RCB Women: ಸೋಲಿನೊಂದಿಗೆ ಅಂತ್ಯವಾಯ್ತು ಆರ್‌ಸಿಬಿ ವನಿತೆಯರ WPL ಅಭಿಯಾನ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Women) ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023) ಸೋಲಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಮುಂಬೈನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ತನ್ನ 8ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂಧನ ಸಾರಥ್ಯದ ರಾಯಲ್ ಚಾಲೆಂಜರ್ಸ್ ತಂಡ (RCB Women) , ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್’ಗಳ ಸೋಲು ಕಂಡಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್’ಸಿಬಿ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 16.3 ಓವರ್’ಗಳಲ್ಲಿ 6 ವಿಕೆಟ್ ಒಪ್ಪಿಸಿ 129 ರನ್ ಗಳಿಸಿ ಲೀಗ್’ನಲ್ಲಿ 6ನೇ ಗೆಲುವು ದಾಖಲಿಸಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಅಂಕ ಗಳಿಕೆ 12ಕ್ಕೇರಿತು.

ಸತತ ಐದು ಸೋಲುಗಳ ನಂತರ ಸತತ ಎರಡು ಗೆಲುವು ದಾಖಲಿಸಿದ್ದ ಆರ್’ಸಿಬಿ ಕೊನೆಯ ಪಂದ್ಯವನ್ನು ಸೋಲುವುದರೊಂದಿಗೆ ಆಡಿದ 8 ಪಂದ್ಯಗಳಲ್ಲಿ 6 ಸೋಲು ಕಂಡಂತಾಗಿದೆ. 2 ಗೆಲುವು ಕಂಡ ಆರ್’ಸಿಬಿ ಒಟ್ಟು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 8 ಪಂದ್ಯಗಳಲ್ಲಿ 2 ಗೆಲುವು, 6 ಸೋಲು ಕಂಡಿರುವ ಗುಜರಾತ್ ಜೈಂಟ್ಸ್, ರನ್’ರೇಟ್’ನಲ್ಲಿ ಆರ್’ಸಿಬಿಗಿಂತ ಹಿಂದಿರುವ ಕಾರಣ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

WPL-2023 ಟೂರ್ನಿಯಲ್ಲಿ ಆರ್’ಸಿಬಿ ಪಂದ್ಯಗಳ (RCB Women) ಫಲಿತಾಂಶ

ಮೊದಲ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ ಸೋಲು
2ನೇ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್ ಸೋಲು
3ನೇ ಪಂದ್ಯ: ಗುಜರಾತ್ ಜೈಂಟ್ಸ್ ವಿರುದ್ಧ 11 ರನ್ ಸೋಲು
4ನೇ ಪಂದ್ಯ: ಯು.ಪಿ ವಾರಿಯರ್ಸ್ ವಿರುದ್ಧ 10 ವಿಕೆಟ್ ಸೋಲು ಸೋಲು
5ನೇ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಸೋಲು
6ನೇ ಪಂದ್ಯ: ಯು.ಪಿ ವಾರಿಯರ್ಸ್ ವಿರುದ್ಧ 5 ವಿಕೆಟ್ ಗೆಲುವು
7ನೇ ಪಂದ್ಯ: ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್ ಗೆಲುವು
8ನೇ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಸೋಲು

ಇದನ್ನೂ ಓದಿ : Deandra Dottin : ಮಹಿಳಾ ಪ್ರೀಮಿಯರ್ ಲೀಗ್’ನ ದೊಡ್ಡ ಕಾಂಟ್ರವರ್ಸಿ, ಗುಜರಾತ್ ಜೈಂಟ್ಸ್ ವಿರುದ್ಧ ತಿರುಗಿ ಬಿದ್ದ ವಿಂಡೀಸ್ ಸ್ಟಾರ್

ಇದನ್ನೂ ಓದಿ : MS Dhoni: ಭಾರತ Vs ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲಿದ್ದಾರೆ ಎಂ.ಎಸ್‌ ಧೋನಿ

Comments are closed.