Kodi Mutt Sri : ಹೃದಯ ಕಾಯಿಲೆ ಹೆಚ್ಚಲಿದೆ, ಕಾರ್ತಿಕ ಮಾಸದಲ್ಲಿ ಜಾಸ್ತಿ ತೊಂದರೆ : ಕೋಡಿ ಸ್ವಾಮೀಜಿ ಭವಿಷ್ಯ

ಧಾರವಾಡ : ಇನ್ನೇನೂ ಆಶ್ವಿಯುಜ ಮಾಸ ಮುಕ್ತಾಯದಿಂದ ಯುಗಾದಿ ಕೊನೆಯವರೆಗೂ ಅಂಗಾಂಗ ಕಾಯಿಲೆಗಳು ಹೆಚ್ಚಾಗುವುದರ ಜೊತೆಯಲ್ಲಿ ಹೃದಯ ಕಾಯಿಲೆಗಳು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದು (Kodi Mutt Sri prediction) ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿ ಸ್ವಾಮೀಜಿ (Kodi Mutt Sri) ಇನ್ನು ಮುಂದೆ, ಹೊರಗಡೆ ಹೋಗುವಾಗ ಕೈಯಲ್ಲಿ ಬಡಿಗೆ ಹಿಡಿದು ಹೋಗುವುದು ಒಳ್ಳೆಯದು. ಯಾಕೆಂದರೆ ಎಲ್ಲರಿಗೂ ರಕ್ಷಣೆಗೆ ಬೇಕಾಗುತ್ತದೆ. ಹಾಗೆ ನಾನು ಪ್ರಾರಂಭದಲ್ಲೇ ಮಳೆ, ಗಾಳಿ, ಗುಡುಗು ಇರುವುದರ ಬಗ್ಗೆ ಹೇಳಿದ್ದೇನೆ. ಬೆಂಕಿ ಅನಾಹುತ, ಮತಾಂಧತೆ ಹೆಚ್ಚಳ, ಸಾವು-ನೋವುಗಳಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲಾ ಎಲ್ಲೆಡೆ ಅಶಾಂತಿಯಿಂದ ಕೂಡಿರುತ್ತದೆ. ಭೂಮಿ ನಡುಗುತ್ತದೆ, ಭೂಕುಸಿತದ ಜೊತೆಗೆ ರೋಗ ಹೆಚ್ಚಾಗುತ್ತದೆ ಎಂದು ಕೂಡ ಹೇಳಿದ್ದೆ. ಅದೂ ಕೂಡ ಮುಂದುವರಿಯಲಿದೆ. ಜೊತೆಗೆ ಬಾರೀ ಮಳೆಯಾಗುವ ಲಕ್ಷಣ ಇದೆ ಎಂದಿದ್ದಾರೆ.

ಮುಂಬರುವ ಕಾರ್ತಿಕ ಮಾಸದಲ್ಲಿ ಹೆಚ್ಚು ತೊಂದರೆ ಆಗುವ ಲಕ್ಷಣಗಳು ಕೂಡ ಇದೆ. ಮಳೆಯಿಂದ ರೋಗದಿಂದ ಹಾಗೂ ಭೂಮಿಯಿಂದ ತೊಂದರೆಯಾಗುತ್ತದೆ. ಈ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತದೆ. ಈಗಲೂ ಕೂಡ ಅಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಭೂಮಿಯಲ್ಲಿ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಸಂಭವ ಕೂಡ ಇದೆ ಎಂದಿದ್ದಾರೆ.

https://www.youtube.com/watch?v=NFNEHDcLGC4&t=4s

ಇದನ್ನೂ ಓದಿ : Prime Minister Narendra Modi : ಕಠಿಣ ಉಪವಾಸ, ಹೇಗಿದೆ ಗೊತ್ತಾ ಪ್ರಧಾನಿ ನರೇಂದ್ರ ಮೋದಿ ಅವರ ನವರಾತ್ರಿ ಆಚರಣೆ

ಇದನ್ನೂ ಓದಿ : Mallikarjun Kharge : ಕಾಂಗ್ರೆಸ್‌ ಅಧ್ಯಕ್ಷರಾಗ್ತಾರೆ ಮಲ್ಲಿಕಾರ್ಜುನ್‌ ಖರ್ಗೆ : ಭವಿಷ್ಯ ನುಡಿದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ

ಇದನ್ನೂ ಓದಿ : CM Basavaraj Bommai : ಮತ್ತೆ ಸಂಪುಟ ವಿಸ್ತರಣೆ ಚರ್ಚೆ: ಪ್ರತ್ಯೇಕವಾಗಿ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ

ಭೂಮಿಯ ಮೇಲೆ ಅಲ್ಲೋಲ್ಲ ಕಲ್ಲೋಲ ಆಗಬಹುದು. ಈ ಸಮಸ್ಯೆ ಹೆಚ್ಚಾಗಿ ಈ ಸಂವತ್ಸರದ ಕೊನೆವರೆಗೂ ಇರುತ್ತದೆ. ಹಾಗೂ ಇದು ಜನರಿಗೆ ಅಚ್ಚರಿಯನ್ನು ಮೂಡಿಸುತ್ತದೆ ಎಂದು ಕೋಡಿ ಮಠದ ಶ್ರೀಗಳು ನುಡಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಕೋಡಿ ಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದು, ಅವರು ನುಡಿದಿರುವ ಸತ್ಯಕ್ಕೆ ಹತ್ತಿರವಾಗಿ ಇರುತ್ತಿತ್ತು.

Heart disease will increase, more trouble in the month of Kartika Kodi Mutt Sri prediction

Comments are closed.