Mayank to Captain Karnataka : ಕರ್ನಾಟಕ ತಂಡಕ್ಕೆ ಮಯಾಂಕ್ ನಾಯಕ, ಕರುಣ್ ನಾಯರ್‌ಗಿಲ್ಲ ಸ್ಥಾನ

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, (Mayank to Captain Karnataka)ಮಯಾಂಕ್ ಅಗರ್ವಾಲ್ (Mayank Agarwal) ಅವರಿಗೆ ನಾಯಕ ಪಟ್ಟ ಕಟ್ಟಲಾಗಿದೆ. ಅನುಭವಿ ಬ್ಯಾಟ್ಸ್’ಮನ್ ಕರುಣ್ ನಾಯರ್ (Karun Nair) ಅವರನ್ನು ಕರ್ನಾಟಕ ಏಕದಿನ ತಂಡದಿಂದಲೂ ಕೈ ಬಿಡಲಾಗಿದೆ. ಇತ್ತೀಚೆಗಷ್ಟೇ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡಿದ ಕರ್ನಾಟಕ ತಂಡದಲ್ಲಿ ಕರುಣ್ ನಾಯರ್ ಸ್ಥಾನ ಪಡೆದಿರರಿಲ್ಲ. ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್’ನಲ್ಲಿ ಪಂಜಾಬ್ ವಿರುದ್ಧ ಸೋಲು ಕಂಡಿತ್ತು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೆ ಮಯಾಂಕ್ ಅಗರ್ವಾಲ್ ಅವರೇ ರಾಜ್ಯ ತಂಡವನ್ನು ಮುನ್ನಡೆಸಲಿದ್ದು, ಅನುಭವಿ ಓಪನರ್ ಆರ್.ಸಮರ್ಥ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ನಿಹಾಲ್ ಉಳ್ಳಾಲ್ ಇದೇ ಮೊದಲ ಬಾರಿ ಕರ್ನಾಟಕ ಸೀನಿಯರ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಷ್ತಾಕ್ ಅಲಿ ಟಿ20 ಟೂರ್ನಿಯ ವೇಳೆ ಗಾಯಗೊಂಡಿದ್ದ ಎಡಗೈ ಓಪನರ್ ದೇವದತ್ತ್ ಪಡಿಕ್ಕಲ್ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಅಲಭ್ಯರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಎಲೈಟ್ ‘ಬಿ’ ಗ್ರೂಪ್’ನಲ್ಲಿರುವ ಕರ್ನಾಟಕದ ಪಂದ್ಯಗಳು ನವೆಂಬರ್ 12ರಿಂದ 23ರವರೆಗೆ ಕೋಲ್ಕತಾದಲ್ಲಿ ನಡೆಯಲಿವೆ.

ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗೆ ಕರ್ನಾಟಕ ತಂಡ:
ಮಯಾಂಕ್ ಅಗರ್ವಾಲ್ (ನಾಯಕ), ಆರ್.ಸಮರ್ಥ್ (ಉಪನಾಯಕ), ಮನೀಶ್ ಪಾಂಡೆ, ಅಭಿನವ್ ಮನೋಹರ್, ನಿಕಿನ್ ಜೋಸ್, ಮನೋಜ್ ಭಾಂಡಗೆ, ಶರತ್ ಬಿ.ಆರ್ (ವಿಕೆಟ್ ಕೀಪರ್), ನಿಹಾಲ್ ಉಳ್ಳಾಲ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ವಿದ್ವತ್ ಕಾವೇರಪ್ಪ, ವಿ.ಕೌಶಿಕ್, ರೋನಿತ್ ಮೋರೆ, ವೆಂಕಟೇಶ್ ಎಂ.
ಕೋಚ್: ಪಿ.ವಿ ಶಶಿಕಾಂತ್, ಪೀಲ್ಡಿಂಗ್ ಕೋಚ್: ದೀಕಪ್ ಚೌಗುಲೆ.

ಇದನ್ನೂ ಓದಿ : Rohit Injured : ರೋಹಿತ್ ಶರ್ಮಾ ಬಲಗೈಗೆ ಗಾಯ, ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ!

ಇದನ್ನೂ ಓದಿ : Captain fails in T20 World Cup : ಟಿ20 ವಿಶ್ವಕಪ್ 2022 : ಸೆಮಿಫೈನಲ್‌ನಲ್ಲಿ ಆಡುತ್ತಿರುವ ನಾಲ್ಕೂ ತಂಡಗಳ ಕ್ಯಾಪ್ಟನ್‌ಗಳು ಫೇಲ್

ಇದನ್ನೂ ಓದಿ : Abu Dhabi T10 : ಅಬುಧಾಬಿ T10 ಟೂರ್ನಿಯಲ್ಲಿ ಆಡಲಿದ್ದಾರೆ ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಪಂದ್ಯಗಳು :

  • Vs ಮೇಘಾಲಯ, 12 ನವೆಂಬರ್ (ಕೋಲ್ಕತಾ)
  • Vs ವಿದರ್ಭ, 13 ನವೆಂಬರ್ (ಕೋಲ್ಕತಾ)
  • Vs ಜಾರ್ಖಂಡ್, 15 ನವೆಂಬರ್ (ಕೋಲ್ಕತಾ)
  • Vs ದೆಹಲಿ, 17 ನವೆಂಬರ್ (ಕೋಲ್ಕತಾ)
  • Vs ಅಸ್ಸಾಂ, 19 ನವೆಂಬರ್ (ಕೋಲ್ಕತಾ)
  • Vs ಸಿಕ್ಕಿಂ, 21 ನವೆಂಬರ್ (ಕೋಲ್ಕತಾ)
  • Vs ರಾಜಸ್ಥಾನ, 23 ನವೆಂಬರ್ (ಕೋಲ್ಕತಾ)

Mayank to Captain Karnataka :Mayank captain, Karun Nair no place for Karnataka team

Comments are closed.