ್’ಗಳಿಂದ ಸಿಎಸ್’ಕೆಗೆ ಶರಣಾಯಿತು.

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆದಾಗ ಆರ್’ಸಿಬಿ ಅಭಿಮಾನಿಗಳ ಅಬ್ಬರ ಸಹಜ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್’ಸಿಬಿ ಅಭಿಮಾನಿಗಳಿಗಿಂತಲೂ ಸಿಎಸ್’ಕೆ ಅಭಿಮಾನಿಗಳ ಅಬ್ಬರ ಜೋರಾಗಿತ್ತು. ಧೋನಿ ಮೇಲಿನ ಅಭಿಮಾನದಿಂದ ಬೆಂಗಳೂರಿನಲ್ಲಿರುವ ಸಿಎಸ್’ಕೆ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ತಮ್ಮ ನೆಚ್ಚಿನ ಆಟಗಾರನ ತಂಡವನ್ನು ಪ್ರೋತ್ಸಾಹಿಸಿದರು.

https://twitter.com/MSDevoteee/status/1648044587469123584?s=20

“ಈ ಸಲ ಕಪ್ ನಮ್ದೇ” ಅನ್ನೋದು ಆರ್’ಸಿಬಿ ತಂಡದ ಸ್ಲೋಗನ್. ಆದ್ರೆ ಆರ್’ಸಿಬಿ ವಿರುದ್ಧ ಪಂದ್ಯ ಗೆಲ್ಲುತ್ತಿದ್ದಂತೆ ಸಿಎಸ್’ಕೆ ಅಭಿಮಾನಿಗಳು “ಈ ಸಲ ಕಪ್ ನಮ್ದೇ” ಹಾಡು ಹಾಡುತ್ತಾ ಕ್ರೀಡಾಂಗಣದಿಂದ ನಿರ್ಗಮಿಸಿದರು.

ಆರ್’ಸಿಬಿ-ಸಿಎಸ್’ಕೆ ರೋಚಕ ಪಂದ್ಯಕ್ಕೆ ಖ್ಯಾತ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್’ಕುಮಾರ್, ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಸಾಕ್ಷಿಯಾಗಿದ್ದರು.

ಆರ್’ಸಿಬಿ ಮತ್ತು ಸಿಎಸ್’ಕೆ ನಡುವಿನ ಪಂದ್ಯದ ನಂತರ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಮಂಗಳವಾರ ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ. “ಕೆಂಪು + ಹಳದಿ ಬಣ್ಣದ ಲವ್ ಸಿಂಬಲ್= ಭಾರತದ ತ್ರಿವರ್ಣ ಧ್ವಜ” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದು, ಧೋನಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : Tilak Varma: ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಪಾರ್ಟಿ ಕೊಟ್ಟ ತಿಲಕ್ ವರ್ಮಾ, ಯುವ ಕ್ರಿಕೆಟಿಗನ ಮನೆಗೆ ಬಂದ ಕ್ರಿಕೆಟ್ ದೇವರು

RCB Vs CSK: Dhoni Hawa at Chinnaswamy, this time the cup is ours and CSK; Yellow + Red = India Andru King Kohli

Comments are closed.