Happy birthday KL Rahul: ಪತ್ನಿ ಆತಿಯಾ ಜೊತೆ ಹುಟ್ಟುಹಬ್ಬ ಆಚರಿಸಿದ ಕನ್ನಡಿಗ, ಬರ್ತ್ ಡೇ ಶುಭಾಶಯ ಹೇಳಿದ ಮುದ್ದಿನ ಮಾವ

ಜೈಪುರ: (Happy birthday KL Rahul) ಕನ್ನಡಿಗ ಕೆ.ಎಲ್ ರಾಹುಲ್ (KL Rahul birthday) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ 31ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಹುಲ್, ಪತ್ನಿ ಆತಿಯಾ ಶೆಟ್ಟಿ (Athiya Shetty) ಜೊತೆ ಜೈಪುರದ ಹೋಟೆಲ್’ನಲ್ಲಿ ಜನ್ಮದಿನವನ್ನು ಆಚರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ರಾಹುಲ್, ಕಳೆದ ಜನವರಿಯಲ್ಲಿ ಆತಿಯಾ ಶೆಟ್ಟಿಯವರನ್ನು ಮದುವೆಯಾಗಿದ್ದರು. ಮದುವೆಯ ನಂತರ ರಾಹುಲ್ ಅವರಿಗಿದು ಮೊದಲ ಹುಟ್ಟುಹಬ್ಬ. ಸೋಮವಾರ ಮಧ್ಯರಾತ್ರಿ 12 ಗಂಟೆಗೆ ಪತ್ನಿಯ ಜೊತೆ ಕೇಕ್ ಕತ್ತರಿಸಿದ ರಾಹುಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ರಾಹುಲ್ ಹುಟ್ಟುಹಬ್ಬಕ್ಕೆ ಹಲವಾರು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ. ರಾಹುಲ್’ಗೆ ಬರ್ತ್ ಡೇ (Happy birthday KL Rahul) ವಿಶ್ ಮಾಡಿರುವ ಭಾರತ ಮಹಿಳಾ ತಂಡದ ಮಾಡಿ ದಿಗ್ಗದ ಆಟಗಾರ್ತಿ ಜೂಲನ್ ಗೋಸ್ವಾಮಿ “ಅತ್ಯಂತ ಪ್ರತಿಭಾನ್ವಿತ ಆಟಗಾರರಲ್ಲಿ ಒಬ್ಬರಾಗಿರುವ ರಾಹುಲ್’ಗೆ ಹುಟ್ಟುಹಬ್ಬದ ಶುಭಾಶಯಗಳು. ನೀನು ನಿಜವಾದ ರೋಲ್ ಮಾಡೆಲ್” ಎಂದು ಜೂಲನ್ ಗೋಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ಹುಟ್ಟುಹಬ್ಬ(Happy birthday KL Rahul) ಕ್ಕೆ ಮಾವ ಸುನೀಲ್ ಶೆಟ್ಟಿ ಕೂಡ ಶುಭ ಹಾರೈಸಿದ್ದು, “ನಿನ್ನನ್ನು ನಮ್ಮ ಜೀವನದ ಭಾಗವಾಗಿ ಪಡೆದಿದ್ದಕ್ಕೆ ನಾವು ಅದೃಷ್ಟವಂತರು. ಹ್ಯಾಪಿ ಬರ್ತ್ ಡೇ ಬಾಬಾ” ಎಂದು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/CrJcYAzBYr7/?utm_source=ig_web_copy_link

ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ರಸಕ್ತ ಐಪಿಎಲ್’ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು ಹಾಗೂ 2 ಸೋಲು ಕಂಡಿದ್ದು 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರಂಭದ ನಾಲ್ಕು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದ ರಾಹುಲ್, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆಕರ್ಷ ಕ 74 ರನ್ ಗಳಿಸಿದ್ದರು. 5 ಪಂದ್ಯಗಳಿಂದ 155 ರನ್ ಕಲೆ ಹಾಕಿರುವ ರಾಹುಲ್, ಮುಂದಿನ ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿದ್ದಾರೆ. ಬುಧವಾರ ಜೈಪುರದ ಸವಾಯ್ ಮಾನ್’ಸಿಂಗ್ ಮೈದಾನದಲ್ಲಿ ನಡೆಯುವ ತನ್ನ 6ನೇ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Tilak Varma: ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಪಾರ್ಟಿ ಕೊಟ್ಟ ತಿಲಕ್ ವರ್ಮಾ, ಯುವ ಕ್ರಿಕೆಟಿಗನ ಮನೆಗೆ ಬಂದ ಕ್ರಿಕೆಟ್ ದೇವರು

Happy birthday KL Rahul: The Kannadigas who celebrated his birthday with his wife Athiya, his beloved father-in-law wished him a happy birthday.

Comments are closed.