ಸೋಮವಾರ, ಏಪ್ರಿಲ್ 28, 2025
HomeSportsCricketRishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ...

Rishabh Pant Birthday : ರಿಷಬ್‌ ಪಂತ್‌ಗೆ ಪ್ಲೈಯಿಂದ ಕಿಸ್‌ ಮೂಲಕ ಶುಭ ಕೋರಿದ ಊರ್ವಶಿ ರೌಟೇಲಾ

- Advertisement -

ಊರ್ವಶಿ ರೌಟೇಲಾ ಒಂದಿಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿದ್ದಾರೆ. ಈ ಹಿಂದೆ ರಿಷಬ್‌ ಪಂತ್‌ ವಿಚಾರದಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ನಟಿ ಊರ್ವಶಿ ರೌಟೇಲಾ (Urvashi Rautela ) ಇದೀಗ ಕ್ರಿಕೆಟಿಗ ರಿಷಬ್‌ ಪಂತ್‌ (Rishabh Pant Birthday ) ಹುಟ್ಟು ಹಬ್ಬಕ್ಕೆ ಪ್ಲೈಯಿಂಗ್‌ ಕಿಸ್‌ ನೀಡುವ ಮೂಲಕ ಶುಭಾಶಯ ಕೋರುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಊರ್ವಶಿ ರೌಟೆಲಾ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ.

ಇಂದು ಟೀಂ ಇಂಡಿಯಾದ ಆಟಗಾರ ರಿಷಬ್‌ ಪಂತ್‌ ಅವರಿಗೆ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಪಂತ್‌ಗೆ ಶುಭಾಶಯವನ್ನು ಕೋರುತ್ತಿದ್ದಾರೆ. ಆದ್ರೆ ಇದೀಗ ನಟಿ ಊರ್ವಶಿ ರೌಟೆಲಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೆಸರು ಹೇಳದೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಪ್ಲೈಯಿಂಗ್‌ ಕಿಸ್‌ ನೀಡುವ ಮೂಲಕ ಶುಭಾಶಯ ಕೋರಿದ್ದು, ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ ಊರ್ವಶಿ ಏನನ್ನೂ ಹೇಳದೆ, ಬದಲಾಗಿ ಹಾಡುಗಳನ್ನು ಆನಂದಿಸುತ್ತಾ ಪ್ಲೈಯಿಂಗ್‌ ಕಿಸ್‌ ನೀಡಿದ್ದಾರೆ.

ವೀಡಿಯೊದ ಶೀರ್ಷಿಕೆಯಲ್ಲಿ, ‘ಹುಟ್ಟುಹಬ್ಬದ ಶುಭಾಶಯಗಳು…’ ಎಂದು ಬರೆಯಲಾಗಿದೆ. ಆದರೆ ತಮ್ಮ ಪೋಸ್ಟ್‌ನಲ್ಲಿ ಊರ್ವಶಿ ರೌಟೆಲಾ ರಿಷಬ್‌ ಪಂತ್‌ ಹೆಸರನ್ನು ಬರೆದುಕೊಂಡಿಲ್ಲ, ಅಲ್ಲದೇ ಎಲ್ಲಿಯೂ ಪಂತ್‌ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಊರ್ವಶಿ ಮಾಡಿರುವ ಪೋಸ್ಟ್‌ನ್ನು ಅಭಿಮಾನಿಗಳು ಕ್ರಿಕೆಟಿಗ ರಿಷಬ್‌ ಪಂತ್‌ ಹುಟ್ಟುಹಬ್ಬಕ್ಕೆ ಲಿಂಕ್‌ ಮಾಡಿದ್ದಾರೆ.

ಇಂದು ಅಕ್ಟೋಬರ್ 4 ರಂದು ಕ್ರಿಕೆಟಿಗ ರಿಷಬ್ ಅವರ ಜನ್ಮದಿನ. ಊರ್ವಶಿ ಮತ್ತು ರಿಷಬ್‌ ಪಂತ್‌ ಅವರಿಗೆ ಲಿಂಕ್‌ ಇದೆ. ಈ ಹಿಂದೆ ಊರ್ವಶಿ ಹಾಗೂ ಪಂತ್‌ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ವಾರ್‌ ನಡೆದಿತ್ತು. ಸಂದರ್ಶನವೊಂದಲ್ಲಿ ಊರ್ವಶಿ ರೌಟೆಲಾ ರಿಷಬ್‌ ಪಂತ್‌ ಭೇಟಿಯಾಗಲು 10 ಗಂಟೆಗಳ ಕಾಲ ಕಾಯುತ್ತಿದ್ದರು ಎಂದು ಹೇಳಿಕೊಂಡಿದ್ದರು. ಊರ್ವಶಿಯ ಈ ಹೇಳಿಕೆ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು.

ಸಂದರ್ಶನದ ನಂತರ, ರಿಷಬ್ ಪಂತ್ ಅವರು ಹೆಸರು ಮತ್ತು ಖ್ಯಾತಿಗಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಊರ್ವಶಿಯನ್ನು ಗುರಿಯಾಗಿಸಿಕೊಂಡು ಇನ್ಸ್ಟಾವನ್ನು ಪೋಸ್ಟ್ ಮಾಡಿದ್ದಾರೆ. ರಿಷಬ್ ಈ ಪೋಸ್ಟ್‌ನೊಂದಿಗೆ ಹ್ಯಾಶ್‌ಟ್ಯಾಗ್ ನೀಡಿದ್ದರು- ನನ್ನನ್ನು ಅನುಸರಿಸಿ ಸಹೋದರಿ ಎಂದಿದ್ದರು. ಇದೀಗ ಊರ್ವಶಿ ರೌಟೆಲಾ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿರುವುದನ್ನು ಅಭಿಮಾನಿಗಳು ಪಂತ್‌ ಅವರಿಗೆ ಮಾಡಿದ್ದು ಎನ್ನುತ್ತಿದ್ದಾರೆ.

ಇದನ್ನೂ ಓದಿ : KL Rahul T20 cricket : 22 ಅರ್ಧಶತಕ, 19 ಗೆಲುವು, ಮೂರೇ ಸೋಲು, ಟಿ20 ಕ್ರಿಕೆಟ್‌ನಲ್ಲಿ ರಾಹುಲ್ ಕಮಾಲ್

ಇದನ್ನೂ ಓದಿ : AB de Villiers RCB : ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡುತ್ತೆನೆ ಎಂದ ಎಬಿ ಡಿವಿಲಿಯರ್ಸ್

Rishabh Pant Birthday: Urvashi Rautela flying kiss, see video

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular